ಕರ್ನಾಟಕ

karnataka

ETV Bharat / city

ಸಚಿವ ಸುನಿಲ್ ಕುಮಾರ್ ಕರೆಗೆ ಉತ್ತಮ‌ ಸ್ಪಂದನೆ: ಹೂಗುಚ್ಛ ಬದಲು ಕಾಣಿಕೆಯಾಗಿ ಬಂದ ನೂರಾರು ಪುಸ್ತಕಗಳು - kannada books

ಬೊಕ್ಕೆ, ಹಾರ ತುರಾಯಿ ಬದಲು ಕನ್ನಡ ಪುಸ್ತಕ ನೀಡಲು ಕರೆ ನೀಡಿದ್ದ ಇಂಧನ ಸಚಿವ ಸುನಿಲ್ ಕುಮಾರ್ ಅವರಿಗೆ 600ಕ್ಕೂ ಹೆಚ್ಚು ಪುಸ್ತಕಗಳು ಕಾಣಿಕೆಯಾಗಿ ಬಂದಿವೆ.

Minister sunil kumar receives hundreds of books instead of flowers
ಹೂಗುಚ್ಛ ಬದಲು ಸಚಿವ ಸುನಿಲ್ ಕುಮಾರ್​​ಗೆ ಕಾಣಿಕೆಯಾಗಿ ಬಂದ ನೂರಾರು ಪುಸ್ತಕಗಳು

By

Published : Aug 14, 2021, 1:20 PM IST

Updated : Aug 14, 2021, 1:28 PM IST

ಬೆಂಗಳೂರು:ಹೂಗುಚ್ಛಗಳನ್ನು ನೀಡಬೇಡಿ, ಪುಸ್ತಕಗಳನ್ನು ಕೊಡಿ ಎಂದಿದ್ದ ಇಂಧನ ಸಚಿವ ಸುನಿಲ್ ಕುಮಾರ್ ಕರೆಗೆ ಉತ್ತಮ‌ ಸ್ಪಂದನೆ ಸಿಕ್ಕಿದೆ. ಅದರ ಫಲವಾಗಿ ಇದೀಗ ನೂರಾರು ಪುಸ್ತಕಗಳು ಅವರ ಕಚೇರಿಯಲ್ಲಿ ಸಂಗ್ರಹವಾಗಿವೆ.

ಹೂಗುಚ್ಛದ ಬದಲು ಸಚಿವ ಸುನಿಲ್ ಕುಮಾರ್​​ಗೆ ಕಾಣಿಕೆಯಾಗಿ ಬಂದ ನೂರಾರು ಪುಸ್ತಕಗಳು

ನೂತನವಾಗಿ ಸಚಿವ ಸ್ಥಾನ ಸ್ವೀಕರಿಸಿದ ಸುನಿಲ್‌ ಕುಮಾರ್, ತನಗೆ ಯಾರೂ ಹೂಗುಚ್ಛ, ಬೊಕ್ಕೆಗಳನ್ನು ಕೊಡಬೇಡಿ. ಅದರ ಬದಲು ಕನ್ನಡ ಪುಸ್ತಕಗಳನ್ನು ನೀಡಿ ಎಂದು ಕೋರಿದ್ದರು. ಸುನಿಲ್ ಕುಮಾರ್ ಕರೆಗೆ ಹಿತೈಷಿಗಳಿಂದ ಉತ್ತಮ ಸ್ಪಂದನೆ ಸಿಕ್ಕಿದ್ದು, ನೂರಾರು ಕನ್ನಡ ಪುಸ್ತಕಗಳನ್ನು ಅವರಿಗೆ ಕೊಡುಗೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಸಭೆ-ಸಮಾರಂಭಗಳಲ್ಲಿ ಕಾಣಿಕೆ ಬದಲು ಕನ್ನಡ ಪುಸ್ತಕಗಳ ಬಳಕೆ : ಮುಖ್ಯ ಆಯುಕ್ತರಿಂದ ಸುತ್ತೋಲೆ

ಬೊಕ್ಕೆ, ಹಾರ ತುರಾಯಿ ಬದಲು 600ಕ್ಕೂ ಹೆಚ್ಚು ಪುಸ್ತಕಗಳನ್ನು ಅವರ ಬೆಂಬಲಿಗರು, ಕಾರ್ಯಕರ್ತರು, ಅಭಿಮಾನಿಗಳು ನೀಡಿದ್ದಾರೆ. ಕಳೆದ ಒಂದು ವಾರದಿಂದ ವಿವಿಧ ಕಾದಂಬರಿ, ಡಿಕ್ಷನರಿ, ಪ್ರಬಂಧ ಸಂಕಲನಗಳ ಪುಸ್ತಕಗಳು ಸಚಿವರ ಕಚೇರಿಗೆ ಸೇರುತ್ತಿವೆ. ಈ ಪುಸ್ತಕಗಳನ್ನೆಲ್ಲ ಗ್ರಾಮೀಣ ಭಾಗದ ಗ್ರಂಥಾಲಯಕ್ಕೆ ನೀಡಲು ಸಚಿವ ಸುನಿಲ್ ಕುಮಾರ್ ನಿರ್ಧರಿಸಿದ್ದಾರೆ. ಬಂದಿರುವ ಪುಸ್ತಕಗಳನ್ನು ವಿಂಗಡಿಸಿ ಕಾರ್ಕಳದ ಗ್ರಂಥಾಯಲಯಕ್ಕೆ ನೀಡಲು ಮುಂದಾಗಿದ್ದಾರೆ.

Last Updated : Aug 14, 2021, 1:28 PM IST

ABOUT THE AUTHOR

...view details