ಕರ್ನಾಟಕ

karnataka

ETV Bharat / city

10 ಲಕ್ಷ ಲಂಚ ಸ್ವೀಕಾರ ಆರೋಪ: ಇನ್ಸ್​ಪೆಕ್ಟರ್ ವಿರುದ್ಧ ಎಸಿಬಿ ಎಫ್ಐಆರ್

ಆರೋಪಿಯೊಂದಿಗೆ ಶಾಮೀಲಾಗಿ 10 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಆರೋಪದಡಿ ಇಂದಿರಾನಗರ ಇನ್ಸ್​ಪೆಕ್ಟರ್ ರಾಮಮೂರ್ತಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಲ್ಲಿ (ಎಸಿಬಿ) ದೂರು ದಾಖಲಾಗಿದೆ.

ಇನ್ಸ್​ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲು
ಇನ್ಸ್​ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲು

By

Published : Feb 6, 2021, 2:55 PM IST

ಬೆಂಗಳೂರು:‌ 10 ಲಕ್ಷ ರೂ. ಲಂಚ ಪಡೆದ ಆರೋಪದಡಿ ಇಂದಿರಾನಗರ ಇನ್ಸ್​ಪೆಕ್ಟರ್ ರಾಮಮೂರ್ತಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯಲ್ಲಿ (ಎಸಿಬಿ) ದೂರು ದಾಖಲಾಗಿದೆ.

ಇಂದಿರಾ ನಗರ ಕ್ಲಬ್ ಕಾರ್ಯದರ್ಶಿ ನಾಗೇಂದ್ರ ನೀಡಿದ ದೂರಿನ ಮೇರೆಗೆ ಇನ್ಸ್​ಪೆಕ್ಟರ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಎಸಿಬಿ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

ದೂರು ಪ್ರತಿ

ಕಳೆದ ವರ್ಷ ಲಾಕ್ ಡೌನ್ ವೇಳೆ ಕೊರೊನಾ‌‌ ಮಾರ್ಗಸೂಚಿ ಉಲ್ಲಂಘಿಸಿ, ಇಂದಿರಾನಗರ ಕ್ಲಬ್ ಸದಸ್ಯನಾಗಿದ್ದ ರಾಮ್ ಮೋಹನ್ ಮೆಹನ್ ಅತಿಕ್ರಮವಾಗಿ ಕ್ಲಬ್ ಪ್ರವೇಶಿಸಿದ್ದರು‌‌. ಇದನ್ನು ಪ್ರಶ್ನಿಸಿದ ಸೆಕ್ಯೂರಿಟಿ ಗಾರ್ಡ್​ಗೆ ರಾಮ್ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಿ ಇಂದಿರಾನಗರ ಪೊಲೀಸ್ ಠಾಣೆಯಲ್ಲಿ ನಾಗೇಂದ್ರ ದೂರು ನೀಡಿದ್ದರು‌.‌

ದೂರಿನ ಮೇರೆಗೆ ಆರೋಪಿ ವಿರುದ್ಧ ಇನ್ಸ್​ಪೆಕ್ಟರ್ ಪ್ರಕರಣ ದಾಖಲಿಸಿಕೊಂಡಿದ್ದರು‌‌‌.‌ ಸೂಕ್ತ ತನಿಖೆ ನಡೆಸದೆ ಆರೋಪಿಯೊಂದಿಗೆ ಶಾಮೀಲಾಗಿ ನ್ಯಾಯಾಲಯದಲ್ಲಿ‌ ಬಿ ರಿರ್ಪೋಟ್ ಸಲ್ಲಿಸಿದ್ದಾರೆ. ಜೊತೆಗೆ ರಾಮ್ ಮೋಹನ್ ಮೆಹನ್ ಬಳಿಯಿಂದ ಇನ್ಸ್​ಪೆಕ್ಟರ್ 10 ಲಕ್ಷ ರೂ. ಲಂಚ ಪಡದಿದ್ದಾರೆ ಎಂದು ಆರೋಪಿಸಿ ಎಸಿಬಿಯಲ್ಲಿ ನಾಗೇಂದ್ರ ದೂರು ನೀಡಿದ್ದರು.

ದೂರನ್ನು ಪರಿಶೀಲಿಸಿದ ನಂತರ ಮೆಲ್ನೋಟಕ್ಕೆ ಲಂಚ ಸ್ವೀಕಾರ ಸಾಬೀತಾಗಿದ್ದು, ಇನ್ಸ್​ಪೆಕ್ಟರ್ ವಿರುದ್ಧ ಎಸಿಬಿ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.‌ ಇತ್ತ ಇನ್ಸ್​ಪೆಕ್ಟರ್ ರಾಮಮೂರ್ತಿ ಪೊಲೀಸ್ ಠಾಣೆಗೂ ಬರದೆ ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ‌.

ABOUT THE AUTHOR

...view details