ಕರ್ನಾಟಕ

karnataka

ETV Bharat / city

ಕಾಂಗ್ರೆಸ್​​ ಸೇರಲು ಮುಂದಾಗಿದ್ದರಂತೆ ದೊಡ್ಡಗೌಡರು: ಎಸ್​​ಎಂಕೆ ಆತ್ಮಕತೆಯಲ್ಲಿ ಉಲ್ಲೇಖ!

ಹಿರಿಯ ರಾಜಕೀಯ ಮುತ್ಸದ್ದಿಯೆಂದು ಹೆಸರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆತ್ಮಕತೆ "ಸ್ಮೃತಿ ವಾಹಿನಿ"ಯಲ್ಲಿ ದೇವೇಗೌಡರ ರಾಜಕಾರಣದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ.

smk- HDD 1 Former cm SM krishna autobiography
ಕಾಂಗ್ರೆಸ್ ಸೇರಲು ಮುಂದಾಗಿದ್ದ ದೊಡ್ಡಗೌಡರು: ಎಸ್.ಎಂ.ಕೆ ಆತ್ಮಕತೆಯಲ್ಲಿ ಬಯಲು..!

By

Published : Dec 25, 2019, 8:20 PM IST

ಬೆಂಗಳೂರು:ಹಿರಿಯ ರಾಜಕೀಯ ಮುತ್ಸದ್ದಿಯೆಂದು ಹೆಸರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮ್ಮ ಆತ್ಮಕತೆ "ಸ್ಮೃತಿ ವಾಹಿನಿ"ಯಲ್ಲಿ ದೇವೇಗೌಡರ ರಾಜಕಾರಣದ ಬಗ್ಗೆ ಸೂಕ್ಷ್ಮವಾಗಿ ಉಲ್ಲೇಖಿಸಿದ್ದಾರೆ.

2016ರಲ್ಲಿ ಬರೆದ ಜೀವನ ಚರಿತ್ರೆಯ ಪುಸ್ತಕ ಹೊಸ ವರ್ಷ ಜನವರಿ 4ರಂದು ಬಿಡುಗಡೆಯಾಗಲಿದೆ. ತಮ್ಮ ಸುದೀರ್ಘ ರಾಜಕೀಯದುದ್ದಕ್ಕೂ ಕಾಂಗ್ರೆಸ್ ಪಕ್ಷದ ವಿರುದ್ಧವೇ ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದ ಮಾಜಿ ಪ್ರಧಾನಿ ದೇವೇಗೌಡರು ಒಂದು ಕಾಲದಲ್ಲಿ ಜನತಾ ಪರಿವಾರ ಪಕ್ಷ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನವನ್ನು ತೊರೆದು ಕಾಂಗ್ರೆಸ್ ಪಕ್ಷದ ಕದ ತಟ್ಟಿದ್ದರು. ಮಾಜಿ ಪ್ರಧಾನಿ ದೇವೇಗೌಡರು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದರ ಜತೆಗೆ ರಾಜಕೀಯವಾಗಿ ಚರ್ಚೆಗೆ ಬರದ, ಇದುವರೆಗೂ ರಹಸ್ಯವಾಗಿದ್ದ ಹಲವಾರು ಆಸಕ್ತಿದಾಯಕ ಸಂಗತಿಗಳು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ.

ಎಸ್.ಎಂ.ಕೃಷ್ಣ ಅವರ ಆತ್ಮಕಥೆ ಸಾಕಷ್ಟು ಕುತೂಹಲ ಕೆರಳಿಸಿದ್ದು, ವರನಟ ಡಾ. ರಾಜಕುಮಾರ್ ಅಪಹರಣ, ಅವರ ಬಿಡಯಗಡೆಗಾಗಿ ಸಿಎಂ ಆಗಿದ್ದಾಗ ನಡೆಸಿದ ಕಸರತ್ತು, ನರಹಂತಕ ವೀರಪ್ಪನ್ ಉಪಟಳಗಳು, ಕಾಂಗ್ರೆಸ್ ಪಕ್ಷದಲ್ಲಿನ ರಾಜಕಾರಣದ ಅನುಭವ, ಕಾಂಗ್ರೆಸ್ ಪಕ್ಷ ಬಿಟ್ಟು ಬಿಜೆಪಿ ಸೇರಿದ ಕಾರಣಗಳು ಹೀಗೆ ಹಲವಾರು ಸಂದರ್ಭಗಳ ಬಗ್ಗೆ ಕುತೂಹಲಕಾರಿ ಅಂಶಗಳು ಪುಸ್ತಕದಲ್ಲಿವೆ ಎಂದು ಹೇಳಲಾಗಿದೆ.




For All Latest Updates

ABOUT THE AUTHOR

...view details