ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಸಿವಿಲ್) ನೇಮಕಾತಿ ಮತ್ತು ಮುಂಬಡ್ತಿ ಹುದ್ದೆಗಳ ನಡುವೆ ಇರುವ ಅನುಪಾತ 70:30 ರ ಧೋರಣೆ ಪರಿಷ್ಕರಿಸಿ 50:50 ರ ಅನುಪಾತಕ್ಕೆ ಹೆಚ್ಚಿಸುವ ಬಗ್ಗೆ ಹಾಗೂ ಎಎಸ್ಐ ಸಿವಿಲ್ ಹುದ್ದೆಯಿಂದ ಪಿಎಸ್ಐ ಹುದ್ದೆಗೆ ಬಡ್ತಿ ನೀಡುವ ಸೇವಾ ಅವಧಿಯನ್ನು 3 ವರ್ಷಕ್ಕೆ ಇಳಿಸಬೇಕು ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಪತ್ರದ ಸಾರಾಂಶ:
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಹುದ್ದೆಗಳನ್ನು 2003 ರಿಂದ ನೇರ ನೇಮಕಾತಿ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಮುಖಾಂತರ ಆಯ್ಕೆ ಮಾಡಲಾಗುತ್ತಿದ್ದು, ಬಹುತೇಕ ನೌಕರರು ಶೇ.75 ರಷ್ಟು ಪದವಿಧರರಾಗಿದ್ದಾರೆ. ಇಲಾಖೆಯಲ್ಲಿ ಸುಮಾರು 25 ವರ್ಷ ಸೇವೆ ಮಾಡಿದ್ದರೂ ಸಹ ಇನ್ನೂ ಒಂದೇ ಹುದ್ದೆಯಲ್ಲಿ ಇರುವುದರಿಂದ ಇಲಾಖೆಯ ಸೇವಾ ನಿರತ ಸಿಬ್ಬಂದಿಯಲ್ಲಿ ಆತ್ಮಸ್ಥೆರ್ಯ ಮತ್ತು ದಕ್ಷತೆ ಇಳಿಮುಖವಾಗುತ್ತಿದೆ. ಸೇವಾ ನಿರತ ಸಿಬ್ಬಂದಿ ಪಿ.ಎಸ್.ಐ ವೃಂದದ ನೇರ ನೇಮಕಾತಿ ಹುದ್ದೆಗೆ ಸ್ಪರ್ಧಿಸುತ್ತಿದ್ದರೂ ಸಹ ಅಖಿತ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಟ ಅಂಕಗಳನ್ನು ಪಡೆದುಕೊಂಡು ಆಯ್ಕೆಯಾಗುತ್ತಿದ್ದಾರೆ. ಆದರೆ ಸೇವಾನಿತರ ಅಭ್ಯರ್ಥಿಗಳ ನಡುವೆಯೇ ತೀವ್ರ ತರಹದ ಪೈಪೋಟಿಯಿದ್ದು, ಗರಿಷ್ಠ ಅಂಕಗಳನ್ನು ಪಡೆಯಬೇಕಾಗಿದೆ. ಅದರಲ್ಲೂ 90 ರಷ್ಟು ಸಿಬ್ಬಂದಿ ಸಮೀಪ ಸ್ಪರ್ಧಿಗಳಾಗಿದ್ದು, ಕೇವಲ ಅರ್ಧ ಅಂಕಗಳಲ್ಲಿ ಮಾತ್ರ ವ್ಯತ್ಯಾಸವಾಗಿ ಪಿ.ಎಸ್.ಐ ಹುದ್ದೆಗೆ ಅರ್ಹರಾಗುತ್ತಿರುವುದಿಲ್ಲ. ಕನಿಷ್ಠ 3 ಮುಂಬಡ್ತಿ ಹುದ್ದೆಗೇರಲು ಇಲಾಖೆಯ ನ್ಯೂನ್ಯತೆಗಳನ್ನು ಹಾಗೂ ಅನುಪಾತ ಹೆಚ್ಚಳದ ಧೋರಣೆಗಳನ್ನು ಸರಿಪಡಿಸಬೇಕು ಎಂದಿದ್ದಾರೆ.
ಪತ್ರದಲ್ಲಿ ಪ್ರಕಟಿಸಿದ ಪ್ರಮುಖ ಅಂಶಗಳು: