ಬೆಂಗಳೂರು: ನಮ್ಮದು ಸ್ಪಂದನಾಶೀಲ ಸರ್ಕಾರ. ರೈತರ ಒತ್ತಾಯಕ್ಕೆ ನಮ್ಮ ಪ್ರಧಾನಿಗಳು ಸ್ಪಂದಿಸಿದ್ದಾರೆ. ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಾಪಸ್ (Repeal of 3 farm laws) ಪಡೆಯುತ್ತಿರುವುದಕ್ಕೂ ಪಂಚರಾಜ್ಯಗಳ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraja bommai) ಸ್ಪಷ್ಟಪಡಿಸಿದ್ದಾರೆ.
ಬಹಳಷ್ಟು ಸುಧಾರಣೆಗಳ ಅವಶ್ಯಕತೆ ಇದೆ
ಆರ್‌ಟಿ ನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತಿರುವುದಾಗಿ ಪ್ರಧಾನಿ ನರೇಂದ್ರ ಮೋದಿ(PM Narendra Modi) ಘೋಷಿಸಿದ್ದಾರೆ. ನಮ್ಮ ದೇಶದಲ್ಲಿ ಜಾಗತೀಕರಣ, ಉದಾರೀಕರಣ ಪ್ರಾರಂಭವಾಗಿದ್ದು ಯುಪಿಎ ಸರ್ಕಾರದ ಅವಧಿಯಲ್ಲಿ. ಅದರ ಅಂಗವಾಗಿ ಬಹಳಷ್ಟು ಹೊಸ ಕಾಯ್ದೆಗಳನ್ನು ತರಬೇಕು ಎಂದು ಅವರು ಚಿಂತನೆ ಮಾಡಿದ್ದರು. ವಿಶ್ವ ವಾಣಿಜ್ಯ ಒಪ್ಪಂದವನ್ನು ಯುಪಿಎ ಸರ್ಕಾರ ಇದ್ದಾಗಲೇ ಮಾಡಿದ್ದು, ಅದರಲ್ಲಿ ಬಹಳಷ್ಟು ಸುಧಾರಣೆಗಳನ್ನು ಕೃಷಿ ಮಾರುಕಟ್ಟೆ ವ್ಯಾಪ್ತಿಯಲ್ಲಿ ತರಬೇಕು ಎನ್ನುವುದು ಕೂಡ ಇದೆ ಎಂದು ಸಿಎಂ ಹೇಳಿದ್ದಾರೆ.
ರೈತರ ಮನವೊಲಿಸುವ ನಮ್ಮ ಪ್ರಯತ್ನ ವಿಫಲವಾಗಿದೆ
ಯುಪಿಎ ಸರ್ಕಾರದಲ್ಲಿ ಇದ್ದ ಕರಡು ನೀತಿಯನ್ನು ಎಲ್ಲ ರಾಜ್ಯದ ಅಭಿಪ್ರಾಯವನ್ನು ಕೇಳಿ ನೇರವಾಗಿ ರೈತರು ಬೆಳೆದ ಬೆಳೆಯನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದು ಎನ್ನುವ ತೀರ್ಮಾನ ಮಾಡಿ ಜಾರಿಗೆ ತರಲು ಹೊರಟಿದ್ದೆವು. ಆದರೆ, ಪಂಜಾಬ್, ಹರಿಯಾಣ ಸೇರಿ ಕೆಲ ರಾಜ್ಯದ ರೈತರು ಇದನ್ನು ವಿರೋಧಿಸಿ ಪ್ರತಿಭಟನೆ(farmers protest) ಮಾಡಿದರು. ರೈತರ ಮನವೊಲಿಸುವ ನಮ್ಮ ಪ್ರಯತ್ನ ವಿಫಲವಾಯಿತು.