ಕರ್ನಾಟಕ

karnataka

ETV Bharat / city

ಡಿಕೆಶಿ ವಿರುದ್ಧ 74.96 ಕೋಟಿ ರೂ.ಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿ ಆರೋಪದ ಪ್ರಕರಣ ದಾಖಲಿಸಿದ ಸಿಬಿಐ - ಸಂಸದ ಡಿ ಕೆ ಸುರೇಶ್

CBI raid on Dk brothers' residence
ಡಿ ಕೆ ಶಿವಕುಮಾರ್​ ಮನೆ ಮೇಲೆ ಸಿಬಿಐ ದಾಳಿ

By

Published : Oct 5, 2020, 9:17 AM IST

Updated : Oct 5, 2020, 7:15 PM IST

19:08 October 05

ಡಿಕೆಶಿ ವಿರುದ್ಧ ಅಕ್ರಮ ಆಸ್ತಿ ಪ್ರಕರಣ ದಾಖಲು

ಬೆಂಗಳೂರು: ಸುಮಾರು 74.96 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ಅಧಿಕಾರಿಗಳು ಮಾಜಿ ಸಚಿವ/ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಾಸಕರ ಬೆಂಗಳೂರಿನ ಮನೆ, ಕಚೇರಿ ಹಾಗೂ ದೆಹಲಿ, ಮುಂಬೈ ಸೇರಿದಂತೆ 14 ಸ್ಥಳಗಳಲ್ಲಿ ಇಂದು ಬೆಳಗಿನಿಂದಲೇ ಶೋಧ ಕಾರ್ಯ ನಡೆಸಲಾಯಿತು. ಸುಮಾರು 57 ಲಕ್ಷ ರೂ. ನಗದು ಮತ್ತು ಹಲವು ದೋಷಾರೋಪಣೆಗೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

18:42 October 05

ಡಿಕೆ ಬ್ರದರ್ಸ್ ಜಂಟಿ​ ಸುದ್ದಿಗೋಷ್ಠಿ

  • 2017ರಲ್ಲಿ ಸದಾಶಿವನಗರದ ಮನೆ ಮೇಲೆ ದಾಳಿ ನಡೆದಿತ್ತು. ಆ ಬಳಿಕ ಗುಜರಾತ್ ಚುನಾವಣೆ ವೇಳೆಯೂ ದಾಳಿ ಆಗಿತ್ತು. ಈ ಸಂದರ್ಭದಲ್ಲಿ ಕೂಡ ನನ್ನ ಬಂಧನ ಆಗುತ್ತದೆ ಎಂಬ ನಿರೀಕ್ಷೆ ಇತ್ತು: ಡಿಕೆಶಿ
  • ಆ ಬಳಿಕ ನನ್ನ ಮೇಲೆ ಕೇಸ್ ಆಯಿತು. ಅರ್ಥಿಕ ಅಪರಾಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಯಿತು. ಆಮೇಲೆ ಮತ್ತೆ ಜಾಮೀನಿ ತಗೊಂಡು ಹೊರ ಬಂದೆ: ಶಿವಕುಮಾರ್​
  • ಅದಾದ ನಂತರ ಜಾರಿ ನಿರ್ದೇಶನಾಲಯ ದಾಳಿ ಮಾಡಿ ನನ್ನನ್ನು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದರು. ಈ ಸಂದರ್ಭದಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರು ಡಿಕೆಗೆ ಈ ರೀತಿಯಾಗಬಾರದೆಂದು ಹೋರಾಟ ನಡೆಸಿದ್ದರು ಎಂದು ನೆನೆದರು.
  • ಸಾವಿರ ಜನ ನನಗೋಸ್ಕರ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಕಮಿಷನರ್, ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದರು.
  • ಡಿಕೆಶಿ ಬೆಂಬಲಿಗರು ಶಾಂತಿ ಪ್ರಿಯರು ಇದನ್ನು ಮರೆಯಲು ಸಾಧ್ಯವಿಲ್ಲ ಎಂದು ಹೇಳಿದರು.
  • ಎಲ್ಲಾ ಧರ್ಮದ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಕುಟುಂಬಕ್ಕೆ ಶಕ್ತಿ ನೀಡಿದ್ದಾರೆ.  ಸೋನಿಯಾ ಗಾಂಧಿಯವರು ನನಗೆ ಶಕ್ತಿ ತುಂಬಿದ್ದಾರೆ. ಜೈಲಿಂದ ಬಂದ ಬಳಿಕ ನನಗೆ ಜವಾಬ್ದಾರಿ ಕೊಟ್ಟರು: ಕೆಪಿಸಿಸಿ ಅಧ್ಯಕ್ಷ
  • ನಾನು ನೊಂದು- ಬೆಂದು ಬಂದಿದ್ದೇನೆ. ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಕೊಟ್ಟಿದ್ದಾರೆ. ಪಕ್ಷದ ಮುಖಂಡರು ಬೆಂಬಲಿಸಿ ಜವಾಬ್ದಾರಿ ಕೊಟ್ಟಿದ್ದಾರೆ. ಕೊರೊನಾ ಬಂದಿದೆ, ಜನರು ಸಂಕಷ್ಟದಲ್ಲಿದ್ದಾರೆ: ಡಿಕೆಶಿ

