ಬೆಂಗಳೂರು:ನಗರದ ಸೀಲ್ಡೌನ್, ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಸುತ್ತಾಡಿದ ಹಾಗೂ ರಾಜ್ಯದ ಹಲವೆಡೆ ಓಡಾಡಿದ ಕೆಎಸ್ಆರ್ಪಿ ಸಿಬ್ಬಂದಿಯಲ್ಲಿ ಹೆಚ್ಚಾಗಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದೆ. ಇದರಿಂದ ಪೊಲೀಸರಿಗೆ ಧೈರ್ಯ ತುಂಬಲು ಹಿರಿಯ ಐಪಿಎಸ್ ಅಧಿಕಾರಿ, ಕೆಎಸ್ಆರ್ಪಿಯ ಎಡಿಜಿಪಿ ಅಲೋಕ್ ಕುಮಾರ್ ಮುಂದಾಗಿದ್ದಾರೆ.
ಮೈಸೂರಿನಲ್ಲಿ 15, ಬೆಂಗಳೂರಿನಲ್ಲಿ 11, ಶಿವಮೊಗ್ಗದಲ್ಲಿ 11, ಹಾಸನದಲ್ಲಿ 11 ಮಂದಿ ಕೆಎಸ್ಆರ್ಪಿ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಕೊರೊನಾ ವಾರಿಯರ್ಸ್ಗೆ ಧೈರ್ಯ ತುಂಬಲು ಸ್ವತಃ ಅಲೋಕ್ ಕುಮಾರ್ ಸಿಬ್ಬಂದಿ ಬಳಿ ತೆರಳಿದ್ದಾರೆ.