ಕರ್ನಾಟಕ

karnataka

ETV Bharat / city

ಕೋವಿಡ್ ಸಾವಿಗೆ ಕಾಂಗ್ರೆಸ್ ನೇರ ಕಾರಣ ; ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಆರೋಪ - ಸಚಿವ ಡಾ.ಕೆ.ಸುಧಾಕರ್‌

ವಿಶ್ವವೇ ಭಾರತದ ಕೋವಿಡ್ ನಿರ್ವಹಣೆಯ ಬಗ್ಗೆ ಶ್ಲಾಘಿಸಿದೆ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಬಗ್ಗೆಯೂ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಕಾಂಗ್ರೆಸ್ ಸದಸ್ಯರಿಗೆ ಉತ್ತರ ಕೇಳುವ ಬದ್ಧತೆ ಇಲ್ಲ, ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಅವರಿಗೆ ಕಾಳಜಿ ಇದ್ದಿದ್ದರೆ, ಸರ್ಕಾರದ ಉತ್ತರ ಕೇಳುತ್ತಿದ್ದರು..

Minister Dr.K Sudhakar talking in Assembly Session
ಕೋವಿಡ್ ಸಾವಿಗೆ ಕಾಂಗ್ರೆಸ್ ನೇರ ಕಾರಣ; ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಆರೋಪ

By

Published : Sep 24, 2021, 3:55 PM IST

Updated : Sep 24, 2021, 4:13 PM IST

ಬೆಂಗಳೂರು :ಕೋವಿಡ್ ಸಾವುಗಳಿಗೆ ನೇರ ಕಾರಣ ಕಾಂಗ್ರೆಸ್. ಅವರ ದುರಾಡಳಿತದಿಂದಲೇ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ‌ ಸುಧಾಕರ್ ವಿಧಾನಸಭೆ ಕಲಾಪದಲ್ಲಿ ಆರೋಪಿಸಿದರು.

ಕೋವಿಡ್ ಸಾವಿಗೆ ಕಾಂಗ್ರೆಸ್ ನೇರ ಕಾರಣ ; ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಆರೋಪ

ಕೋವಿಡ್ ನಿರ್ವಹಣೆ, ಸಾವು ಹಾಗೂ ಪರಿಹಾರ ಮೇಲಿನ ಚರ್ಚೆಗೆ ಆಗ್ರಹಿಸಿ ಕಾಂಗ್ರೆಸ್ ಸದನದ ಬಾಗಿಳಿದು ಧರಣಿ ನಡೆಸುತ್ತಿದ್ದ ಮಧ್ಯೆಯೇ ಉತ್ತರಿಸಿದ ಸುಧಾಕರ್, ಕಾಂಗ್ರೆಸ್‌ಗೆ ಕೋವಿಡ್ ಬಗ್ಗೆ ಯಾವುದೇ ಚಿಂತೆ, ಬದ್ಧತೆ ಇರಲಿಲ್ಲ.‌ ಕೇವಲ ರಾಜಕೀಯ ಪ್ರದರ್ಶನ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಸಕ್ಷಮವಾಗಿದೆ. ಸರಿಯಾಗಿ ಮಾಡಿದ್ದೇವೆ ಎಂದು ತಿಳಿಸಿದರು.

ವಿಶ್ವವೇ ಭಾರತದ ಕೋವಿಡ್ ನಿರ್ವಹಣೆಯ ಬಗ್ಗೆ ಶ್ಲಾಘಿಸಿದೆ. ರಾಜ್ಯ ಸರ್ಕಾರ ಕೋವಿಡ್ ನಿರ್ವಹಣೆ ಬಗ್ಗೆಯೂ ದೇಶಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ. ಕಾಂಗ್ರೆಸ್ ಸದಸ್ಯರಿಗೆ ಉತ್ತರ ಕೇಳುವ ಬದ್ಧತೆ ಇಲ್ಲ, ಹಿಟ್ ಅಂಡ್ ರನ್ ಮಾಡುತ್ತಿದ್ದಾರೆ. ಅವರಿಗೆ ಕಾಳಜಿ ಇದ್ದಿದ್ದರೆ, ಸರ್ಕಾರದ ಉತ್ತರ ಕೇಳುತ್ತಿದ್ದರು ಎಂದು ಟೀಕಿಸಿದರು.

60 ವರ್ಷದ ಕಾಂಗ್ರೆಸ್ ಆಡಳಿತದಲ್ಲಿ ಕೇವಲ 725 ಐಸಿಯು ಇತ್ತು. ನಾವು ಕೇವಲ 1 ವರ್ಷದಲ್ಲಿ 3,000ಕ್ಕೂ ಅಧಿಕ ಐಸಿಯು ವ್ಯವಸ್ಥೆ ಮಾಡಿದ್ದೇವೆ. ಅವರು ಈವರೆಗೆ ನಮ್ಮ ಆಡಳಿತ ಮಾದರಿಯ ಆಡಳಿತ ನಡೆಸಲು ಸಾಧ್ಯವಾಗಿಲ್ಲ.

ಅವರ 60 ವರ್ಷದ ಆಡಳಿತದಲ್ಲಿ ಆರೋಗ್ಯ ವ್ಯವಸ್ಥೆಯಲ್ಲಿ ಸುಧಾರಣೆ ತಂದಿಲ್ಲ ಎಂದು ಟೀಕಿಸಿ, ಅಂಕಿ-ಅಂಶ ಸಮೇತವಾಗಿ ತಮ್ಮ ಉತ್ತರದ ಪ್ರತಿಯನ್ನು ಸದನದ ಮುಂದೆ ಮಂಡನೆ ಮಾಡಿದರು.

Last Updated : Sep 24, 2021, 4:13 PM IST

ABOUT THE AUTHOR

...view details