ಬೆಂಗಳೂರು: ನಗರದಲ್ಲಿ ಮಂಗನಹಳ್ಳಿ ಬ್ರಿಡ್ಜ್ ಬಳಿ ತಂದೆ ಮಗಳು ಡೆಡ್ಲಿ ಟ್ರಾನ್ಸ್ ಫಾರ್ಮರ್ನಿಂದ ಸಾವನ್ನಪ್ಪಿದ ಬೆನ್ನಲ್ಲೇ ಬೆಸ್ಕಾಂ ಅಲರ್ಟ್ ಆಗಿದೆ. ಸಾಲು ಸಾಲು ಅವಘಡಗಳ ಬಳಿಕ ಬೆಸ್ಕಾಂ ಅಧಿಕಾರಿಗಳು ಎಚ್ಚೆತುಕೊಂಡಿದ್ದಾರೆ. ಎಲ್ಲಾ ಕಡೆ ಅವಘಡಗಳನ್ನು ತಪ್ಪಿಸುವ ಕೆಲಸಕ್ಕೆ ಸಮರೋಪಾದಿಯಲ್ಲಿ ಅಧಿಕಾರಿಗಳ ತಂಡ ಮುಂದಾಗಿದೆ.
ರಾಜಧಾನಿಯಲ್ಲಿ ಎಲ್ಲೆಲ್ಲಿ ಡೆಡ್ಲಿ ಟ್ರಾನ್ಸ್ ಫಾರಂಗಳಿವೆಯೋ ಎಲ್ಲೆಲ್ಲಿ ವಿದ್ಯುತ್ ಲೈನ್ಗಳ ಸಮಸ್ಯೆ ಇದೆಯೋ ಅಲ್ಲೆಲ್ಲ ಕೂಡಲೆ ಕಾರ್ಯಾಚರಣೆಗೆ ಮುಂದಾಗಿ ಎಂದು ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಅದರಂತೆ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಲ್ಲಾ ಜಿಲ್ಲಾ ಪ್ರದೇಶಗಳಲ್ಲಿ ಟ್ರಾನ್ಸ್ ಫಾರಂ ರಿಪೇರಿ ಕೆಲಸಕ್ಕೆ ಕೈಹಾಕಿದೆ.
ಅವಘಡಗಳನ್ನು ತಗ್ಗಿಸಲು ಬೆಸ್ಕಾಂ ಅಧಿಕಾರಿಗಳ ಕಾರ್ಯಾಚರಣೆ:ಸಾಕಷ್ಟು ಜಾಗದಲ್ಲಿ ಟ್ರಾನ್ಸ್ ಫಾರಂಗಳ ಸಮಸ್ಯೆ ಇದೆ. ಈ ಬಗ್ಗೆ ಸಾರ್ವಜನಿಕರ ದೂರು ಬಂದರೂ ಅಧಿಕಾರಿಗಳ ಮಾತ್ರ ತಲೆಕೆಡಸಿಕೊಂಡಿರಲಿಲ್ಲ. ಆದರೆ ಇತ್ತೀಚೆಗೆ ಮೃತಪಟ್ಟ ತಂದೆ ಮಗಳ ಪ್ರಕರಣದ ಬಳಿಕ ಎಚ್ಚೆತುಕೊಂಡಿದ್ದಾರೆ. ಅಪಾಯಕಾರಿ ಅನುಪಯುಕ್ತ ಟ್ರಾನ್ಸ್ ಫಾರ್ಮರ್ಗಳ ಸರಿಪಡಿಸುವ ಕೆಲಸ ಮಾಡಲಾಗುತ್ತಿದ್ದು ಕಳೆದ 15 ದಿನಗಳಲ್ಲಿ ಸಾವಿರಾರು ಟ್ರಾನ್ಸ್ ಫಾರಂಗಳನ್ನು ಸರಿಪಡಿಸಲಾಗಿದೆ.