ಕರ್ನಾಟಕ

karnataka

ETV Bharat / city

ಯಾರೇ ಮಾಡಿದರೂ ತಪ್ಪು ತಪ್ಪೇ: ಡಿ.ಕೆ. ಶಿವಕುಮಾರ್ - ಪಿಎಸ್​ಐ ಹಗರಣದ ಬಗ್ಗೆ ಡಿ.ಕೆ ಶಿವಕುಮಾರ್ ಹೇಳಿಕೆ

ಪಿಎಸ್​ಐ ನೇಮಕಾತಿ ಅಕ್ರಮ ಕುರಿತಂತೆ ಮಾತನಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್​, ಯಾರೇ ತಪ್ಪು ಮಾಡಿದರೂ ಅದು ತಪ್ಪೇ ಎಂದಿದ್ದಾರೆ.

dk shivakumar
ಡಿ.ಕೆ. ಶಿವಕುಮಾರ್

By

Published : Apr 30, 2022, 6:04 PM IST

ಬೆಂಗಳೂರು:ತಪ್ಪು ಯಾರೇ ಮಾಡಲಿ, ಅದು ತಪ್ಪೇ. ನಾವು ತಪ್ಪು ಮಾಡಿದ್ದರೆ ನೀವು ಅದನ್ನೇ ಪಾಲಿಸುತ್ತೀರಾ? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರದ ಅವಧಿಯಲ್ಲಿ ಕೆಎಎಸ್ ನೇಮಕಾತಿ ಅಕ್ರಮದ ಸಂದರ್ಭದಲ್ಲಿ ಪರೀಕ್ಷೆ ರದ್ದು ಮಾಡಿದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಪ್ರತಿಕ್ರಿಯಿಸಿದರು.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 2011 ರ ಪರೀಕ್ಷೆ ವಿಚಾರದಲ್ಲಿ ನ್ಯಾಯಾಲಯದ ಆದೇಶ, ಹಲವು ಚರ್ಚೆಯ ಬಳಿಕ ಸಂಪುಟದಲ್ಲಿ ವಿಷಯ ಪ್ರಸ್ತಾಪವಾಗಿತ್ತು. ಅದಕ್ಕೆ ಸಂಬಂಧಿಸಿದಂತೆ ವರದಿಗಳೂ ಬಂದಿದ್ದವು. ಇದೆಲ್ಲದರ ಆಧಾರದ ಮೇಲೆ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಆ ತೀರ್ಮಾನ ಕೈಗೊಳ್ಳಲಾಗಿತ್ತು. ಈಗ ಯಾವ ವರದಿ ಇದೆ. ಪರೀಕ್ಷೆಯನ್ನು ವಜಾ ಮಾಡಿ, ಮರು ಪರೀಕ್ಷೆಗೆ ಆದೇಶಿಸುತ್ತಿದ್ದೀರಿ? ಮೊದಲು ಅಕ್ರಮದಲ್ಲಿರುವ ದೋಷಿಗಳು ಯಾರು ಎಂಬುದನ್ನು ಬಹಿರಂಗಪಡಿಸಿ ಎಂದು ಆಗ್ರಹಿಸಿದರು.

ಹಿಂದಿ ಮಾತನಾಡದವರು ವಿದೇಶಕ್ಕೆ ಹೋಗಿ ಎಂದ ಉತ್ತರಪ್ರದೇಶ ಬಿಜೆಪಿ ನಾಯಕನ ಹೇಳಿಕೆಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಪ್ರಧಾನಮಂತ್ರಿಗಳು ಮಾತನಾಡಲಿ. ಭಾರತ ಹಾಗೂ ಅದರ ಪರಂಪರೆ ತಿಳಿಯದ ಜೋಕರ್​ಗಳು ನೀಡುವ ಹೇಳಿಕೆಗಳಿಗೆ ನಾನು ಉತ್ತರಿಸಲ್ಲ. ನೋಟಿನಲ್ಲಿ 15 ಪ್ರಾದೇಶಿಕ ಭಾಷೆಗಳನ್ನು ಮುದ್ರಿಸಲಾಗಿದೆ. ಅದರಲ್ಲಿ ಕನ್ನಡವೂ ಇದೆ. ಉತ್ತರಪ್ರದೇಶವೇ ಭಾರತವಲ್ಲ, ಅದು ಭಾರತದ ಒಂದು ಭಾಗ ಅಷ್ಟೇ ಎಂಬುದನ್ನು ಅರಿಯಲಿ ಎಂದರು.

ಹುಬ್ಬಳ್ಳಿಯಲ್ಲಿ ಫುಡ್ ಕಿಟ್ ಹಂಚಿಕೆ ವಿಚಾರವಾಗಿ ಕೇಳಿದ ಪ್ರಶ್ನೆಗೆ, ಕಾನೂನು ಕೈಗೆತ್ತಿಕೊಳ್ಳುವವರನ್ನು ಕಾಂಗ್ರೆಸ್ ಎಂದಿಗೂ ಬೆಂಬಲಿಸುವುದಿಲ್ಲ. ಇದರಲ್ಲಿ ನಮ್ಮ ಪಾತ್ರವಿಲ್ಲ. ಈ ವಿಚಾರವಾಗಿ ನನ್ನ ಅಭಿಪ್ರಾಯವನ್ನು ನಿನ್ನೆಯೇ ಟ್ವೀಟ್ ಮೂಲಕ ತಿಳಿಸಿದ್ದೇನೆ. ನಾವು ಸಂವಿಧಾನ, ಕಾನೂನು ರಕ್ಷಣೆಗೆ ಬದ್ಧವಾಗಿದ್ದೇವೆ. ಇದರಲ್ಲಿ ಕಾಂಗ್ರೆಸ್​ನವರು ಭಾಗಿಯಾದ್ದರೆ ನಾನು ಅವರನ್ನು ಪಕ್ಷದಿಂದ ವಜಾಗೊಳಿಸುತ್ತೇನೆ ಎಂದು ಖಡಕ್​ ಎಚ್ಚರಿಕೆ ರವಾನಿಸಿದರು.

ಓದಿ:ಕಳ್ಳತನದ ಆರೋಪ: ವಾಚ್​​ಮ್ಯಾನ್​ಗೆ ತಲೆಕೆಳಗಾಗಿ ಮರಕ್ಕೆ ಕಟ್ಟಿ ಥಳಿಸಿದ ಗ್ರಾಮಸ್ಥರು

ABOUT THE AUTHOR

...view details