ಬೆಂಗಳೂರು :ರಾಜ್ಯದಲ್ಲಿಂದು 31,183 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 23,98,925ಕ್ಕೆ ಏರಿಕೆ ಆಗಿದೆ. ಇಂದು 451 ಜನ ಸೋಂಕಿಗೆ ಬಲಿಯಾಗಿದ್ದಾರೆ.
ಕೊರೊನಾ ವಿರುದ್ಧ ದಾಖಲೆ ಹೋರಾಟ... ರಾಜ್ಯದಲ್ಲಿಂದು ಬರೋಬ್ಬರಿ 61 ಸಾವಿರ ಮಂದಿ ಡಿಸ್ಚಾರ್ಜ್
ಕರ್ನಾಟಕದಲ್ಲಿ ಇಂದು 31 ಸಾವಿರಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದ್ದು, 451 ಜನ ಮೃತಪಟ್ಟಿದ್ದಾರೆ..
corona
61,766 ಮಂದಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ 18,91,042 ಜನರು ಗುಣಮುಖರಾಗಿದ್ದಾರೆ. ಸದ್ಯ ಸಕ್ರಿಯ ಪ್ರಕರಣಗಳು 4,83,204ಕ್ಕೆ ಏರಿದೆ.
ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು ಶೇ.24.21ರಷ್ಟು ಇದ್ದು, ಸಾವಿನ ಶೇಕಡವಾರು ಪ್ರಮಾಣ ಶೇ.1.44 ರಷ್ಟು ಇದೆ. ಕೋವಿಡ್ಗೆ 451 ಸೋಂಕಿತರು ಮೃತರಾಗಿದ್ದು, ಸಾವಿನ ಸಂಖ್ಯೆ 24,658ಕ್ಕೆ ಏರಿದೆ.
Last Updated : May 22, 2021, 8:59 PM IST