ಕರ್ನಾಟಕ

karnataka

ETV Bharat / city

ನಟಿ ಪ್ರಣಿತಾ ಹೆಸರು ಹೇಳಿ ಹಣ ಪಡೆದು ಪ್ರತಿಷ್ಠಿತ ಗ್ರೂಪ್​​ಗೆ ವಂಚನೆ - ಎಸ್​ವಿ ಗ್ರೂಪ್ & ಡೆವಲಪರ್ಸ್

ಹಣ ಕೊಟ್ಟರೆ ನಟಿ ಪ್ರಣಿತಾ ಸುಭಾಷ್​ ಅವರನ್ನು ನಿಮ್ಮ (ಎಸ್​ವಿ ಗ್ರೂಪ್ & ಡೆವಲಪರ್ಸ್​​ಗೆ) ಕಂಪನಿಗೆ ಬ್ರಾಂಡ್ ಅಂಬಾಸಿಡರ್ ಮಾಡುತ್ತೇವೆ ಎಂದು ಹೇಳಿ ಆರೋಪಿಗಳು ಇಬ್ಬರು ವಂಚಿಸಿದ್ದಾರೆ.

fraud-to-re-putable-group
ನಟಿ ಪ್ರಣಿತಾ

By

Published : Oct 12, 2020, 7:14 PM IST

ಬೆಂಗಳೂರು:ದುಡ್ಡು ನೀಡಿದರೆ ನಟಿ ಪ್ರಣಿತಾ ಸುಭಾಷ್​ ಅವರು ನಿಮ್ಮ ಕಂಪನಿಗೆ ಬ್ರಾಂಡ್​​ ಅಂಬಾಸಿಡರ್​ ಆಗಿ ಒಪ್ಪಂದಕ್ಕೆ ಗಂಟೆಯೊಳಗೆ ಸಹಿ ಹಾಕಲಿದ್ದಾರೆ ಎಂದು ಹೇಳಿ ಆರೋಪಿಗಳಿಬ್ಬರು ಎಸ್​ವಿ ಗ್ರೂಪ್ & ಡೆವಲಪರ್ಸ್ ಮ್ಯಾನೇಜರ್​ಗೆ 13.5 ಲಕ್ಷ ವಂಚಿಸಿದ್ದಾರೆ.

ಎಸ್​ವಿ ಗ್ರೂಪ್ ಮ್ಯಾನೇಜರ್​ಗೆ ಆತನ ಸ್ನೇಹಿತನ ಮುಖಾಂತರ ಆರೋಪಿಗಳು ಪರಿಚಯವಾಗಿದ್ದರು. ನಂತರ ಆ ಮ್ಯಾನೇಜರ್​​ನನ್ನು ಬೆಂಗಳೂರಿನ ಖಾಸಗಿ ಹೋಟೆಲ್​ಗೆ ಕರೆಸಿಕೊಂಡಿದ್ದ ಆರೋಪಿಗಳು, ದುಡ್ಡು ಕೊಟ್ಟರೆ ಗಂಟೆಯೊಳಗೆ ಪ್ರಣಿತಾ ಅವರು ನಿಮ್ಮ ಬ್ರಾಂಡ್ ಅಂಬಾಸಿಡರ್​​​​ಗೆ ಒಪ್ಪಂದಕ್ಕೆ ಸಹಿ ಹಾಕುತ್ತಾರೆ ಎಂದಿದ್ದರು.

ಆರೋಪಿಗಳ ಮಾತು ನಂಬಿ ₹13.5 ಲಕ್ಷ ಮಹಮ್ಮದ್ ಜುನಾಯತ್ ಹಾಗೂ ವರ್ಷ ಎಂಬವರಿಗೆ ಕೊಟ್ಟಿದ್ದಾರೆ. ಹಣ ಪಡೆಯುತ್ತಿದ್ದಂತೆ ಹೋಟೆಲ್​​ ರೂಮ್​​ಗೆ ಹೋಗಿ ಬರುತ್ತೇವೆ ಎಂದು ಹೇಳಿ ಹೋದವರು ಮತ್ತೆ ಮರಳಿ ಬರಲಿಲ್ಲ. ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details