ಬೆಂಗಳೂರು: ಬೆಂಗಳೂರಿನಿಂದ ಬ್ಯಾಂಕಾಕ್ನತ್ತ ಮಂಗಳವಾರ ಪ್ರಯಾಣ ಬೆಳೆಸಿದ್ದ ಇಂಡಿಗೋ ಏರ್ ವಿಮಾನದಲ್ಲಿ ಎಂಜಿನ್ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ಮ್ಯಾನ್ಮಾರ್ನ ಯಾಂಗೂನ್ನಲ್ಲಿ ಲ್ಯಾಂಡ್ ಮಾಡಲಾಗಿದೆ.
129 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡಿಗೋ ಏರ್ ವಿಮಾನದ ಎರಡು ಎಂಜಿನ್ಗಳ ಪೈಕಿ ಒಂದರಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಿಮಾನ ಟೇಕ್ ಆಫ್ ಆದ ನಂತರ ಒಂದು ಎಂಜಿನ್ನಲ್ಲಿ ಆಯಿಲ್ ಪ್ರೆಶರ್ ಕಾಣಿಸಿಕೊಂಡಿದ್ದು, ಪೈಲಟ್ ಮುನ್ನೆಚ್ಚರಿಕೆ ವಹಿಸಿ ಯಾಂಗೂನ್ನಲ್ಲಿ ಲ್ಯಾಂಡ್ ಮಾಡಿದರು. ತಕ್ಷಣವೇ ಅಲ್ಲಿಂದ ಮರು ಬುಕ್ಕಿಂಗ್ ಮಾಡಿ ಬ್ಯಾಂಕಾಕ್ಗೆ ಕಳುಹಿಸಿಕೊಟ್ಟಿತು. 129 ಪ್ರಯಾಣಿಕರಿಗೂ ಊಟ, ತಿಂಡಿ, ವಾಸ್ತವ್ಯ ಒದಗಿಸಲಾಗಿದೆ ಎಂದು ಇಂಡಿಗೋ ಏರ್ ಅಧಿಕಾರಿ ತಿಳಿಸಿದ್ದಾರೆ.
ವಿಮಾನದ ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡಿದ್ದು ಏಕೆ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ.