ಕರ್ನಾಟಕ

karnataka

ETV Bharat / city

ಸಿಬಿಐ ಅಧಿಕಾರಿಗಳ ಕಾರ್ಯಾಚರಣೆ: ಲಂಚ ಸ್ವೀಕರಿಸುತ್ತಿದ್ದ PESO ಅಧಿಕಾರಿ ಅರೆಸ್ಟ್​​​ - PESO official arrested by CBI

ಲಂಚ ಸ್ವೀಕರಿಸುತ್ತಿದ್ದ PESO ಅಧಿಕಾರಿಯನ್ನ ರೆಡ್ ಹ್ಯಾಂಡ್ ಆಗಿ ಸಿಬಿಐ ಅಧಿಕಾರಿಗಳು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.‌ ಈತನ ಜೊತೆಗೆ ಲಂಚ ನೀಡಿದ ವ್ಯಕ್ತಿಯನ್ನೂ ಬಂಧಿಸಲಾಗಿದ್ದು, ಇಬ್ಬರೂ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಸಿಬಿಐ

By

Published : Sep 25, 2019, 3:26 AM IST

ಬೆಂಗಳೂರು: ಸಿಬಿಐ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ, ಲಂಚ ಸ್ವೀಕರಿಸುತ್ತಿದ್ದ PESO ಅಧಿಕಾರಿಯನ್ನ ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.‌

PESO(ಪೆಟ್ರೋಲಿಯಂ ಅಂಡ್​ ಎಕ್ಸ್​ಪ್ಲೋಸಿವ್ ಸೇಫ್ಟಿ ಆರ್ಗನೈಸೇಷನ್​) ಡೆಪ್ಯುಟಿ ಚೀಫ್ ಕಂಟ್ರೋಲರ್, ಎಸ್.ಎಂ.ಮನ್ನನ್ ಮತ್ತು ಸಾಂಘ್ವಿ ಸಿಲಿಂಡರ್ಸ್ ಸಿಬ್ಬಂದಿ ರಿಶಬ್ ದೇಸಾಯಿ ಬಂಧಿತ ಆರೋಪಿಗಳು.

ಮನ್ನನ್ 50 ಸಾವಿರ ರೂ. ಲಂಚವನ್ನು ರಿಶಬ್ ದೇಸಾಯಿಯಿಂದ ಕಂಪನಿ ಲೈಸನ್ಸ್ ವಿಚಾರವಾಗಿ ಸ್ವೀಕರಿಸುತ್ತಿದ್ದ. 50 ಸಾವಿರ ಲಂಚ ಸ್ವೀಕಾರ ಮಾಡುತ್ತಿದ್ದ ವಿಚಾರ ಸಿಬಿಐ ಅಧಿಕಾರಿಗಳು ಬಾತ್ಮೀದಾರರಿಂದ ತಿಳಿದು ದಾಳಿ‌ ನಡೆಸಿದ್ದಾರೆ. ಅಲ್ಲದೆ‌ ಮನ್ನನ್​ಗೆ ಸೇರಿದ್ದ ಮನೆ‌ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ ಅಧಿಕಾರಿಗಳು, ಸುಮಾರು 16 ಲಕ್ಷ ರೂ. ನಗದು ಜೊತೆಗೆ ಕೆಲ‌ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಸದ್ಯ ಇಬ್ಬರೂ ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ.

ABOUT THE AUTHOR

...view details