ಕರ್ನಾಟಕ

karnataka

ETV Bharat / city

ರಾಜ್ಯದಲ್ಲಿ ಹೊಸದಾಗಿ 1,196 ಮಂದಿಗೆ ಕೋವಿಡ್​ ದೃಢ: ಐವರು ಸೋಂಕಿತರು ಬಲಿ - ಕೊರೊನಾ ಸೋಂಕಿತರಿಗೆ ಚಿಕಿತ್ಸೆ

ರಾಜ್ಯದಲ್ಲಿ ಹೊಸದಾಗಿ 1,196 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 5 ಮಂದಿ ಸೋಂಕಿತರು ಕೋವಿಡ್​ಗೆ ಬಲಿಯಾಗಿದ್ದಾರೆ.

corona
ಕೊರೊನಾ

By

Published : Dec 13, 2020, 7:44 PM IST

ಬೆಂಗಳೂರು:ರಾಜ್ಯದಲ್ಲಿಂದು 1,196 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 9,01,410ಕ್ಕೆ ಏರಿಕೆಯಾಗಿದೆ. ಇಂದು 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 11,944ಕ್ಕೆ ಏರಿಕೆಯಾಗಿದೆ. 19 ಸೋಂಕಿತರು ಅನ್ಯ ಕಾರಣಕ್ಕೆ ಸಾವನ್ನಪ್ಪಿದ್ದಾರೆ.

ರಾಜ್ಯದಲ್ಲಿ ಒಂದು ದಿನದಲ್ಲಿ ಕಾಣಿಸಿಕೊಳ್ಳುವ ಸೋಂಕಿತರ ಪ್ರಮಾಣ ಶೇ. 1.35ರಷ್ಟು ಹಾಗೂ ಸಾವಿನ ಪ್ರಮಾಣ ಶೇ. 0.41ರಷ್ಟಿದೆ. ಕೊರೊನಾದಿಂದ ಕಳೆದ 24 ಗಂಟೆಗಳಿಂದ 2036 ಸೋಂಕಿತರು ಗುಣಮುಖರಾಗಿದ್ದು, ಈವರೆಗೆ 8,72,038 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಇದನ್ನೂ ಓದಿ:ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾಗೆ ಕೊರೊನಾ ಸೋಂಕು..!

260 ಸೋಂಕಿತರು ತೀವ್ರ ನಿಗಾ ಘಟಕದಲ್ಲಿದ್ದು, ರಾಜ್ಯದಲ್ಲಿ ಸದ್ಯ 17,409 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ 7 ದಿನಗಳಲ್ಲಿ 24,113 ಮಂದಿ ಹೋಂ ಕ್ವಾರಂಟೈನ್​ನಲ್ಲಿ ಇದ್ದಾರೆ. ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ 88,923, ದ್ವಿತೀಯ ಸಂಪರ್ಕದಲ್ಲಿ 10,276 ಜನರಿದ್ದಾರೆ.

ಒಂದೇ ದಿನದಲ್ಲಿ 1,496 ಪ್ರಯಾಣಿಕರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಡಿಸಲಾಗಿದ್ದು, ಈವರೆಗೆ ವಿಮಾನ ನಿಲ್ದಾಣದಲ್ಲಿ 2,54,349 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ABOUT THE AUTHOR

...view details