ಬೆಂಗಳೂರು: ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ನಮ್ಮ ಮನೆ ಮೇಲೆ‌‌‌‌‌‌ ಕೇಂದ್ರ ಸರ್ಕಾರ‌ ಹಿಂದೆ ನಿಂತು ಸಿಬಿಐಯಿಂದ‌‌ ದಾಳಿ ನಡೆಸುತ್ತಿದೆ ಎಂದು ಸಂಸದ ಡಿಕೆ ಸುರೇಶ್ ಆರೋಪಿಸಿದರು.

ತಮ್ಮ ಮನೆ ಹಾಗೂ ಕಚೇರಿ ಮೇಲೆ ಕೇಂದ್ರೀಯ ತನಿಖಾ ದಳ (ಸಿಬಿಐ) ದಾಳಿಯ ಬಗ್ಗೆ ಡಿಕೆ ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್​ ಹಾಗೂ ಡಿಕೆ ಸುರೇಶ್ ಜಂಟಿ ಸುದ್ದಿಗೋಷ್ಠಿ ನಡೆಸುತ್ತಿದ್ದಾರೆ. ಈ ವೇಳೆ ಡಿಕೆ ಸುರೇಶ್ ಮಾತನಾಡಿ,  ಕೇಂದ್ರ ತನಿಖಾ ಸಂಸ್ಥೆಯನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಯಾವುದೇ ದಾಳಿ ನಡೆಸಿದರೂ ಬಿಜೆಪಿಯ ಕುತಂತ್ರಕ್ಕೆ ನಾವು ಬಗ್ಗುವುದಿಲ್ಲ ಎಂದರು.

ನಮ್ಮನ್ನು ಬೆಂಬಲಿಸುತ್ತಿರುವ ಅಭಿಮಾನಿಗಳ ಬಳಗಕ್ಕೆ ಧನ್ಯವಾದ. ಕಾರ್ಯಕರ್ತರ ಅಭಿಯಾನಕ್ಕೆ ನಾನು ಚಿರಋಣಿ. ಕುಟುಂಬ ಹಾಗೂ ಪಕ್ಷ ಅಭಿಮಾನಿಗಳಿಗೆ ನಾವು ತಲೆ ಬಾಗುತ್ತೇವೆ ಎಂದರು.

