ಬೆಂಗಳೂರು: ಗೂಗಲ್ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿದೆ. ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ. ಎಸ್. ನಾಗಾಭರಣ ಕಿಡಿಕಾರಿದ್ದಾರೆ.
ಕಿಡಿಗೇಡಿಗಳಿಂದ ಗೂಗಲ್ನಲ್ಲಿ ಕನ್ನಡಕ್ಕೆ ಅವಮಾನ ಯಾರೋ ಪಾಪಿಗಳು ಮಾಡಿರೋ ಕಿತಾಪತಿಯಿಂದ ಗೂಗಲ್ ನಲ್ಲಿ ಭಾರತದಲ್ಲಿರುವ ಕೊಳಕು ಭಾಷೆ (ugliest language in india) ಎಂದು ಹುಡುಕಿದರೆ ಕನ್ನಡ ಎಂದು ತೊರಿಸುತ್ತಿದೆ. ದಯವಿಟ್ಟು ಎಲ್ಲರೂ ಫೀಡ್ ಬ್ಯಾಕ್ಗೆ ಹೋಗಿ ರಿಪೋರ್ಟ್ ಮಾಡಿ ಮತ್ತು ಇದನ್ನು ಹೆಚ್ಚು ಶೇರ್ ಮಾಡಿ ಎಂದ ಅಭಿಯಾನ ಇಂದು ಬೆಳಗ್ಗೆಯಿಂದಲೇ ಶುರು ಮಾಡಲಾಗಿದೆ.
ಗೂಗಲ್ನಲ್ಲಿ 'ಭಾರತದ ಕೊಳಕು ಭಾಷೆ' ಯಾವುದು ಎಂದು ಹುಡುಕಿದರೆ 'ಕನ್ನಡ' ಎಂದು ತೋರಿಸುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ನಾಗಾಭರಣ ಅವರು, ಗೂಗಲ್ನಲ್ಲಿ ಕನ್ನಡಕ್ಕೆ ಅವಮಾನ ಆಗುತ್ತಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ, ಗುರುಗಾಂವ್ನಲ್ಲಿರುವ ಗೂಗಲ್ ಕಚೇರಿಯ ಅಧಿಕಾರಿಗಳ ಜೊತೆ ಮಾತನಾಡಿ, ಮಧ್ಯಾಹ್ನ 3 ಗಂಟೆಗೆ ಸರಿ ಪಡಿಸಲಾಯಿತು ಎಂದು ತಿಳಿಸಿದರು.
ಗೂಗಲ್ನಲ್ಲಿ ಕನ್ನಡಕ್ಕೆ ಅವಮಾನ ಪ್ರಕರಣದ ಕುರಿತು ಟಿ.ಎಸ್.ನಾಗಾಭರಣ ಪ್ರತಿಕ್ರಿಯೆ ಇದು ಯಾರೋ ಕಿಡಿಗೇಡಿಗಳು ಮಾಡಿರುವ ಕೃತ್ಯ. ಕನ್ನಡಕ್ಕೆ ಯಾವಾಗ ಈ ರೀತಿಯ ಅವಮಾನ, ಅನ್ಯಾಯಗಳು ಆಗುತ್ತವೆ ಆಗ ಪ್ರತಿಯೊಬ್ಬ ಕನ್ನಡಿಗರು ಕೈ ಜೋಡಿಸಬೇಕು ಎಂದು ಜನರಿಗೆ ಟಿ.ಎಸ್ ನಾಗಾಭರಣ ಅವರು ಕರೆ ನೀಡಿದರು.