ಬೆಂಗಳೂರು: ಸಿಲಿಕಾನ್ ಸಿಟಿಯ ವಾಯು ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಗಾಳಿಯಲ್ಲಿ ಮಾಲಿನ್ಯಕಾರಕಗಳ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿ ಹೆಚ್ಚುತ್ತಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ 2019 - 20 ನೇ ಸಾಲಿನ ವಾರ್ಷಿಕ ವರದಿಯಲ್ಲಿ ಅಂಕಿ - ಅಂಶ ಸಹಿತ ಇದನ್ನು ವಿವರಿಸಲಾಗಿದೆ.
ಬೆಂಗಳೂರು ವಾಯು ಗುಣಮಟ್ಟದಲ್ಲಿ ಉತ್ತಮ ಸ್ಥಾನದಿಂದ ಸಮಾಧಾನಕರ ಸ್ಥಾನಕ್ಕೆ ಕುಸಿತ ಕಂಡಿತ್ತು. ಇದೀಗ ಕೆಲ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಇನ್ನೂ ಕುಸಿದಿದ್ದು, ಸಾಧಾರಣ ಸ್ಥಾನಕ್ಕೆ ಬಂದು ತಲುಪಿದೆ. ಈಗಾಗಲೇ ದೇಶದಲ್ಲೇ ಅಸ್ತಮಾ ರೋಗಿಗಳು ಹೆಚ್ಚಿರುವ ಪಟ್ಟಿಯಲ್ಲಿ ಬೆಂಗಳೂರು ಮೂರನೇ ಸ್ಥಾನದಲ್ಲಿದೆ. ನಗರದ 31 ಕಡೆ ಹೆಚ್ಚು ಧೂಳು ಇದೆ ಎಂದು ಮಂಡಳಿ ಗುರುತಿಸಿದೆ. ಗಾಳಿಯಲ್ಲಿ ಧೂಳಿನ ಸಾಂದ್ರತೆ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ಧಾರವಾಡ, ದಾವಣಗೆರೆ, ಕಲಬುರಗಿಯನ್ನು ಕೂಡ (critically polluted areas) ಕ್ರಿಟಿಕಲಿ ಪೊಲ್ಯೂಟೆಡ್ ಏರಿಯಾ ಎಂದು ಪಟ್ಟಿ ಮಾಡಲಾಗಿದ್ದು, ಮಾಲಿನ್ಯ ತಡೆಗಟ್ಟಲು ಪ್ರತ್ಯೇಕ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ.
ವಾತಾವರಣದಲ್ಲಿರುವ ಗಂಧಕದ ಡೈ ಆಕ್ಸೈಡ್ (SO2), ನೈಟ್ರೇಟ್ಗಳು (NO2) , ಮಾಲಿನ್ಯಕಾರಣ ಕಣಗಳು (PM), ಅಮೋನಿಯಾ ( NH3) ಹಾಗೂ ಸೀಸದ ಪ್ರಮಾಣದ ಆಧಾರದಲ್ಲಿ ಗುಣಮಟ್ಟ ಸೂಚ್ಯಂಕ (ಎಕ್ಯುಐ) ಅನ್ನು ನಿರ್ಧರಿಸಲಾಗುತ್ತದೆ. ಈ ಕಣಗಳು ರಾಷ್ಟ್ರ ರಾಷ್ಟ್ರೀಯ ಮಿತಿಗಿಂತ ಕಡಿಮೆಯೇ ಇದ್ದರೂ, ಮಾಲಿನ್ಯಕಾರಕ ಕಣಗಳು (ಪಿಎಂ 2.5, ಪಿ.ಎಂ.10) ಮಾತ್ರ ರಾಷ್ಟ್ರೀಯ ಮಿತಿಗಿಂತ ಹೆಚ್ಚಾಗುತ್ತಿದೆ. ಅಂದರೆ ವಾಹನಗಳ ಹೊಗೆ, ಧೂಳು, ಕಾಮಗಾರಿಗಳಿಂದ ಉಂಟಾಗುವ ಧೂಳಿನ ಪ್ರಮಾಣ ಹೆಚ್ಚು ಇದೆ.
ಆರು ವಿಭಾಗದಲ್ಲಿ ವಾಯು ಗುಣಮಟ್ಟ ಸೂಚಿಸಲಾಗುತ್ತದೆ:
- ಉತ್ತಮ (0-50)
- ಸಮಾಧಾನಕರ (51-100)
- ಮಧ್ಯಮ/ಸಾಧಾರಣ (101-200)
- ಕಳಪೆ (201-300)
- ತೀರ ಕಳಪೆ (301-400)
- ಆತಂಕಕಾರಿ/ಗಂಭೀರ (>401)
ನಗರದಲ್ಲಿ ಒಟ್ಟು 18 ಕಡೆ ವಾಯುಮಾಲಿನ್ಯ ಮಾಪಕಗಳಿದ್ದು, ನಿರಂತರವಾಗಿ ವಾಯು ಗುಣಮಟ್ಟ ಅಳೆಯಲಾಗುತ್ತದೆ.
20 ಸ್ಥಳಗಳಲ್ಲಿ ಹೇಗಿದೆ ವಾಯುಗುಣಮಟ್ಟ
1) ವೈಟ್ ಫೀಲ್ಡ್ ಕೈಗಾರಿಕಾ ಪ್ರದೇಶ - 82.7
2) ಯಲಹಂಕ-ರೈಲ್ ವೀಲ್ ಫ್ಯಾಕ್ಟ್ರಿ - 81.4
3) ಯಶವಂತಪುರ ಪೊಲೀಸ್ ಠಾಣೆ- 75.0
4) ಸೆಂಟ್ರಲ್ ಸಿಲ್ಕ್ ಬೋರ್ಡ್, ಹೊಸೂರು ರಸ್ತೆ- 90.1
5) ನಿಮ್ಹಾನ್ಸ್- 60.0
6) ಸೆಂಟ್ರಲ್ ಸಿಲ್ಕ್ ಬೋರ್ಡ್- 80.1
7) ಪೀಣ್ಯ - 96.3
8) ಸ್ವಾನ್ ಸಿಲ್ಕ್, ಪೀಣ್ಯ- 86.4