ಕರ್ನಾಟಕ

karnataka

ETV Bharat / city

ಫೋನ್ ಟ್ಯಾಪಿಂಗ್ ಪ್ರಕರಣ: ಅಲೋಕ್ ಕುಮಾರ್​ಗೆ ಮತ್ತೆ ಬುಲಾವ್ ನೀಡಿದ ಸಿಬಿಐ

ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಸಿಬಿಐ

By

Published : Nov 7, 2019, 6:42 PM IST

Updated : Nov 7, 2019, 8:14 PM IST

ಬೆಂಗಳೂರು: ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸಿಬಿಐ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದಾರೆ.

ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಹಿರಿಯ ಪೊಲೀಸ್​ ಅಧಿಕಾರಿ ಅಲೋಕ್ ಕುಮಾರ್ ಅವರನ್ನು ಸಿಬಿಐ ಅಧಿಕಾರಿಗಳು ಮತ್ತೆ ವಿಚಾರಣೆಗೆ ಹಾಜರಾಗುವಂತೆ ಬುಲಾವ್ ನೀಡಿದ್ದಾರೆ. ಅಲೋಕ್ ಕುಮಾರ್ ಅವರ ಸೂಚನೆಯಂತೆ ಫೋನ್ ಟ್ಯಾಪ್​ ಮಾಡಲಾಗಿತ್ತು ಎಂಬ ಆರೋಪ ಕೇಳಿ ಬಂದ ಹಿನ್ನೆಲೆ ಸಿಬಿಐ ತನಿಖೆ ನಡೆಸಿದ್ದು, ಅಲೋಕ್ ಕುಮಾರ್ ಮನೆ, ಕಚೇರಿ ಮೇಲೆ ದಾಳಿ ಮಾಡಿ ನಂತ್ರ ವಿಚಾರಣೆ ಕೂಡ ನಡೆಸಿದ್ದರು.

ಇನ್ಸ್​ಪೆಕ್ಟರ್, ಎಸಿಪಿಗಳ ಹೇಳಿಕೆ ಆಧಾರದ‌ ಮೇಲೆ ಮತ್ತೆ ಸಿಬಿಐ ಅಧಿಕಾರಿಗಳು ಅಲೋಕ್ ಕುಮಾರ್ ಅವರನ್ನು ವಿಚಾರಣೆಗೆ ಕರೆದಿದ್ದಾರೆ.

ಪ್ರಕರಣದ ಹಿನ್ನೆಲೆ:

ಭಾಸ್ಕರ್ ರಾವ್ ಅವರು ನಗರ ಪೊಲೀಸ್‌ ಆಯುಕ್ತರಾಗಲು ಲಾಬಿ ನಡೆಸಿದ್ದಾರೆಂಬ ಆಡಿಯೋ ವೈರಲ್ ಆಗಿತ್ತು. ನಂತ್ರ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದ್ದು, ಸಿಸಿಬಿ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಅವರು ತನಿಖೆ ನಡೆಸಿದಾಗ ಹಿರಿಯ ಪೊಲೀಸ್ ಅಧಿಕಾರಿಗಳು ಈ ಪ್ರಕರಣದಲ್ಲಿ ಭಾಗಿಯಾಗಿರುವ ಹಿನ್ನೆಲೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿರಾಜು ಅವರಿಗೆ ಮಾಹಿತಿ ರವಾನೆ ಮಾಡಲಾಗಿತ್ತು. ನಂತ್ರ ಪ್ರಕರಣ ಗಂಭೀರವಾದ ಕಾರಣ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದೆ. ಈ ವೇಳೆ ಆಡಳಿತ ಹಾಗು ವಿರೋಧ ಪಕ್ಷದ ರಾಜಕಾರಣಿಗಳು ಹಾಗು ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ಆಗಿರುವ ವಿಚಾರ ಬಯಲಿಗೆ ಬಂದಿತ್ತು.

Last Updated : Nov 7, 2019, 8:14 PM IST

ABOUT THE AUTHOR

...view details