ಕರ್ನಾಟಕ

karnataka

ETV Bharat / city

ಕೆಎಸ್‌ಆರ್‌ಟಿಸಿ ಸೇರಿ ನಾಲ್ಕೂ ನಿಗಮಗಳಿಗೆ 347 ಬ್ರೆತ್ ಅನಲೈಸರ್ ಖರೀದಿಗೆ ಸರ್ಕಾರ ಒಪ್ಪಿಗೆ

ಬಸ್​​ ಚಾಲಕರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗದಂತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಿಗೆ 2.9 ಕೋಟಿ ರೂ. ವೆಚ್ಚದಲ್ಲಿ 347 ಬ್ರೆತ್ ಅನಲೈಸರ್ ಖರೀದಿಸಲು ರಾಜ್ಯ ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ.

KN_BNG_03_government_Order_Script_7208083
ನಾಲ್ಕೂ ನಿಗಮಗಳಿಗೆ ಬ್ರೆತ್ ಅನಲೈಸರ್ ಖರೀದಿಗೆ ಅನುಮೋದನೆ

By

Published : Aug 16, 2022, 10:47 PM IST

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಲ್ಲಿ ಸುರಕ್ಷತೆಗೆ ಆದ್ಯತೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಯಾವುದೇ ನೌಕರರು ಮದ್ಯಪಾನ ಮಾಡಿ ಕರ್ತವ್ಯಕ್ಕೆ ಹಾಜರಾಗದಂತೆ ತಡೆಯಲು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿ ನಾಲ್ಕೂ ನಿಗಮಗಳಿಗೆ ಒಟ್ಟು 347 ಬ್ರೆತ್ ಅನಲೈಸರ್ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ (ಕೆಎಸ್‌ಆರ್‌ಟಿಸಿ) 100, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 60, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ (ಕೆಕೆಆರ್‌ಟಿಸಿ) 60, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ (ಎನ್‌ಡಬ್ಲುಕೆಆರ್‌ಟಿಸಿ) 60 ಮತ್ತು ಸಾರಿಗೆ ಇಲಾಖೆಗೆ 67 ಸೇರಿ ಒಟ್ಟು 347 ಬ್ರೆತ್ ಅನಲೈಸರ್‌ಗಳನ್ನು 2.9 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯು ಒಪ್ಪಿಗೆ ಕೊಟ್ಟಿದೆ.

ಸಾರಿಗೆ ಕಲ್ಯಾಣ ಮತ್ತು ರಸ್ತೆ ಸುರಕ್ಷತೆಗಾಗಿ 2022-23 ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ 300 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಇದರಲ್ಲಿ 295.59 ಕೋಟಿ ರೂ.ಗಳ ಕ್ರಿಯಾ ಯೋಜನೆಗಳಿಗೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಈ ಕ್ರಿಯಾ ಯೋಜನೆಯಲ್ಲಿ ಪ್ರತಿ ಬೆತ್ ಅನಲೈಸರ್‌ಗೆ 60 ಸಾವಿರ ರೂ. ಅಂದಾಜು ವೆಚ್ಚದಂತೆ ಒಟ್ಟು 2.9 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಪುಷ್ಪ ವಿ.ಎಸ್. ಈ ಆದೇಶ ಮಾಡಿದ್ದಾರೆ.

ಇಲಾಖೆಯ ಕೆಲವು ಚಾಲಕರಿಗೆ ಮದ್ಯಪಾನ ಮಾಡುವ ಅಭ್ಯಾಸ ಇರಬಹುದು, ಅಂತಹವರಿಂದ ರಸ್ತೆಗಳಲ್ಲಿ ದೊಡ್ಡ ಮಟ್ಟದ ಅಪಘಾತವಾಗುವ ಸಂಭವವಿರುತ್ತದೆ. ಬ್ರೆತ್ ಅನಲೈಸರ್‌ಗಳನ್ನು ಬಸ್ ಘಟಕಗಳಲ್ಲಿ ಅಳವಡಿಸುವುದರಿಂದ ಮದ್ಯಪಾನ ಮಾಡಿ ವಾಹನ ಚಲಾಯಿಸುವ ನೌಕರರ ಗುರಿತಿಸಿ ಅವರು ವಾಹನ ಚಾಲನೆ ಮಾಡದಂತೆ ತಡೆಯಲು ಹಾಗೂ ಅವರಿಗೆ ಮುಂದೆ ಎಚ್ಚರಿಕೆ ನೀಡಿ ಅಗತ್ಯ ಕ್ರಮ ವಹಿಸಲು ಸಹಕಾರಿಯಾಗಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:ನಮ್ಮ ಮೆಟ್ರೋ ನಿಲ್ದಾಣಗಳ ಆವರಣದಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವಾಹನಗಳ ಚಾರ್ಜಿಂಗ್ ಸ್ಟೇಷನ್ಸ್

ABOUT THE AUTHOR

...view details