ಕರ್ನಾಟಕ

karnataka

ETV Bharat / city

ಬೆಂಗಳೂರಿನಲ್ಲಿ ಅನ್ನದಾತರ ಆಕ್ರೋಶದ ಕಿಚ್ಚು: ರೈತರನ್ನು ವಶಕ್ಕೆ ಪಡೆದ ಪೊಲೀಸರು - ರೈತರು

ಕೃಷಿ ಸಂಬಂಧಿತ ಮಸೂದೆಗಳ ಜಾರಿ ವಿರೋಧಿಸಿ ಬೆಂಗಳೂರಿನಲ್ಲಿ ರೈತ ಹಾಗೂ ಇತರೆ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಟೌನ್‌ಹಾಲ್ ರಸ್ತೆ ಬಳಿ ಪ್ರಧಾನಿ ಮೋದಿ ‌ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಕೆಲ ಪ್ರತಿಭಟನಾಕಾರರನ್ನು ವಶಕ್ಕೆ‌ ಪಡೆದರು.

farmers-opposing-for-agri-bill-protesters-arrest-in-bangalore
ಬೆಂಗಳೂರಿನಲ್ಲಿ ಅನ್ನದಾತರ ಆಕ್ರೋಶದ ಕಿಚ್ಚು; ರೈತರನ್ನು ವಶಕ್ಕೆ ಪಡೆದ ಖಾಕಿ

By

Published : Sep 28, 2020, 2:45 PM IST

ಬೆಂಗಳೂರು: ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಹಾಗೂ ಎಪಿಎಂಸಿ ಕಾಯ್ದೆಗಳಿಗೆ ತಿದ್ದುಪಡಿ ತಂದಿರುವುದನ್ನು ವಿರೋಧಿಸಿ ರೈತ ಹಾಗೂ ಇತರೆ ಸಂಘಟನೆಗಳ ಬಂದ್‌ ಬಿಸಿ ನಗರದ ಕೆಲ ಪ್ರದೇಶಗಳಿಗೆ ತಟ್ಟಿದ್ದು, ಪ್ರತಿಭಟನಾನಿರತ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಕರ್ನಾಟಕ ರೈತ ಸಂಘಟನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬುರು ಶಾಂತಕುಮಾರ್ ನೇತೃತ್ವದಲ್ಲಿ ರೈತ ಸಮುದಾಯ ಟೌನ್ ಹಾಲ್‌ ಬಳಿ ಸರ್ಕಾರ ವಿರುದ್ಧ ಪ್ರತಿಭಟನೆ ನಡೆಸಲಾಯಿತು. ರೈತರಿಗೆ ಮಾರಕವಾದ ಕಾಯ್ದೆಗಳನ್ನು ವಾಪಸ್ ತೆಗೆದುಕೊಳ್ಳಬೇಕೆಂದು‌ ಒತ್ತಾಯಿಸಿ ಅರೆಬೆತ್ತಲೆ, ಬೊಬ್ಬೆ ಹೊಡೆದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯತ್ನ ನಡೆಸಿದರು.

ಇದೇ ವೇಳೆ ಟೌನ್‌ಹಾಲ್ ರಸ್ತೆ ಬಳಿ ಪ್ರಧಾನಿ ಮೋದಿ ‌ಪ್ರತಿಕೃತಿ ದಹಿಸಿ ಅಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪೊಲೀಸರು ಕೆಲ ಪ್ರತಿಭಟನಾಕಾರರನ್ನು ವಶಕ್ಕೆ‌ ಪಡೆದುಕೊಂಡರು.

ಇದಕ್ಕೂ ಮುನ್ನ ತೆರೆದ ವಾಹನದಲ್ಲಿ ಮೈಸೂರು ಬ್ಯಾಂಕ್​​ವರೆಗೂ ಪ್ರತಿಭಟನಾ ಮೆರವಣಿಗೆ‌ ನಡೆಸಿ ಕೇಂದ್ರ ಹಾಗೂ ಸರ್ಕಾರಗಳ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಟೌನ್ ಹಾಲ್​​ನಿಂದ ಮೈಸೂರು ಬ್ಯಾಂಕ್ ವೃತ್ತಕ್ಕೆ‌ ಪ್ರತಿಭಟನಾ ಮೆರವಣಿಗೆ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಬಂದ ಪ್ರತಿಭಟನಾಕಾರರು ಅರೆಬೆತ್ತಲೆಯಾಗಿ ಬೊಬ್ಬೆ ಹೊಡೆದರೆ, ಕೆಲವರು ರಸ್ತೆಯಲ್ಲೇ ಉರುಳು ಸೇವೆ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ನಡೆಸಿದರು.

ಮೈಸೂರು ಬ್ಯಾಂಕ್ ರಸ್ತೆ ಸ್ಥಗಿತ
ಪ್ರತಿಭಟನಾ ಮೆರವಣಿಗೆ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಮೈಸೂರು ಬ್ಯಾಂಕ್ ರಸ್ತೆಯನ್ನು ಸ್ಥಗಿತಗೊಳಿಸಿದರು. ನಗರದ ವಿವಿಧ ಭಾಗಗಳಿಂದ ಮೆಜೆಸಿಕ್ಟ್ ಬಸ್ ನಿಲ್ದಾಣಕ್ಕೆ ಬರಬೇಕಿದ್ದ ಬಿಎಂಟಿಸಿ ಬಸ್‌ಗಳ ಸಂಚಾರದಲ್ಲಿ ಅಸ್ತವ್ಯಸ್ತವಾಗಿ ಟ್ರಾಫಿಕ್ ಜಾಮ್ ಉಂಟಾಯಿತು. ಇದೇ ವೇಳೆ ಆ್ಯಂಬುಲೆನ್ಸ್ ಸಂಚಾರಕ್ಕೆ ತೊಂದರೆಯಾಯಿತು.

ABOUT THE AUTHOR

...view details