ನಿಮ್ಮ ಅಭಿಮಾನವೇ ನನಗೆ ಶಕ್ತಿ. ನಾನು ಎಂದಿಗೂ ಕಳಂಕ ತರುವ ಕೆಲಸ‌ ಮಾಡಿಲ್ಲ. ಚುನಾವಣೆ ಮುಗಿಯುವ ತನಕ ಇಂತಹ ದಾಳಿ ನಡೆಯುತ್ತಲೇ ಇರುತ್ತವೆ. ಈ ಹಿಂದೆ ಐಟಿ ಹಾಗೂ ಇಡಿ ದಾಳಿ ಮಾಡಿತ್ತು. ಈಗ ಸಿಬಿಐ ದಾಳಿ ಮಾಡಿದೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ನಾನು ತಿಹಾರ್ ಜೈಲಿನಲ್ಲಿ ಇದ್ದಾಗ ಐಟಿ ಅಧಿಕಾರಿಗಳು ಅನೇಕ ಪ್ರಶ್ನೆ‌ಗಳನ್ನು ಕೇಳಿದ್ದರು. ನಾನು ತಪ್ಪು ಮಾಡಿದರೆ ತಾನೇ ಹೆದರುವ ಪ್ರಶ್ನೆ. ನಾನು ಯಾವುದೇ ತಪ್ಪು ಮಾಡಿಲ್ಲ. 2016ರಲ್ಲಿ ಗುಜರಾತ್ ಚುನಾವಣೆ ವೇಳೆ ಐಟಿಯಿಂದ ದಾಳಿ ಮಾಡಿಸಿದ್ದರು. ಮತ್ತೆ ಇಡಿ ದಾಳಿ‌ಮಾಡಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಈಗ ಉಪಚುನಾವಣೆ ಬರುತ್ತಿದೆ. ಹೀಗಾಗಿ, ಈಗ ಸಿಬಿಐ ದಾಳಿ ನಡೆದಿದೆ ಎಂದರು.

30 ವರ್ಷ ರಾಜಕಾರಣದಲ್ಲಿ ಯಾರೂ ನನ್ನನ್ನು ಭ್ರಷ್ಟ ಎಂದು ಕರೆದಿಲ್ಲ. ಆದರೆ ಸರ್ಕಾರ ಈ ಸಂದರ್ಭದಲ್ಲಿ ಈ ರೀತಿ ಮಾಡುವುದು ತಪ್ಪು. ಮನೆಯಲ್ಲಿ 50 ಲಕ್ಷ ರೂ., ಚಿನ್ನಾಭರಣ ದೊರೆಕಿದೆ ಎನ್ನುತ್ತಿದ್ದಾರೆ. ಇದೆಲ್ಲಾ ಸುಳ್ಳು. ರಾಜಕೀಯವಾಗಿ ನನಗೆ ತೊಂದರೆ ಕೊಡುತ್ತಿದ್ದೀರಾ. ನಾನು ಇದನ್ನು ಎದುರಿಸಲು ಸಿದ್ಧವಾಗಿದ್ದೇನೆ ಎಂದು ಹೇಳಿದರು.

17:39 October 05

ಡಿಕೆಶಿ ಮನೆ ಮೇಲೆ ಸಿಬಿಐ ದಾಳಿ ಖಂಡಿಸಿ ಹೆಬ್ಬಾಳ್ಕರ್ ಪುತ್ರನ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ

  • ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆಗಳ ಮೇಲೆ ಸಿಬಿಐ ದಾಳಿ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ
  • ಕಾಂಗ್ರೆಸ್ ಯುವ ನಾಯಕ ಹಾಗೂ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ನೇತೃತ್ವದಲ್ಲಿ ಪ್ರತಿಭಟನೆ
  • ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ಭಾಗಿ
  • ಪ್ರತಿಭಟನೆ ವೇಳೆ "ಡಿಕೆಶಿ ತುಮ್ ಆಗೆ ಬಡೋ, ಹಮ್ ತುಮಾರೆ ಸಾಥ್ ಹೈ" ಎಂದು ಘೋಷಣೆ

