ಬೆಂಗಳೂರು:ರಾಜ್ಯದಲ್ಲಿಂದು 79,996 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಇದರಲ್ಲಿ 293 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ 29,90,528 ಕ್ಕೆ ಏರಿಕೆ ಆಗಿದೆ. ಇಂದು 323 ಮಂದಿ ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು 29,44,422 ಜನ ಗುಣಮುಖರಾಗಿದ್ದಾರೆ.
ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 38,122ಕ್ಕೆ ಏರಿದೆ. ಸದ್ಯ 7,955 ಸಕ್ರಿಯ ಪ್ರಕರಣಗಳಿವೆ. ಈ ಮೂಲಕ ಸೋಂಕಿತರ ಪ್ರಮಾಣ ಶೇ.0.36 ರಷ್ಟಿದ್ದರೆ, ಸಾವಿನ ಪ್ರಮಾಣ ಶೇ.1.36 ರಷ್ಟಿದೆ.
ರಾಜಧಾನಿ ಬೆಂಗಳೂರಲ್ಲಿ 187 ಮಂದಿಗೆ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 12,53,177ಕ್ಕೆ ಏರಿದೆ. 106 ಜನ ಗುಣಮುಖರಾಗಿದ್ದು, 12,30,380 ಡಿಸ್ಚಾರ್ಜ್ ಆಗಿದ್ದಾರೆ. ಇಬ್ಬರು ಸೋಂಕಿತರು ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 16,298ಕ್ಕೆ ಏರಿದೆ. ಸದ್ಯ 6498 ಸಕ್ರಿಯ ಪ್ರಕರಣಗಳಿವೆ.
ರೂಪಾಂತರಿ ಅಪ್ಡೇಟ್ಸ್:
ಅಲ್ಫಾ - 155
ಬೆಟಾ - 08
ಡೆಲ್ಟಾ - 1698
ಡೆಲ್ಟಾ ಪ್ಲಸ್ - 04
ಡೆಲ್ಟಾ ಸಬ್ ಲೈನ್ಏಜ್ - 256
ಡೆಲ್ಟಾ ಸಬ್ ಲೈನ್ಏಜ್ AY.12H - 15
ಕಪ್ಪಾ - 160
ಈಟಾ - 01