ಕರ್ನಾಟಕ

karnataka

ETV Bharat / city

ಸಿಎಂ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ  ನೀಡಿದ GRB ಡೈರಿ ಫುಡ್ಸ್

"ಪ್ರಸ್ತುತ ನಾವು ದೊಡ್ಡದಾದ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿದ್ದೇವೆ. ಮಾರಕ ವೈರಸ್​ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿದೆ. ಇದರಿಂದ ಹೊರ ಬರುವ ನಿಟ್ಟಿನಲ್ಲಿ ನಾವು ಸಹಾಯ ಮಾಡುವ ಪ್ರಯತ್ನ ನಡೆಸಿದ್ದೇವೆ. ಒಂದು ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆ ಹೊಂದಿರುವ ಸಂಸ್ಥೆಯಾಗಿ ನಾವು ಸಮಾಜದ ಸ್ವಾಸ್ಥ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ. ನಮ್ಮ ಈ ಕೊಡುಗೆಯು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಉಪಕ್ರಮಗಳಿಗೆ ನೆರವಾಗಲಿದೆ ಎಂಬ ವಿಶ್ಚಾಸ ನಮಗಿದೆ".- ಜಿ ಆರ್​ ಬಾಲಸುಬ್ರಮಣ್ಯಂ, ಜಿಆರ್​ಬಿ ಕಂಪನಿ ಸಂಸ್ಥಾಪಕ ಮತ್ತು ಅಧ್ಯಕ್ಷ

GRB
ಜಿಆರ್​ಬಿ

By

Published : May 6, 2020, 12:50 PM IST

Updated : May 6, 2020, 1:57 PM IST

ಬೆಂಗಳೂರು:ದೇಶದ ಹೆಸರಾಂತ ಎಫ್​ಎಂಸಿಜಿ ಕಂಪನಿಯಾದ ಜಿಆರ್​ಬಿ ಡೈರಿ ಫುಡ್ಸ್​ ಪ್ರೈವೆಟ್​ ಲಿ., ಕೊರೊನಾ ವಿರುದ್ಧದ ಹೋರಾಟಕ್ಕೆ ನೆರವಾಗುವ ದೃಷ್ಟಿಯಿಂದ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ ನೀಡಿದೆ.

ಈ ಬಗ್ಗೆ ಮಾತನಾಡಿರುವ ಕಂಪನಿ ಸಂಸ್ಥಾಪಕ ಮತ್ತು ಅಧ್ಯಕ್ಷ ಜಿ ಆರ್​ ಬಾಲಸುಬ್ರಮಣ್ಯಂ, ಪ್ರಸ್ತುತ ನಾವು ದೊಡ್ಡದಾದ ಆರೋಗ್ಯ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಮಾರಕ ವೈರಸ್​ ವಿರುದ್ಧ ಇಡೀ ದೇಶವೇ ಹೋರಾಟ ನಡೆಸುತ್ತಿದೆ. ಇದರಿಂದ ಹೊರ ಬರುವ ನಿಟ್ಟಿನಲ್ಲಿ ನಾವು ಸಹಾಯ ಮಾಡುವ ಪ್ರಯತ್ನ ನಡೆಸಿದ್ದೇವೆ. ಒಂದು ಸಾಮಾಜಿಕ ಜವಾಬ್ದಾರಿ ಮತ್ತು ಬದ್ಧತೆ ಹೊಂದಿರುವ ಸಂಸ್ಥೆಯಾಗಿ ನಾವು ಸಮಾಜದ ಸ್ವಾಸ್ಥ್ಯದ ಬಗ್ಗೆ ಕಾಳಜಿ ಹೊಂದಿದ್ದೇವೆ. ನಮ್ಮ ಈ ಕೊಡುಗೆಯು ರಾಜ್ಯ ಸರ್ಕಾರ ತೆಗೆದುಕೊಂಡಿರುವ ಉಪಕ್ರಮಗಳಿಗೆ ನೆರವಾಗಲಿದೆ ಎಂಬ ವಿಶ್ಚಾಸ ನಮಗಿದೆ ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ದೇಣಿಗೆ

ದೇಶ ಮತ್ತು ವಿದೇಶಗಳಲ್ಲೂ ಮಾರುಕಟ್ಟೆ ಹೊಂದಿರುವ ಕಂಪನಿಯು ಇನ್ನಿತರ ಮಾರ್ಗಗಳ ಮೂಲಕ ರಾಜ್ಯದ ಜನತೆಗೆ ನೆರವು ನೀಡುವುದಾಗಿ ಘೋಷಿಸಿದೆ. ರಾಜ್ಯದಲ್ಲಿ ಜಿಆರ್​ಬಿ ಕಂಪನಿ 20 ಲಕ್ಷ ರೂ. ಮೌಲ್ಯದ ಅಗತ್ಯ ದಿನಸಿ ಕಿಟ್​ಗಳನ್ನು ಒಳಗೊಂಡ ಆಹಾರ ಕಿಟ್​ಗಳನ್ನು ವಿತರಿಸುತ್ತಿದೆ. ಈ ಕಿಟ್​ಗಳಲ್ಲಿ ಅಕ್ಕಿ, ಸಕ್ಕರೆ, ಉಪ್ಪು, ಖಾರದ ಪುಡಿ, ಅರಿಶಿಣ ಹಾಗೂ ಸಾಂಬಾರ್​ ಪುಡಿ ಇರುತ್ತದೆ.

Last Updated : May 6, 2020, 1:57 PM IST

ABOUT THE AUTHOR

...view details