17:34 October 05

ಡಿಸ್ಟರ್ಬ್ ಮಾಡಲೆಂದೇ ಡಿಕೆಶಿ ಮನೆ ಮೇಲೆ ದಾಳಿ: ಸತೀಶ್ ಜಾರಕಿಹೊಳಿ ಆರೋಪ

  • ಉಪಚುನಾವಣೆ ಸಂದರ್ಭದಲ್ಲಿ ನಮಗೆ ಡಿಸ್ಟರ್ಬ್ ಮಾಡಲೆಂದೇ ಸಿಬಿಐ ದಾಳಿ ಮಾಡಿದೆ
  • ಸಿಬಿಐ ದಾಳಿಯು ಪೂರ್ವನಿಯೋಜಿತ
  • ಇದೇನು ಹೊಸ ವಿಷಯವೇನಲ್ಲ
  • ಕೇಂದ್ರ ಸರ್ಕಾರ ತನ್ನ ಅಂಗ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ
  • ಈ ಕುರಿತು ಸಾಕಷ್ಟು ಬಾರಿ ಆರೋಪ ಮಾಡಿದ್ದೇವೆ
  • ನಮ್ಮ ಪಕ್ಷ ದೊಡ್ಡದು, ಒಂದೇ ವ್ಯಕ್ತಿಯಿಂದ ಪಕ್ಷ ಇರಲ್ಲ
  • ಸಿಬಿಐ ದಾಳಿ ಎದುರಿಸುವ ಸಾಮರ್ಥ್ಯ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರಿಗಿದೆ
  • ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ

16:46 October 05

ಸಿಬಿಐ ದಾಳಿ ಖಂಡಿಸುವ ಕೆಪಿಸಿಸಿ ಡಿಕೆ ಶಿವಕುಮಾರ್ ಅಕ್ರಮವನ್ನು ಯಾಕೆ ಖಂಡಿಸುವುದಿಲ್ಲ; ಕಟೀಲ್

  • ಬೆಂಕಿಯಿಲ್ಲದೆ ಹೊಗೆಯಾಡಲು ಸಾಧ್ಯವೇ?
  • ಅಕ್ರಮಗಳ ಸರದಾರನನ್ನು ಜೈಲಿನಿಂದ ಮೆರವಣಿಗೆ ಮಾಡಿಕೊಂಡು ಬಂದು ಪಟ್ಟ ನೀಡುವಾಗಲೇ ಯೋಚಿಸಬೇಕಿತ್ತು
  • ತನಿಖಾ ಸಂಸ್ಥೆಗಳು ಸ್ವಾಯತ್ತವಾಗಿರುತ್ತವೆ ಎಂಬುದು ಲೋಕಸತ್ಯ
  • ಸಿಬಿಐ ದಾಳಿಯನ್ನು ಖಂಡಿಸುವ ಕಾಂಗ್ರೆಸ್ ಏಕೆ​ ಡಿಕೆ ಶಿವಕುಮಾರ್ ಅವರ ಅಕ್ರಮಗಳನ್ನು ಖಂಡಿಸುವುದಿಲ್ಲ?
  • ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲ್​ ಟ್ವೀಟ್​
  • ಸಿಬಿಐ ಯಾವುದೇ ದಾಳಿ ಮಾಡುವ ಮೊದಲು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತದೆ
  • 70 ವರ್ಷ ಆಳಿದ ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ ಎಂದರೆ ಹೇಗೆ?
  • ಇಷ್ಟು ವರ್ಷ ಸಿಬಿಐ ಅನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಕಾಂಗ್ರೆಸ್ ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ
  • ಸಿಬಿಐ ತನ್ನ ಕೆಲಸ ಮಾಡುತ್ತಿದೆ
  • ಅದಕ್ಕೆ ಸಹಕಾರ ನೀಡುವ ಬದಲು ಸಿಬಿಐ ಅಧಿಕಾರಿಗಳ ವಾಹನಗಳ ಮೇಲೆ ಬೆಂಬಲಿಗರನ್ನು ಬಿಟ್ಟು ದಾಳಿ ಮಾಡಿದ್ದು ಸರಿಯಾ? ಎಂದು ಕಟೀಲ್​ ಪ್ರಶ್ನೆ

