ಕರ್ನಾಟಕ

karnataka

ETV Bharat / city

ಇನ್ಮುಂದೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಿಷೇಧ: ಮೇಯರ್ ಗೌತಮ್ ಕುಮಾರ್

ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

Kn_bng_01_Townhall_7202707
ಇನ್ಮುಂದೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಿಷೇಧ: ಮೇಯರ್ ಗೌತಮ್ ಕುಮಾರ್

By

Published : Feb 29, 2020, 9:09 PM IST

ಬೆಂಗಳೂರು: ಇಂದು ನಡೆದ ಕೌನ್ಸಿಲ್ ಸಭೆಯಲ್ಲಿ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸದಂತೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

ಇನ್ಮುಂದೆ ಟೌನ್ ಹಾಲ್ ಮುಂದೆ ಪ್ರತಿಭಟನೆ ನಿಷೇಧ: ಮೇಯರ್ ಗೌತಮ್ ಕುಮಾರ್

ಟೌನ್ ಹಾಲ್ ಪಾಲಿಕೆ ಕಟ್ಟಡವಾಗಿದ್ದು, ಅದರ ಮುಂದೆ ಪ್ರತಿಭಟನೆ ನಡೆಸಿ ಗದ್ದಲ ನಡೆಸುವುದರಿಂದ ಕಾರ್ಯಕ್ರಮ ನಡೆಸಲು ಅಡ್ಡಿಯಾಗುತ್ತದೆ. ಹೀಗಾಗಿ ಪ್ರತಿಭಟನೆ ನಡೆಸುವುವವರು ಫ್ರೀಡಂ ಪಾರ್ಕ್​ನಲ್ಲಿ ನಡೆಸಲಿ, ಟೌನ್ ಹಾಲ್ ಮುಂಭಾಗ ಬೇಡ. ಈ ಬಗ್ಗೆ ಪೊಲೀಸ್ ಆಯುಕ್ತರ ಜೊತೆಯೂ ಚರ್ಚೆ ನಡೆಸಿ ತೀರ್ಮಾನಕ್ಕೆ ಬರಲಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಿಳಿಸಿದರು.

ಆದರೆ ಪ್ರತಿಪಕ್ಷ ಕಾಂಗ್ರೆಸ್ ಇದನ್ನು ತೀವ್ರವಾಗಿ ಖಂಡಿಸಿದೆ. ಈ ಬಗ್ಗೆ ಮಾತನಾಡಿದ ಪ್ರತಿಪಕ್ಷ ನಾಯಕ ಅಬ್ದುಲ್ ವಾಜಿದ್, ಸಾರ್ವಜನಿಕರಿಗೆ ಪ್ರತಿಭಟನೆ ಮಾಡಲು ಸಾಂವಿಧಾನಿಕ ಹಕ್ಕಿದೆ. ಇಡೀ ದೇಶದಲ್ಲಿ ಸಿಎಎ, ಎನ್​ಆರ್​​ಸಿ ವಿರುದ್ಧ ಪ್ರತಿಭಟನೆ ಆಗುತ್ತಿದೆ. ಎಲ್ಲಾ ಸಮುದಾಯದ ಜನ ಏನೇ ಆದರೂ ಟೌನ್ ಹಾಲ್ ಬಳಿ ಬಂದು ಸರ್ಕಾರಕ್ಕೆ ನ್ಯಾಯ ಕೇಳುತ್ತಾರೆ. ಜನರ ಪ್ರತಿಭಟನೆ ಹಕ್ಕು ಕಸಿಯಲು ಯಾರಿಗೂ ಹಕ್ಕಿಲ್ಲ ಎಂದರು.


ABOUT THE AUTHOR

...view details