ಕರ್ನಾಟಕ

karnataka

ETV Bharat / city

ಮಾದಕ ವಸ್ತು ಮಾರಾಟ: ಇಬ್ಬರು ವಿದೇಶಿ ಪ್ರಜೆಗಳು ಸೇರಿ ಮೂವರ ಬಂಧನ - ವಿದೇಶಿ ಪ್ರಜೆಗಳ ಬಂಧನ

ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಮಾದಕ ವಸ್ತು ಮಾರಲು ಯತ್ನಿಸುತ್ತಿದ್ದ ನೈಜೀರಿಯಾ ಪ್ರಜೆ ಸೇರಿದಂತೆ ಒಟ್ಟು ಮೂವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ವಿದೇಶಿ ಪ್ರಜೆಗಳ ಬಂಧನ
ವಿದೇಶಿ ಪ್ರಜೆಗಳ ಬಂಧನ

By

Published : May 22, 2022, 10:49 AM IST

Updated : May 22, 2022, 1:16 PM IST

ಯಲಹಂಕ: ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಮಾದಕ ವಸ್ತು ಮಾರಲು ಯತ್ನಿಸುತ್ತಿದ್ದ ಇಬ್ಬರನ್ನು ಯಲಹಂಕ ಪೊಲೀಸರು ಬಂಧಿಸಿದ್ದಾರೆ. ಎನ್ಕುಸಿ ಎವ್ರಾ ಜಾರ್ಜ್ (34) ಮತ್ತು ಮೊಹಮ್ಮದ್ ಫಾರುಕ್(29) ಬಂಧಿತರು. ಎನ್ಕುಸಿ ಎವ್ರಾ ಜಾರ್ಜ್ ರುವಾಂಡ ದೇಶದ ಪ್ರಜೆ. ಆರೋಪಿಗಳಿಂದ 8 ಗ್ರಾಂ ಎಂಡಿಎಂಎ ಮಾದಕ ದ್ರವ್ಯ, 25 ಸಾವಿರ ನಗದು ಹಾಗು 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಮಾದಕ ವಸ್ತು ಮಾರಾಟ ಪ್ರಕರಣ

ನೈಜೀರಿಯಾ ಪ್ರಜೆ ಬಂಧನ: ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತಿರುಮೇನಹಳ್ಳಿ ಗ್ರಾಮದ ಕಡಾಯಿ ಹೊಟೇಲ್ ಬಳಿ ಗ್ರಾಹಕರಿಗೆ ಮಾದಕ ದ್ರವ್ಯ ಮಾರಾಟ ಮಾಡಲು ಪ್ರಯತ್ನಿಸಿದ ನೈಜೀರಿಯಾ ಪ್ರಜೆ ಜೆರ್ರಿ (35) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿಯಿಂದ 4 ಲಕ್ಷ ರೂ. ಮೌಲ್ಯದ 80 ಗ್ರಾಂ ಎಂಡಿಎಂಎ, ಕೃತ್ಯಕ್ಕೆ ಬಳಸಿದ ಮೊಬೈಲ್ ಮತ್ತು ಕಾರು ಜಪ್ತಿ ಮಾಡಲಾಗಿದೆ.

ವಿಚಾರಣೆ ವೇಳೆ ಆರೋಪಿ ವೀಸಾ ಮತ್ತು ಪಾಸ್‌ಪೋರ್ಟ್ ಹೊಂದದೇ ಕಾನೂನುಬಾಹಿರವಾಗಿ ರಾಜ್ಯದಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಗೋವಾದಲ್ಲಿ ಭೀಕರ ಅಪಘಾತ: ಬೆಳಗಾವಿಯ ಮೂವರು ಯುವಕರ ದುರ್ಮರಣ

Last Updated : May 22, 2022, 1:16 PM IST

ABOUT THE AUTHOR

...view details