ಕರ್ನಾಟಕ

karnataka

ETV Bharat / city

ಸರ್ಕಾರದ ವೈಫಲ್ಯ ಕಣ್ಣು ಮುಂದಿದ್ದರೂ ಕಟೀಲ್​​ ಹಗಲು ಕುರುಡನಂತೆ ವರ್ತಿಸುತ್ತಿದ್ದಾರೆ : ಡಾ. ಹೆಚ್.ಸಿ ಮಹದೇವಪ್ಪ - ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​

ಕೊರೊನಾ ರೋಗಿಗಳಿಗೆ ಬೆಡ್ ಹಾಗೂ ಆಮ್ಲಜನಕ ಕೊರತೆಗೆ ಕಾಂಗ್ರೆಸ್ ಪಕ್ಷ ಸಹ ಕಾರಣ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ..

Former Minister Dr HC Mahadevappa
ಸರ್ಕಾರದ ವೈಫಲ್ಯ ಕಣ್ಣಮುಂದಿದ್ದರೂ ಕಟೀಲ್​​ ಹಗಲು ಕುರುಡನಂತೆ ವರ್ತಿಸುತ್ತಿದ್ದಾರೆ: ಎಚ್.ಸಿ ಮಹದೇವಪ್ಪ

By

Published : May 12, 2021, 2:00 PM IST

ಬೆಂಗಳೂರು : ರಾಜ್ಯಸರ್ಕಾರ ಕೊರೊನಾ ನಿಯಂತ್ರಣದಲ್ಲಿ ಕಂಡಿರುವ ವೈಫಲ್ಯವನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಕಂಡರೂ ಹಗಲು ಕುರುಡರಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಆರೋಪಿಸಿದ್ದಾರೆ.

ಟ್ವೀಟ್ ಮೂಲಕ ಆರೋಪ ಮಾಡಿರುವ ಅವರು, ರಾಜ್ಯಗಳಿಗೆ ಸಮರ್ಪಕವಾಗಿ ಆರೋಗ್ಯ ಸೌಲಭ್ಯಗಳನ್ನು ನೀಡಲಾಗದ, ಸರಿಯಾಗಿ ಲಸಿಕೆ ಮತ್ತು ಆಕ್ಸಿಜನ್ ಪೂರೈಸಲಾಗದೇ ಒದ್ದಾಡುತ್ತಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೈಫಲ್ಯಗಳು ಕಣ್ಣು ಮುಂದೆ ಇದ್ದರೂ ಕೂಡ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್​ ಹಗಲು ಕುರುಡನಂತೆ ವರ್ತಿಸುತ್ತಿದ್ದಾರೆ.

ಬೇಜವಾಬ್ದಾರಿತನದಿಂದ ಹೇಳಿಕೆ ನೀಡುತ್ತಿರುವ ಈತನಿಗೆ ಕೂಡಲೇ ಕೊರೊನಾ ಲಸಿಕೆಯೊಂದಿಗೆ ಆತನ ಮಾನಸಿಕ ಹುಚ್ಚುತನಕ್ಕೂ ಕೂಡ ಲಸಿಕೆ ಹಾಕಿಸಬೇಕೆಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.

ಜೊತೆಗೆ ಬಿಜೆಪಿಯಲ್ಲಿ ಅಲ್ಪಸ್ವಲ್ಪ ಬುದ್ಧಿಯಿರುವ ಹಿರಿಯ ನಾಯಕರು ಈತನಿಗೆ ತಿಳಿ ಹೇಳಿದರೆ ಅದು ಹೆಚ್ಚು ಸಮರ್ಪಕ ಎನಿಸಿಕೊಳ್ಳುತ್ತದೆ ಎಂದಿದ್ದಾರೆ.

ಖಾಸಗಿ ಮಾಧ್ಯಮಕ್ಕೆ ಸಂದರ್ಶನ ನೀಡಿದ್ದ ಸಂದರ್ಭ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್​, ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಪಕ್ಷದಿಂದ ಸೂಕ್ತ ಸಹಕಾರ ಸಿಗುತ್ತಿಲ್ಲ. ಸಲಹೆ-ಸೂಚನೆಗಳನ್ನು ನೀಡುವ ಬದಲು ಕೇವಲ ಆರೋಪ ಮಾಡುವುದಕ್ಕೆ ಸೀಮಿತವಾಗಿದೆ.

ಕೊರೊನಾ ರೋಗಿಗಳಿಗೆ ಬೆಡ್ ಹಾಗೂ ಆಮ್ಲಜನಕ ಕೊರತೆಗೆ ಕಾಂಗ್ರೆಸ್ ಪಕ್ಷ ಸಹ ಕಾರಣ ಎಂದು ಆರೋಪಿಸಿದ್ದರು. ಈ ವಿಚಾರಕ್ಕೆ ಕಾಂಗ್ರೆಸ್ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ABOUT THE AUTHOR

...view details