ಕರ್ನಾಟಕ

karnataka

ETV Bharat / city

ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಆನ್​ಲೈನ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದ ಗೃಹ ಸಚಿವ - online application

ನಗರ ಪೊಲೀಸ್ ಇಲಾಖೆಯಿಂದ ಶಸ್ತ್ರಾಸ್ತ್ರ ಪರವಾನಗಿ ಆನ್​ಲೈನ್ ಅಪ್ಲಿಕೇಷನ್ ಬಿಡುಗಡೆ ಮಾಡಲಾಗಿದೆ. ಆನ್​ಲೈನ್‌ ಮುಖಾಂತರವೇ ಎಲ್ಲ ಸೌಲಭ್ಯಗಳು ಒಂದೇ ಸೂರಿನಲ್ಲಿ ಸೇವೆ ಒದಗಿಸುವ ವೇದಿಕೆಯಾಗಿರುವ ಹೊಸ ಅಪ್ಲಿಕೇಷನ್ ಸೇವೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದ್ದಾರೆ.

Home Minister has launched an online application to obtain an arms license
ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಆನ್​ಲೈನ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದ ಗೃಹ ಸಚಿವ

By

Published : Sep 30, 2021, 1:06 PM IST

Updated : Sep 30, 2021, 1:14 PM IST

ಬೆಂಗಳೂರು: ಕೊರೊನಾ ಬಿಕ್ಕಟ್ಟು ಹಿನ್ನೆಲೆ ಸಂಪರ್ಕ ರಹಿತ ಸೇವೆ ನೀಡುವ‌ ನಿಟ್ಟಿನಲ್ಲಿ ಇದೇ‌ ಮೊದಲ ಬಾರಿಗೆ ನಗರ ಪೊಲೀಸ್ ಇಲಾಖೆಯಿಂದ ಶಸ್ತ್ರಾಸ್ತ್ರ ಪರವಾನಗಿ ಆನ್​ಲೈನ್ ಅಪ್ಲಿಕೇಷನ್ ಬಿಡುಗಡೆ ಮಾಡಿದೆ. ಆನ್​ಲೈನ್‌ ಮುಖಾಂತರವೇ ಎಲ್ಲ ಸೌಲಭ್ಯಗಳು ಒಂದೇ ಸೂರಿನಲ್ಲಿ ಸೇವೆ ಒದಗಿಸುವ ವೇದಿಕೆಯಾಗಿರುವ ಹೊಸ ಅಪ್ಲಿಕೇಷನ್ ಸೇವೆಯನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆಗೊಳಿಸಿದ್ದಾರೆ.

ಶಸ್ತ್ರಾಸ್ತ್ರ ಪರವಾನಗಿ ಪಡೆಯಲು ಆನ್​ಲೈನ್ ಅಪ್ಲಿಕೇಷನ್ ಬಿಡುಗಡೆಗೊಳಿಸಿದ ಗೃಹ ಸಚಿವ

ಈ ವೇಳೆ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಬೆಂಗಳೂರು ಐಟಿ ಹಬ್ ಆಗಿದೆ. ಬೆಳೆಯುತ್ತಿರುವ ನಗರದ ನಾಗರಿಕರಿಗೆ ನೂತನ ಆನ್​​ಲೈನ್ ವ್ಯವಸ್ಥೆ ಸಹಕಾರಿಯಾಗಲಿದೆ. 8,138 ಗನ್ ಲೈಸೆನ್ಸ್ ನೀಡಿದ್ದೇವೆ.

ಶಸ್ತ್ರಾಸ್ತ್ರ ಪರವಾನಗಿ ನೀಡಲು ಅಥವಾ ನವೀಕರಿಸಲು ಸಾರ್ವಜನಿಕರು ಆಯುಕ್ತರ ಕಚೇರಿಗೆ ಬರಬೇಕಿತ್ತು. ಅಲ್ಲದೇ ಕೊರೊನಾ ಬಿಕ್ಕಟ್ಟಿನಿಂದ ಬರಲು ಸಾಧ್ಯವಾಗುತ್ತಿರಲಿಲ್ಲ. ಹಾಗಾಗಿ ತಂತ್ರಜ್ಞಾನ ಮೂಲಕ ಸಂಪರ್ಕ ರಹಿತ ಸೇವೆ ನೀಡುವ‌ ನಿಟ್ಟಿನಲ್ಲಿ ಹೊಸ ಸೇವೆ ಪರಿಚಯಿಸಲಾಗಿದೆ‌ ಎಂದರು.

ಏನೆಲ್ಲಾ ಸೇವೆಗಳು ಲಭ್ಯ ?

