ಬೆಂಗಳೂರು: ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ನಿಧನದ ಹಿನ್ನೆಲೆ ಏಳು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಇರಲಿದೆ.
ಪ್ರಣಬ್ ಮುಖರ್ಜಿ ವಿಧಿವಶ: ರಾಜ್ಯದಲ್ಲೂ ಏಳು ದಿನ ಶೋಕಾಚರಣೆ - ಪ್ರಣಬ್ ಮುಖರ್ಜಿ ನಿಧನ
ಭಾರತ ರತ್ನ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ನಿಧನರಾದ ಹಿನ್ನೆಲೆ ರಾಜ್ಯಾದ್ಯಂತ ಆ. 31(ಇಂದಿನಿಂದ) ಸೆ.6ರ ವರೆಗೆ ಏಳು ದಿನಗಳ ಕಾಲ ಶೋಕಾಚರಣೆಯನ್ನು ರಾಜ್ಯ ಸರ್ಕಾರ ಘೋಷಿಸಿದೆ.
ವಿಧಾನಸೌಧ
ಮಾಜಿ ರಾಷ್ಟ್ರಪತಿಗಳ ಗೌರವಾರ್ಥವಾಗಿ ಆ.31ರಿಂದ ಸೆ.6ರ ವರೆಗೆ ಏಳು ದಿನಗಳ ಕಾಲ ರಾಜ್ಯಾದ್ಯಂತ ಶೋಕಾಚರಣೆ ಮಾಡಲಾಗುವುದು. ಈ ಅವಧಿಯಲ್ಲಿ ಸಾರ್ವಜನಿಕ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಏಳು ದಿನಗಳ ಕಾಲ ಸರ್ಕಾರಿ ಕಟ್ಟಡಗಳ ಮೇಲೆ ರಾಷ್ಟ್ರ ಧ್ವಜವನ್ನು ಅರ್ಧ ಮಟ್ಟದಲ್ಲಿ ಹಾರಿಸಲಾಗುತ್ತದೆ.