ಬೆಂಗಳೂರು:ಪ್ರಧಾನಿ ಮೋದಿ ಗಮನ ಸೆಳೆಯಲು ಮೈಸೂರು ರಸ್ತೆಯಲ್ಲಿ ಸಚಿವ ಮುನಿರತ್ನ ಬೆಂಬಲಿಗರು ಹಿಂದಿ ಭಾಷೆಯ ಫ್ಲೆಕ್ಸ್ ಗಳನ್ನು ಅಳವಡಿಸಿದ್ದರು. ವಿಷಯ ತಿಳಿಯುತ್ತಿದ್ದಂತೆ, ಟಿ.ಎ ನಾರಾಯಣಗೌಡ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಯುವ ಘಟಕದ ಅಧ್ಯಕ್ಷ ಟಿ.ಎ.ಧರ್ಮರಾಜ್ ನೇತೃತ್ವದಲ್ಲಿ ಕರವೇ ಕಾರ್ಯಕರ್ತರು ಫ್ಲೆಕ್ಸ್ ಗಳಿಗೆ ಮಸಿ ಬಳಿದರು. ಅಲ್ಲದೇ ಹಿಂದಿ ಬ್ಯಾನರ್ಗಳನ್ನು ಮೋದಿ ನೋಡುವ ಮುನ್ನವೇ ಕನ್ನಡ ಪರ ಸಂಘಟನೆಗಳು ಕಿತ್ತೆಸೆದಿವೆ.
ಮೋದಿ ಗಮನ ಸೆಳೆಯಲು ಮುನಿರತ್ನ ಬೆಂಬಲಿಗರಿಂದ ಹಿಂದಿ ಬ್ಯಾನರ್: ಮಸಿ ಬಳಿದ ಕರವೇ ಕಾರ್ಯಕರ್ತರು - ಮೋದಿ ಗಮನ ಸೆಳೆಯಲು ಮುನಿರತ್ನ ಬೆಂಬಲಿಗರಿಂದ ಹಿಂದಿ ಬ್ಯಾನರ್
ಮೈಸೂರು ರಸ್ತೆಯಲ್ಲಿ ಅಳವಡಿಸಲಾಗಿದ್ದ ನೂರಾರು ಹಿಂದಿ ಫ್ಲೆಕ್ಸ್‌ಗಳಿಗೆ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಮಸಿ ಬಳಿದು ಪ್ರತಿಭಟಿಸಿದರು.
ಹಿಂದಿ ಬ್ಯಾನರ್ಗೆ ಮಸಿ ಬಳಿದ ಕರವೇ ಕಾರ್ಯಕರ್ತರು
ಪ್ರಧಾನಿ ನರೇಂದ್ರ ಮೋದಿ ಸಂಚರಿಸುವ ಮಾರ್ಗದಲ್ಲಿ ಹಿಂದಿ ಭಾಷೆ ಬ್ಯಾನರ್ ಅಳವಡಿಸಲಾಗಿತ್ತು. ಇದರಿಂದ ಕೆರಳಿದ ಕನ್ನಡ ಪರ ಸಂಘಟನೆಗಳು ಕನ್ನಡ ವಿರೋಧಿ ಮುನಿರತ್ನ ಎಂದು ಬೆಂಬಲಿಗರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಅಡ್ಡಿ ಪಡಿಸಿದರೂ ಸಹ ಫ್ಲೆಕ್ಸ್ ಗಳಿಗೆ ಮಸಿ ಬಳಿಯಲಾಯಿತು. ಈ ವೇಳೆ ಕೆಲ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ:ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದ ಪ್ರಧಾನಿ ಮೋದಿ, ವಿಶೇಷ ಪೂಜೆ ಸಲ್ಲಿಕೆ
TAGGED:
Bengaluru