16:35 October 05

ಸಿಬಿಐ ದಾಳಿ ಎದುರಿಸಲು ನಮ್ಮ ನಾಯಕರು ಸಮರ್ಥರಿದ್ದಾರೆ: ಲಕ್ಷ್ಮೀ ಹೆಬ್ಬಾಳ್ಕರ್

  • ಡಿಕೆ ಸಹೋದರರ ಮನೆ ಮೇಲಿನ ಸಿಬಿಐ ದಾಳಿ ಖಂಡಿಸಿದ ಕೆಪಿಸಿಸಿ ವಕ್ತಾರೆ ಲಕ್ಷ್ಮೀ ಹೆಬ್ಬಾಳ್ಕರ್
  • ಈ ಬಗ್ಗೆ ಬೆಳಗಾವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಹೆಬ್ಬಾಳ್ಕರ್
  • ಸಿಬಿಐ ದಾಳಿ ಎದುರಿಸಲು ನಮ್ಮ ನಾಯಕರು ಸಮರ್ಥರಿದ್ದಾರೆ
  • ಉಪಚುನಾವಣೆ ಸಂದರ್ಭದಲ್ಲಿ ರಾಜಕೀಯ ದುರುದ್ದೇಶವಿಟ್ಟುಕೊಂಡು ದಾಳಿ ಮಾಡಲಾಗಿದೆ
  • ಇಡಿ ಆಯ್ತು, ಐಟಿ ಬಳಿಕ ಈಗ ಮತ್ತೆ ಸಿಬಿಐ ದಾಳಿ ಮಾಡಿದೆ
  • ಇದು ರಾಜಕೀಯ ಪ್ರೇರಿತ ಎಂಬುವುದನ್ನು ಜನರೇ ತೀರ್ಮಾನಿಸುತ್ತಾರೆ
  • ಕಾನೂನು ಹೋರಾಟದ ಮೂಲಕ ನಮ್ಮ ನಾಯಕರು ಹ್ಯಾಂಡಲ್ ಮಾಡ್ತಾರೆ ಎಂದ ಹೆಬ್ಬಾಳ್ಕರ್

16:29 October 05

ಅಣ್ಣ ಡಿಕೆಶಿ​ ಮನೆಗೆ ಆಗಮಿಸಿದ ಡಿಕೆ ಸುರೇಶ್

  • ಡಿಕೆ ಸುರೇಶ್ ಮನೆಯಲ್ಲಿ ಸಿಬಿಐ ದಾಳಿ ಮುಕ್ತಾಯ ಹಿನ್ನೆಲೆ
  • ಅಣ್ಣ ಡಿಕೆ ಶಿವಕುಮಾರ್​ ಮನೆಗೆ ಆಗಮಿಸಿದ ಡಿಕೆ ಸುರೇಶ್
  • ಸಿಬಿಐ ತನಿಖೆಯ ಬಗ್ಗೆ ಮಾಹಿತಿ ಕಲೆಹಾಕುತ್ತಿರುವ ಸುರೇಶ್
  • ಇತ್ತ ಡಿಕೆಶಿ ಮನೆಯ ಮೂಲೆಮೂಲೆಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಸಿಬಿಐ

16:25 October 05

ಡಿಕೆ ಸುರೇಶ್ ಮನೆಯಲ್ಲಿ ದಾಳಿ ಮುಕ್ತಾಯ

  • ಸಂಸದ ಡಿಕೆ ಸುರೇಶ್ ಮನೆಯಲ್ಲಿ ಸಿಬಿಐ ದಾಳಿ ಮುಕ್ತಾಯ
  • ಮುಂಜಾನೆಯಿಂದ ಡಿಕೆ ಸಹೋದರರ ಮನೆ ಮೇಲೆ ದಾಳಿ ನಡೆಸಿದ್ದ ಸಿಬಿಐ
  • ಸದ್ಯ ಡಿಕೆ ಸುರೇಶ್ ಮನೆಯಲ್ಲಿ ರೇಡ್ ಮುಕ್ತಾಯ
  • ಪರಿಶೀಲನೆ ಮುಗಿಸಿ, ದಾಖಲೆಗಳ ಜೊತೆ ಹೊರಬಂದ ಅಧಿಕಾರಿಗಳು

