ಬೆಂಗಳೂರು: ಗುರಾಯಿಸಿದ್ದಕ್ಕೆ ಎಣ್ಣೆ ಏಟಿನಲ್ಲಿ ಎರಡು ರೌಡಿ ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ಘಟನೆ ಗಾಂಧಿ ನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ನಡೆದಿದೆ. ರಾಜರಾಜೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್ ರಾಘವೇಂದ್ರ ಹಾಗು ಶ್ರೀರಾಮಪುರ ರೌಡಿಶೀಟರ್ ಯಶವಂತ್ ನಡುವೆ ನಿನ್ನೆ ರಾತ್ರಿ ಗ್ಯಾಂಗ್ ವಾರ್ ನಡೆದಿದೆ.
ಗುಂಡೇರಿಸಿಕೊಂಡು ಗುರಾಯಿಸಿದ್ದಕ್ಕೆ ಬಾಟಲಿಯಲ್ಲಿ ಹೊಡೆದಾಡಿದ ರೌಡಿಗಳು - ಗುರಾಯಿಸಿದ್ದಕ್ಕೆ ಸಿನಿಮಾ ಶೈಲಿಯಲ್ಲಿ ರೌಡಿಗಳ ನಡುವೆ ಮಾರಾಮಾರಿ
ಗುರಾಯಿಸಿದ ಕಾರಣಕ್ಕೆ ಎಣ್ಣೆ ಏಟಿನಲ್ಲಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದ್ದು, ಮದ್ಯದ ಬಾಟಲಿಯಿಂದ ಒಬ್ಬರಿಗೊಬ್ಬರು ತಲೆಗೆ ಹೊಡೆದುಕೊಂಡಿದ್ದಾರೆ.
ರಾಘವೇಂದ್ರ ಮತ್ತು ಆತನ ಸ್ನೇಹಿತರಾದ ಆಕಾಶ್, ನವೀನ್ ನಿನ್ನೆ ರಾತ್ರಿ 12.30ಕ್ಕೆ ಸೆವೆನ್ ಹಿಲ್ಸ್ ಬಾರ್ಗೆ ಪಾರ್ಟಿಗೆ ಬಂದಿದ್ದರು. ಈ ವೇಳೆ ಬಾತ್ ರೂಮ್ಗೆ ಹೋದಾಗ ಅಲ್ಲಿದ್ದ ಯಶವಂತ್, ರಾಘವೇಂದ್ರನನ್ನು ಗುರಾಯಿಸಿದ್ದಾನೆ. ಬಳಿಕ ಯಾಕೋ ಗುರಾಯಿಸೊದು ಎಂದು ಕೇಳಿದಕ್ಕೆ ಯಶವಂತ್ ಹಾಗು ಸ್ನೇಹಿತರು ಮದ್ಯದ ಬಾಟಲಿಯಿಂದ ರಾಘವೇಂದ್ರನ ಮೇಲೆ ಹಲ್ಲೆ ನಡೆಸಿದ್ದಾರೆ. ನಂತರ ಯಶವಂತ್ ಬಾರ್ ಕೆಳಗೆ ಬಂದಾಗ ರಾಘವೇಂದ್ರನ ಕಡೆಯವರು ಬಾಟಲಿಯಿಂದ ಆತನ ತಲೆಗೆ ಹೊಡೆದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮಂಗಳೂರು: ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಗೆ ಗುಂಡು