ಬೆಂಗಳೂರು: ಲೋಕಸೇವಾ ಆಯೋಗ 2020ನೇ ಸಾಲಿನ ಪ್ರಥಮ ಇಲಾಖಾ ಪರೀಕ್ಷೆಗೆ ಮೇಲಧಿಕಾರಿಯಿಂದ ನಿರಪೇಕ್ಷಣಾ ಪತ್ರ (ಎನ್ಒಸಿ) ಪಡೆಯುವ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
ಇಲಾಖಾ ಪರೀಕ್ಷೆಗೆ ಮೇಲಧಿಕಾರಿಯಿಂದ ನಿರಪೇಕ್ಷಣಾ ಪತ್ರ ಬೇಡ: ಕೆಪಿಎಸ್ಸಿ ಆದೇಶ
ಲೋಕಸೇವಾ ಆಯೋಗ 2020ನೇ ಸಾಲಿನ ಪ್ರಥಮ ಇಲಾಖಾ ಪರೀಕ್ಷೆಗೆ ಮೇಲಧಿಕಾರಿಯಿಂದ ನಿರಪೇಕ್ಷಣಾ ಪತ್ರ (ಎನ್ಒಸಿ) ಪಡೆಯುವ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.
2020ನೇ ಸಾಲಿನ ಪ್ರಥಮ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಡಿಸೆಂಬರ್ 2019ರ ಅಧಿಸೂಚನೆಯಲ್ಲಿ ನೌಕರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ತಮ್ಮ ಕಚೇರಿಯ ಮೇಲಾಧಿಕಾರಿಯಿಂದ ಎನ್ಒಸಿ ಪಡೆಯುವುದು, ಮೇಲಾಧಿಕಾರಿಯಿಂದ ಲಿಖಿತ ಅನುಮತಿ ಪಡೆದು ಆನ್‌ಲೈನ್ ಅರ್ಜಿಯೊಂದಿಗೆ ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿತ್ತು. ಇದೀಗ ಲೋಕಸೇವಾ ಆಯೋಗ ಈ ನಿಯಮವನ್ನು ಸಡಿಲಗೊಳಿಸಿದೆ.
ಇಲಾಖಾ ಪರೀಕ್ಷಾರ್ಥಿ ನೌಕರರು, ಮೇಲಾಧಿಕಾರಿಯಿಂದ ಎನ್ಒಸಿ ಹಾಗೂ ಲಿಖಿತ ಅನುಮತಿ ಪತ್ರ ಪಡೆಯುವುದನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಹೀಗಾಗಿ ಪರೀಕ್ಷಾರ್ಥಿಗಳು ಅರ್ಜಿ ಸಲ್ಲಿಸುವಾಗ ತಮ್ಮ ಇಲಾಖೆಯ ಮೇಲಾಧಿಕಾರಿಗಳ ಅನುಮತಿ ಪಡೆಯುವ ಅಗತ್ಯವಿಲ್ಲ.