ಕರ್ನಾಟಕ

karnataka

ETV Bharat / city

ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ - ಅಮರನಾಥ ಯಾತ್ರೆಯಲ್ಲಿ ಸಿಲುಕಿದವರಿಗೆ ಕರ್ನಾಟಕ ಸರ್ಕಾರದಿಂದ ಸಹಾಯವಾಣಿ ಆರಂಭ

ಅಮರನಾಥ ಗುಹೆಯ ಬಳಿ ಸಿಕ್ಕಿಬಿದ್ದವರಿಗೆ ಸಹಾಯವನ್ನು ಒದಗಿಸಲು ಜಮ್ಮು ಕಾಶ್ಮೀರ ಸರ್ಕಾರದಿಂದ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಯಾವುದೇ ವ್ಯಕ್ತಿಗಳು ಸಿಲುಕಿದರೆ ರಾಜ್ಯ ತುರ್ತು ನಿಯಂತ್ರಣ ಕೊಠಡಿಯ ಸಂಪರ್ಕಿಸಲು ಸಹಾಯವಾಣಿ ಸರ್ಕಾರ ತಿಳಿಸಿದೆ.

Amarnath Yatra
ಅಮರನಾಥ ಯಾತ್ರೆ

By

Published : Jul 8, 2022, 10:55 PM IST

ಬೆಂಗಳೂರು : ಅಮರನಾಥ ಗುಹೆಯ ಬಳಿ ಇಂದು ಸುಮಾರು 5:30 ರ ಸುಮಾರಿಗೆ ಮೋಡದ ಸ್ಫೋಟದಿಂದಾಗಿ ಯಾತ್ರಿಕರ ವಾಸಸ್ಥಳಗಳಿಗೆ ಹಾನಿಯಾಗಿದೆ. ಎನ್‌ಡಿಆರ್‌ಎಫ್, ಐಟಿಬಿಪಿ, ಭಾರತೀಯ ಸೇನೆ, ಸಿಆರ್‌ಪಿಎಫ್, ಬಿಎಸ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಜೆ & ಕೆ ಪೊಲೀಸರ ಜಂಟಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ.

ಅಲ್ಲಿ ಸಿಕ್ಕಿಬಿದ್ದವರಿಗೆ ಸಹಾಯವನ್ನು ಒದಗಿಸಲು ಜಮ್ಮು ಕಾಶ್ಮೀರ ಸರ್ಕಾರದಿಂದ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲಾಗಿದೆ. ಸಂಕಷ್ಟದಲ್ಲಿ ಸಿಲುಕಿದವರಿಗೆ ಜಮ್ಮು ಕಾಶ್ಮೀರ ಸರ್ಕಾರವು ಸಹಾಯಹಸ್ತ ಚಾಚಿದೆ. ಅಮರನಾಥ ಗುಹೆಯ ಬಳಿ ಕರ್ನಾಟಕದ ಯಾವುದೇ ವ್ಯಕ್ತಿಗಳು ಸಿಲುಕಿದರೆ ರಾಜ್ಯ ತುರ್ತು ನಿಯಂತ್ರಣ ಕೊಠಡಿಯ ಈ ಕೆಳಗಿನ ಸಂಖ್ಯೆಗಳಲ್ಲಿ ಸಂಪರ್ಕಿಸಬೇಕಾಗಿ ಎಂದು ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿದ್ದಾರೆ.

ಸಂಪರ್ಕಿಸಬೇಕಾದ ಸಂಖ್ಯೆ, 080-1070, 22340676,
ಇಮೇಲ್: incomedmkar@gmail.com

ಜಮ್ಮು ಕಾಶ್ಮೀರ ಸರ್ಕಾರದ ಮೂಲಕ ನೆರವು ನೀಡಲು ಸಕಲ ಸಿದ್ಧತೆಯನ್ನು ರಾಜ್ಯ ಸರ್ಕಾರ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಅಮರನಾಥದ ದೇಗುಲದ ಬಳಿ ಮೇಘಸ್ಫೋಟ: 15 ಕ್ಕೆ ಹೆಚ್ಚಿದ ಸಾವಿನ ಸಂಖ್ಯೆ, 40ಕ್ಕೂ ಹೆಚ್ಚು ಯಾತ್ರಿಕರು ನಾಪತ್ತೆ

ABOUT THE AUTHOR

...view details