ಬೆಂಗಳೂರು: ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಜೆಡಿಎಸ್ ಮುಖಂಡನ ಮಗನ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಬಳಿ ನಡೆದಿದೆ.
ರಸ್ತೆ ಅಪಘಾತ: ಜೆಡಿಎಸ್ ಮುಖಂಡನ ಮಗನ ಮೇಲೆ ಹರಿದ ಬಸ್ - ಬೆಂಗಳೂರು ರಸ್ತೆ ಅಪಘಾತ ನ್ಯೂಸ್
ಟೋಲ್ನಲ್ಲಿ ಕೆಲಸ ಮಾಡುತ್ತಿದ್ದ ಜೆಡಿಎಸ್ ಮುಖಂಡನ ಮಗನ ಮೇಲೆ ಬಸ್ ಹರಿದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಪೀಣ್ಯ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯ ಟೋಲ್ ಬಳಿ ನಡೆದಿದೆ.
ರಸ್ತೆ ಅಪಘಾತ
ನೆಲಮಂಗಲ ಜೆಡಿಎಸ್ ಮುಖಂಡ ರಮೇಶ್ ಅವರ ಪುತ್ರ ದರ್ಶನ್ ಸಾವನ್ನಪ್ಪಿರುವವನು. ಎಂದಿನಂತೆ ಟೋಲ್ನಲ್ಲಿ ಕೆಲಸ ನಿರ್ವಹಿಸುತಿದ್ದ. ಈ ವೇಳೆ ಉಡುಪಿಗೆ ಹೋಗುವ ಸುಗಮ ಟ್ರಾವೆಲ್ಸ್ ಬಸ್ ರಭಸವಾಗಿ ಬಂದಿದ್ದು, ಕೆಲಸ ನಿರ್ವಹಿಸುತ್ತಿದ್ದ ದರ್ಶನ್ ಮೇಲೆ ಹರಿದಿದೆ. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ವಿಚಾರ ತಿಳಿದು ಪೀಣ್ಯ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ ಬಸ್ ಚಾಲಕನನ್ನು ಪೀಣ್ಯ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮೃತ ದರ್ಶನ್ ದೇಹವನ್ನು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
Last Updated : Jan 23, 2020, 12:05 PM IST