ಕರ್ನಾಟಕ

karnataka

ETV Bharat / city

ನೀವು ಗೂಗಲ್ ಪೇ ಬಳಸುವ ಮುನ್ನ ಈ ಸುದ್ದಿ ಓದಿ... ಯಾಕಂದ್ರೆ? - ಗೂಗಲ್ ಪೇ ಮೋಸ

ಫೇಸ್​ಬುಕ್​ನಲ್ಲಿ ಯಾವುದಾದರು ವಸ್ತು ಕುರಿತು ಪೋಸ್ಟ್ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಸಿಲಿಕಾನ್ ಸಿಟಿಗೆ ಹೊಸದೊಂದು ವಂಚನೆ ಜಾಲ ಕಾಲಿಟ್ಟಿದೆ. ಈ ವಂಚಕರು ಗೂಗಲ್ ಪೇ ಬಳಸುವ ಮೊಬೈಲ್ ಗ್ರಾಹಕರಿಗೆ ಡೆಬಿಟ್, ಕ್ರೆಡಿಟ್‌ ಕಾರ್ಡ್, ಓಟಿಪಿ ನಂಬರ್ ಕೇಳಿ ವಂಚನೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.

ಗೂಗಲ್ ಪ್ಲೇ
ಗೂಗಲ್ ಪ್ಲೇ

By

Published : Dec 8, 2019, 3:43 PM IST

ಬೆಂಗಳೂರು: ಫೇಸ್​ಬುಕ್​ನಲ್ಲಿ ಯಾವುದಾದರು ವಸ್ತು ಕುರಿತು ಪೋಸ್ಟ್ ಮಾಡುವ ಮುನ್ನ ಬಹಳ ಎಚ್ಚರಿಕೆಯಿಂದ ಇರಬೇಕು. ಯಾಕಂದ್ರೆ ಸಿಲಿಕಾನ್ ಸಿಟಿಗೆ ವಂಚನೆ ಜಾಲ ಎಂಟ್ರಿ ಕೊಟ್ಟಿದ್ದು, ಗೂಗಲ್ ಪೇ ಬಳಸುವ ಮೊಬೈಲ್ ಗ್ರಾಹಕರನ್ನೇ ಟಾರ್ಗೆಟ್​ ಮಾಡಿದೆ. ಈ ವಂಚಕರು ಡೆಬಿಟ್, ಕ್ರೆಡಿಟ್‌ ಕಾರ್ಡ್, ಓಟಿಪಿ ನಂಬರ್ ಕೇಳಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಅಶೋಕ್ ನಗರದ ನಿವಾಸಿ ಪುನೀತ್ ಎಂಬುವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ‌ ಬೈಕ್ ಮಾರಾಟ ಇರುವುದಾಗಿ ಪೋಸ್ಟ್ ಹಾಕಿ ಮೊಬೈಲ್ ನಂಬರ್ ಹಾಕಿದ್ದರು. ಈ ವೇಳೆ ಕರೆ ಮಾಡಿದ್ದ ಆರೋಪಿ ವಿಕಾಸ್ ಪಟೇಲ್​ ಎಂಬ ವ್ಯಕ್ತಿ ತಾನು ಸೇನೆಯಲ್ಲಿ ಕೆಲಸ ಮಾಡುತ್ತಿದ್ದು, ದೇವನಹಳ್ಳಿ ಬಳಿ ವಾಸ ಮಾಡುತ್ತಿದ್ದೇನೆ. ನಿಮ್ಮ ಬೈಕ್ ಖರೀದಿಸುತ್ತೇನೆ ಎಂದು ಹೇಳಿ ಗೂಗಲ್ ಪೇ ಮೂಲಕ ಕ್ಯೂ ಆರ್ ಕೋಡ್ ಕಳುಹಿಸಿ ಕೊಟ್ಟಿದ್ದಾರೆ.

ಈ ವೇಳೆ ಅದನ್ನ ಪುನೀತ್ ಸ್ಕ್ಯಾನ್ ಮಾಡಿದಾಗ ಹಣ ಬರುವ ಬದಲು ಪುನೀತ್ ಅವರ ಅಕೌಂಟ್ ನಿಂದ ಹಣ ಆರೋಪಿಗೆ ಡೆಬಿಟ್ ಆಗಿದೆ. ಇನ್ನು ಪುನೀತ್ ತಕ್ಷಣ ಬ್ಯಾಂಕ್​ಗೆ ಹೋಗಿ ನೋಡಿದಾಗ ಆತನ ನಿಜವಾದ ಹೆಸರು ಪರಂ‌ಜಿತ್ ಸಿಂಗ್ ಎಂದು ಗೊತ್ತಾಗಿದೆ. ಅಲ್ಲದೆ, ಆತ ಮೋಸ ಮಾಡಿರುವ ವಿಚಾರ ತಿಳಿದು ಬಂದಿದೆ. ತಕ್ಷಣ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪುನೀತ್​ ದೂರು ದಾಖಲಿಸಿದ್ದಾರೆ.

ಇನ್ನು, ಪೊಲೀಸರ ತನಿಖೆ ವೇಳೆ ಸಿಲಿಕಾನ್ ಸಿಟಿಯಲ್ಲಿ ಈ ಕೃತ್ಯ ಮಾಡುವಂತಹ ಗ್ಯಾಂಗ್ ನಗರದಲ್ಲಿ ಬೀಡು ಬಿಟ್ಟಿದ್ದು, ಬಹಳ ಮಂದಿಗೆ ಆನ್​ಲೈನ್ ವಂಚನೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯಕ್ಕೆ ಪೊಲೀಸರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ಮುಂದುವರೆಸಿದ್ದಾರೆ.

ABOUT THE AUTHOR

...view details