ಬೆಂಗಳೂರು:ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರನ್ನು ವಿಚಾರಣೆ ನಡೆಸಲಾಗುತ್ತಿದ್ದು, ಎನ್ಐಎಗೆ ತನಿಖೆ ವಹಿಸಲು ಪತ್ರ ಬರೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಆರೋಪ ಮೇರೆಗೆ ಅಖ್ತರ್ ಹುಸೇನ್ ಹಾಗೂ ಅಬ್ದುಲ್ ಮಂಡಲ್ನನ್ನು ಸಿಸಿಬಿ ಪೊಲೀಸರು ಕ್ರಮವಾಗಿ ತಿಲಕ್ ನಗರ ಹಾಗೂ ತಮಿಳುನಾಡಿನ ಸೇಲಂನಲ್ಲಿ ಇತ್ತೀಚೆಗೆ ಬಂಧಿಸಿದ್ದರು.
ಶಂಕಿತ ಉಗ್ರರ ಬಂಧನ ಪ್ರಕರಣ: ಎನ್ಐಎಗೆ ಪತ್ರ ಬರೆದಿಲ್ಲ- ಕಮಿಷನರ್ ಸ್ಪಷ್ಟನೆ - ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಶಂಕಿತ ಉಗ್ರ ಸದ್ಯ ಪೊಲೀಸ್ ಕಸ್ಟಡಿಯಲ್ಲಿದ್ದು ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಎನ್ಐಎಗೆ ಪತ್ರ ಬರೆದಿದ್ದೇವೆ ಎನ್ನುವುದು ಊಹಾಪೋಹ ಎಂದು ಕಮಿಷನರ್ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ
ಸದ್ಯ ಶಂಕಿತ ಉಗ್ರರ ಪ್ರಕರಣವನ್ನು ನಾವೇ ತನಿಖೆ ನಡೆಸುತ್ತಿದ್ದೇವೆ. ಈಗ ಪೊಲೀಸ್ ಕಷ್ಟಡಿಯಲ್ಲಿರುವುದರಿಂದ ಯಾವ ಮಾಹಿತಿ ಕೂಡ ನೀಡಲು ಸಾಧ್ಯವಿಲ್ಲ. ಎನ್ಐಎಗೆ ಪತ್ರ ಬರೆದಿದ್ದೇವೆ ಎಂಬುದು ಊಹಾಪೋಹ. ಕಸ್ಟಡಿ ಮುಗಿದ ಮೇಲೆ ನ್ಯಾಯಾಲಯಕ್ಕೆ ಹಾಜರುಪಡಿಸುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಭಯೋತ್ಪಾದಕ ಸಂಘಟನೆ ಆಲ್ ಖೈದಾ ಜೊತೆ ನಂಟು: ಅಸ್ಸಾಂನಲ್ಲಿ 11 ಮಂದಿ ಬಂಧನ