ಬೆಂಗಳೂರು:ನಿನ್ನೆ ಸಂಜೆ ತರಾತುರಿಯಲ್ಲಿ ಆಗಮಿಸಿ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಅತೃಪ್ತ ಶಾಸಕರು ಇಂದು ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿದರು.
ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಶಾಸಕರು ಶಾಸಕರಾದ ಬಿಸಿ ಪಾಟೀಲ್, ಬೈರತಿ ಬಸವರಾಜು, ಶಿವರಾಮ್ ಹೆಬ್ಬಾರ್ ಹಾಗೂ ಎಸ್ ಟಿ ಸೋಮಶೇಖರ್ ಮುಂಬೈನ ಸಿದ್ದಿ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ದೇವರ ದರ್ಶನ ಪಡೆದು ನಂತರ ಊಟಕ್ಕೆ ತೆರಳಿದರು.
ಕಾಂಗ್ರೆಸ್ ನಾಯಕರು ಸಂಪರ್ಕಿಸುವ ಭೀತಿ ಹಿನ್ನೆಲೆ ಮುಂಬೈನಿಂದ ಕಾಂಗ್ರೆಸ್ ಶಾಸಕರು ಗೋವಾಗೆ ಸ್ಥಳಾಂತರಗೊಂಡಿದ್ದಾರೆ ಎಂಬ ಮಾಹಿತಿಯಿದ್ದು, ಇಂದು ಬೆಂಗಳೂರಿನಿಂದ ಆನಂದ್ ಸಿಂಗ್ ಗೋವಾದತ್ತ ಪ್ರಯಾಣ ಬೆಳೆಸಿದ್ದಾರೆ. ಗೋವಾದಲ್ಲಿ ಇವರ ಗೆಸ್ಟ್ ಹೌಸ್ ಇರುವ ಕಾರಣ ಅಲ್ಲಿಯೇ ಇರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿರುವ ಅತೃಪ್ತ ಶಾಸಕರು ಇನ್ನೊಂದೆಡೆ ರಾಜ್ಯದ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಶಾಸಕರು ಒಂದೊಂದು ರೆಸಾರ್ಟ್ ಹೋಟೆಲ್ಗಳನ್ನು ಸೇರಿಕೊಂಡಿದ್ದಾರೆ. ಸರ್ಕಾರ ಅತಂತ್ರ ಸ್ಥಿತಿಗೆ ತಲುಪಿರುವ ಸಂದರ್ಭದಲ್ಲಿ ಶಾಸಕರು ಮತ್ತೊಮ್ಮೆ ಹೋಟೆಲ್ ವಾಸ ಆರಂಭಿಸಿರುವುದು ಗಮನ ಸೆಳೆಯುತ್ತಿದೆ.