ಬಿಡುಗಡೆಯಾಗಿರುವ ಹೊಸ ಆನ್​ಲೈನ್ ಅಪ್ಲಿಕೇಷನ್​ನಲ್ಲಿ ಹಲವು ರೀತಿಯ ಸೇವೆಗಳನ್ನು ನಾಗರಿಕರು ಪಡೆಯಬಹುದಾಗಿದೆ‌. ಹೊಸ ಶಸ್ತ್ರ ಪರವಾನಗಿ, ನವೀಕರಣ, ಮರುನೋಂದಣಿ, ಹೆಚ್ಚುವರಿ ಶಸ್ತ್ರ ಹೊಂದಲು ಅರ್ಜಿ, ಶಸ್ತ್ರದ ತಪಾಸಣೆಗೆ ಅರ್ಜಿ, ಮಾರಾಟ ಅಥವಾ ವರ್ಗಾವಣೆಗೆ ಅನುಮತಿ ಅರ್ಜಿ ಸಲ್ಲಿಸಬಹುದಾಗಿದೆ.

ಅವಧಿ ವಿಸ್ತರಣೆ ಅರ್ಜಿ, ನಿಯೋಜಿತರನ್ನ ಸೇರಿಸಲು ಹಾಗೂ ತೆಗೆಯಲು ಅರ್ಜಿ ಶಸ್ತ್ರಾಸ್ತ್ರ ಹಿಂಪಡೆಯಲು, ವಿಳಾಸ ಬದಲಾವಣೆಗೆ ಅರ್ಜಿ ಸೇರಿದಂತೆ ವಿವಿಧ ರೀತಿಯ ಸೇವೆಗಳು ಅಪ್ಲಿಕೇಷನ್​​​​ನಲ್ಲಿ ಇರಲಿವೆ. ಸದ್ಯ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಶಸ್ತ್ರಾಸ್ತ್ರ ಸಂಬಂಧಿತ ಆ್ಯಪ್ ಇದಾಗಿದೆ.

ಇದನ್ನೂ ಓದಿ:ದಸರಾ ಮಹೋತ್ಸವ ಹಿನ್ನೆಲೆ: ಫುಲ್​ ಅಲರ್ಟ್​ ಆದ ಖಾಕಿ ಪಡೆ

ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ನೇತೃತ್ವದಲ್ಲಿ ಸಭೆ‌ ನಡೆದಿದೆ. ಸಭೆಯಲ್ಲಿ ಎಸಿಪಿ ಮತ್ತು ಮೆಲ್ಪಟ್ಟ ಅಧಿಕಾರಿಗಳು ಭಾಗಿಯಾಗಿದ್ದಾರೆ. ನಗರದ ಎಂಟು ವಿಭಾಗ, ಸಿಎಆರ್, ಟ್ರಾಫಿಕ್, ಆಡಳಿತ, ಇಂಟೆಲಿಜೆನ್ಸ್, ಸಿಸಿಬಿ ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಭಾಗಿಯಾಗಿದ್ದಾರೆ.‌

ನಗರದಲ್ಲಿ ನಡೆಯುತ್ತಿರುವ ಅಪರಾಧ ನಿಯಂತ್ರಿಸಲು ಇರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಕೊರತೆ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

ಸಿಬ್ಬಂದಿ ಕೊರತೆಯಿಂದ ಕೆಲಸಕ್ಕೆ ಅಗುತ್ತಿರುವ ಸಮಸ್ಯೆಗೆ ಪರಿಹಾರದ ಬಗ್ಗೆ ಪರಾಮರ್ಶೆ, ಪೊಲೀಸ್ ಠಾಣೆಗಳನ್ನು ಹೆಚ್ಚಿಸುವ ಬಗ್ಗೆ ಪ್ರಸ್ತಾವನೆ, ಸೈಬರ್ ಠಾಣೆ, ಸಿಬ್ಬಂದಿ, ಠಾಣೆಗೆ ಬೇಕಾಗಿರುವ ತಾಂತ್ರಿಕ ಉಪಕರಣಗಳ ಖರೀದಿ ಮತ್ತು ಸಿಬ್ಬಂದಿಗೆ ಹೆಚ್ಚಿನ ತರಬೇತಿ ಬಗ್ಗೆ ನಗರ ಪೊಲೀಸ್ ಆಯುಕ್ತ ಕಮಲ ಪಂತ್ ನೇತೃತ್ವದಲ್ಲಿ ಗೃಹ ಸಚಿವರಿಗೆ ಮಾಹಿತಿ ನೀಡುತ್ತಿದ್ದಾರೆ.

Last Updated : Sep 30, 2021, 1:14 PM IST

ABOUT THE AUTHOR

...view details