ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ಗಳ ಸಂಖ್ಯೆಯನ್ನು 225ಕ್ಕೆ ಕಡಿಮೆಯಿಲ್ಲದಂತೆ 250 ರವರೆಗೆ ಹೆಚ್ಚಿಸುವ ಕರ್ನಾಟಕ ನಗರ ಪಾಲಿಕೆಗಳ (ಮೂರನೇ ತಿದ್ದುಪಡಿ) ವಿಧೇಯಕ 2020ಕ್ಕೆ ರಾಜ್ಯಪಾಲರು ಅಂಕಿತ ಹಾಕಿದ್ದಾರೆ.
ಬಿಬಿಎಂಪಿ ವಾರ್ಡ್ ಗರಿಷ್ಠ 250ಕ್ಕೆ ಹೆಚ್ಚಿಸುವ ವಿಧೇಯಕಕ್ಕೆ ರಾಜ್ಯಪಾಲರ ಅಂಕಿತ - ಬೆಂಗಳೂರು ಸುದ್ದಿ
ಉಭಯ ಸದನಗಳಲ್ಲಿ ಅಂಗೀಕಾರಗೊಂಡಿದ್ದ ಕರ್ನಾಟಕ ನಗರ ಪಾಲಿಕೆಗಳ (ಮೂರನೇ ತಿದ್ದುಪಡಿ) ವಿಧೇಯಕ 2020ಕ್ಕೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಅಂಕಿತ ಹಾಕಿದ್ದಾರೆ.
ಬಿಬಿಎಂಪಿ ಮಸೂದೆಗೆ ಅಸ್ತು
ಮೊನ್ನೆ ನಡೆದ ಅಧಿವೇಶನದಲ್ಲಿ ಉಭಯ ಸದನಗಳಲ್ಲಿ ಕರ್ನಾಟಕ ನಗರ ಪಾಲಿಕೆಗಳ (ಮೂರನೇ ತಿದ್ದುಪಡಿ) ವಿಧೇಯಕ 2020 ಅಂಗೀಕಾರವಾಗಿತ್ತು. ಇದೀಗ ರಾಜ್ಯಪಾಲರು ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಒಪ್ಪಿದ ರೂಪದಲ್ಲಿರುವ ವಿಧೇಯಕಕ್ಕೆ ಅಂಕಿತ ಹಾಕಿದ್ದಾರೆ.
ಈ ಕಾಯ್ದೆಯಂತೆ ವಾರ್ಡ್ಗಳ ಸಂಖ್ಯೆಯನ್ನು ಈಗಿರುವ 198 ರಿಂದ 225 ಅಥವಾ ಗರಿಷ್ಠ 250ರವರೆಗೆ ಹೆಚ್ಚಳ ಹಾಗೂ ಮರುವಿಂಗಡಿಸಿದ ವಾರ್ಡ್ಗಳು ಒಂದು ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವಂತೆ ವಿಭಜಿಸಬೇಕು ಹಾಗೂ ವಿಧಾನಸಭೆ ಮತಕ್ಷೇತ್ರಗಳ ನಡುವೆ ಯಾವುದೇ ವಾರ್ಡುಗಳನ್ನು ವಿಭಜನೆ ಮಾಡುವಂತಿಲ್ಲ.