ಬೆಂಗಳೂರು:ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಎಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ವತಿಯಿಂದ ಬೃಹತ್ ಮೆರವಣಿಗೆ ಹಾಗೂ ಸ್ವಾತಂತ್ರ್ಯ ದಿನಾಚರಣೆಯನ್ನು ಮಲ್ಲೇಶ್ವರಂನ ಶಿರೂರು ಗ್ರೌಂಡ್ನಲ್ಲಿ ಏರ್ಪಡಿಸಲಾಗಿತ್ತು.
"ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ್ಯ" ಎಂಬ ಘೋಷವಾಕ್ಯದಡಿ, ಅಹೋರಾತ್ರಿ ಬಡವರ ಸ್ವಾತಂತ್ರ್ಯೋತ್ಸವ ನಡೆಯಿತು. ವಸತಿ ಸಂಬಂಧಿತ ಬಡವರ ಸಮಸ್ಯೆಗಳನ್ನು ನಡುರಾತ್ರಿ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ ತಮ್ಮ ಹಕ್ಕುಗಳನ್ನು ಸರ್ಕಾರವು ಇನ್ನು ತ್ವರಿತವಾಗಿ ಬಗೆಹರಿಸುವ ಕಾರ್ಯಸೂಚಿ ತರಬೇಕು ಎಂದು ತಮ್ಮ ಬೇಡಿಕೆಯನ್ನು ಇಟ್ಟರು.
ಬಡವರ ಭೂಮಿ ಮತ್ತು ವಸತಿ ಸಮಸ್ಯೆಗಳ ಹಕ್ಕೊತ್ತಾಯ ಪತ್ರವನ್ನು ಹಲವಾರು ವರ್ಷಗಳಿಂದ ಮುಖ್ಯಮಂತ್ರಿಗಳಿಗೆ ನೀಡಿದರೂ, ಸರ್ಕಾರದ ಉನ್ನತ ಸಮಿತಿ ಸರಿಯಾಗಿ ಕರ್ತವ್ಯ ನಿರ್ವಹಿಸದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಬಂದಾಗಿನಿಂದಲೂ ಇದುವರೆಗೂ ಬಡ ಜನರು ಪರಿತಪಿಸುವಂತೆ ಮಾಡಿದೆ ಎಂದು ಹೇಳಿದರು.
ಭೂಮಿ - ಮನೆಗಳಿಲ್ಲದ ಲಕ್ಷಾಂತರ ಕುಟುಂಬಗಳ ಬಡ ಜನತೆ ರಾಜ್ಯಾದ್ಯಂತ ಇಂದಿಗೂ ಲಕ್ಷಾಂತರ ಕುಟುಂಬಗಳ ಬಡಜನತೆ ಸಮಸ್ಯೆ ಪರಿಹಾರಕ್ಕಾಗಿ ಸ್ವಾತಂತ್ರ್ಯ ಬಂದ ಕಾಲದಿಂದ ಅನೇಕಾನೇಕ ಹೋರಾಟಗಳು ನಡೆಯುತ್ತಾ ಬಂದಿದ್ದು, ಹೋರಾಟಗಳ ಫಲವಾಗಿಯೇ ಅಂದಿನ ಸರ್ಕಾರಗಳು 'ಅಕ್ರಮ-ಸಕ್ರಮ' ಯೋಜನೆ ಘೋಷಿಸಿದ್ದಾರೆ ಎಂದರು.