ಕರ್ನಾಟಕ

karnataka

ETV Bharat / city

ರೈಲ್ವೆ ಇ-ಟಿಕೆಟ್​ ದಂಧೆ ಭೇದಿಸಿ ಕಿಂಗ್​ಪಿನ್​ ಬಂಧನ: ಇಸ್ರೋ, ಸರ್ಕಾರಿ ವೆಬ್​ಸೈಟ್​ ಹ್ಯಾಕ್​ಗೆ ಸಂಚು! - Railway ticket booking

ಸಾಫ್ಟ್​ವೇರ್​ ಬಳಸಿ ರೈಲ್ವೆ ಟಿಕೆಟ್​ ಬುಕಿಂಗ್ ಮಾಡುತ್ತಿದ್ದ ಅಕ್ರಮ ಇ-ಟಿಕೆಟ್ ದಂಧೆಯ ಕಿಂಗ್​ಪಿನ್​ ಒಬ್ಬರನ್ನು ನೈಋತ್ಯ ರೈಲ್ವೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ವಿಚಾರಣೆ ವೇಳೆ ಇಸ್ರೋ, ರೈಲ್ವೆ ಹಾಗೂ ಇತರೆ ಸರ್ಕಾರಿ ವೆಬ್​ಸೈಟ್​ಗಳನ್ನು ಹ್ಯಾಕ್ ಕುರಿತು ಸ್ಪೋಟಕ ಮಾಹಿತಿ ಲಭ್ಯವಾಗಿದೆ.

kingpin-arrested-for-breaking-railway-e-ticket-lock
ರೈಲ್ವೆ ಇ-ಟಿಕೆಟ್​ ದಂಧೆ

By

Published : Sep 2, 2020, 1:06 AM IST

ಬೆಂಗಳೂರು: ಅನಧಿಕೃತ ಸಾಫ್ಟ್​ವೇರ್​ ಬಳಸಿ ರೈಲ್ವೆ ಟಿಕೆಟ್​ ಬುಕಿಂಗ್ ಮಾಡುತ್ತಿದ್ದ ಅಕ್ರಮ ಇ-ಟಿಕೆಟ್ ದಂಧೆಯ ಕಿಂಗ್​ಪಿನ್​ ಒಬ್ಬರನ್ನು ನೈಋತ್ಯ ರೈಲ್ವೆ ಪೊಲೀಸರು ಬಂಧಿಸಿದ್ದಾರೆ.

ನಕಲಿ ಸಾಫ್ಟ್​ವೇರ್​ ಮೂಲಕ ಐಆರ್​ಸಿಟಿಸಿಯ ತತ್ಕಾಲ್ ವ್ಯವಸ್ಥೆ ಹಾಗೂ ಬ್ಯಾಂಕ್ ಓಟಿಪಿ ಬರದೆ ಟಿಕೆಟ್ ಬುಕಿಂಗ್ ಮಾಡಿ ಮೂಲ ಟಿಕೆಟ್ ದರಕ್ಕಿಂತ 4ರಿಂದ 5 ಪಟ್ಟು ಹೆಚ್ಚಿನ ದರ ವಸೂಲಿ ಮಾಡುತ್ತಿದ್ದ ಎಂಬ ಆರೋಪವಿದೆ. ಈ ಸಾಫ್ಟ್​ವೇರ್​ ಮುಖ್ಯಸ್ಥನನ್ನು ರೈಲ್ವೆ ಪೊಲೀಸರ ವಶಕ್ಕೆ ಪಡೆದಿದ್ದಾರೆ.

ವಿಚಾರಣೆಯ ವೇಳೆ ಸ್ಫೋಟಕ ಮಾಹಿತಿ ಬಾಯಿಬಿಟ್ಟ ಈತ ಪಾಕಿಸ್ತಾನದ ಸಾಫ್ಟ್​​ವೇರ್​ ಬಳಿಸಿ ಇಸ್ರೋ, ರೈಲ್ವೆ ಹಾಗೂ ಇತರೆ ಸರ್ಕಾರಿ ವೆಬ್​ಸೈಟ್​ಗಳನ್ನು ಹ್ಯಾಕ್ ಮಾಡಲು ಹೊಂಚು ಹಾಕಿದ್ದ. 3,000 ಬ್ಯಾಂಕ್ ಖಾತೆಯ ವಿವರ ಜೊತೆಗೆ ಬಿಟ್ ಕಾಯಿನ್ ಮಾಹಿತಿ ಸಹ ಇವನ ಬಳಿ ಇತ್ತು ಎಂದು ರೈಲ್ವೆ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

25,000 ಹ್ಯಾಕರ್​ಗಳ ಜೊತೆ ಸಂಪರ್ಕ ಇರಿಸಿಕೊಂಡಿದ್ದ. ಭಾರತದ ವಿರುದ್ಧ ಕೆಲಸ ಮಾಡುವರೊಂದಿಗೆ ಸಂವಹನ ನಡೆಸುತ್ತಿದ್ದ. ಹ್ಯಾಂಕಿಂಗ್ ಹಾಗೂ ನಕಲಿ ಟಿಕೆಟ್​​ನಿಂದ ಬಂದ ಅಕ್ರಮ ಹಣ ಭಾರತದ ವಿರೋಧಿ ಕೃತ್ಯಕ್ಕೆ ಕೆಲಸಕ್ಕೆ ಬಳಸುತ್ತಿದ್ದ. 100ಕ್ಕೂ ಅಧಿ ಆರೋಪಿಗಳನ್ನು ದೇಶಾದ್ಯಂತ ಬಂಧಿಸಿರುವ ರೈಲ್ವೆ ಪೊಲೀಸರು, ಸಾಫ್ಟ್​ವೇರ್​ ಹಾಗೂ ಕೋಡ್​ಗಳನ್ನು ನಾಶಪಡಿಸಿದ್ದಾರೆ.

ABOUT THE AUTHOR

...view details