15:37 October 05

ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ದೇವರು ನೀಡಿದ್ದಾನೆ: ಡಿಕೆ ಸುರೇಶ್​

  • ಸಿಬಿಐ ದಾಳಿಗೆ ಸಂಸದ ಡಿಕೆ ಸುರೇಶ್​ ಪ್ರತಿಕ್ರಿಯೆ
  • ಇಂದು ಮುಂಜಾನೆಯ ವೇಳೆಗೆ ನಮ್ಮ ಮನೆಯ ಮೇಲೆ ಸಿಬಿಐ ದಾಳಿ ನಡೆದಿದೆ
  • ಕಾನೂನಿನ ಚೌಕಟ್ಟಿನಲ್ಲಿ ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲೂ ನಮ್ಮ ಕಡೆಯಿಂದ ಸಂಪೂರ್ಣವಾದ ಸ್ಪಂದನೆ ಸಿಕ್ಕಿದೆ
  • ಮುಂದೆಯೂ ಸಹ ಸ್ಪಂದನೆ ಸಿಗಲಿದೆ
  • ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಡೆಯಿಂದ ಬಂದ ಇಂತಹ ಗೊಡ್ಡು ಬೆದರಿಕೆಗಳಿಗೆ ಜಗ್ಗುವುದಾಗಲಿ, ಕುಗ್ಗುವುದಾಗಲಿ ದೂರದ ಮಾತು
  • ರಾಜಕೀಯವನ್ನು ರಾಜಕೀಯವಾಗಿ ಎದುರಿಸಲು ನಾವು ಸದಾ ಸಿದ್ದರಿದ್ದೇವೆ
  • ಈ ವಿಚಾರದಲ್ಲಿ ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು ಧೃತಿಗೆಡುವ ಅವಶ್ಯಕತೆ ಇಲ್ಲ
  • ಈ ಎಲ್ಲಾ ರಾಜಕೀಯ ಷಡ್ಯಂತ್ರಗಳನ್ನು ಎದುರಿಸಿ ಜಯಿಸಿ ಬರುವ ಶಕ್ತಿಯನ್ನು ಆ ದೇವರು ನಮಗೆ ಕರುಣಿಸಿದ್ದಾನೆ
  • ಹಾಗಾಗಿ ಅಭಿಮಾನಿಗಳು ವಿಚಲಿತರಾಗುವುದು ಬೇಡ
  • ನಿಮ್ಮ ಆಶೀರ್ವಾದ ಹಾರೈಕೆ ಸದಾ ಹೀಗೇ ಇರಲಿ ಎಂದು ಡಿಕೆ ಸುರೇಶ್ ಟ್ವೀಟ್​

15:22 October 05

ಸಿಎಂ ಮನೆಗೆ ಮುತ್ತಿಗೆ ಹಾಕಲು ಯತ್ನ

  • ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ ಹಿನ್ನೆಲೆ
  • ಶಿವಮೊಗ್ಗದಲ್ಲಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನೆಗೆ ಮುತ್ತಿಗೆ ಹಾಕಲು ಯತ್ನ
  • ಮುತ್ತಿಗೆಗೆ ಯತ್ನಿಸಿದ ಎನ್ಎಸ್​​ಯುಐ ಕಾರ್ಯಕರ್ತರ ವಶಕ್ಕೆ ಪಡೆದ ಪೋಲಿಸರು
  • INC ಸಂಘಟನೆಯಾಗಿರುವ ರಾಷ್ಟ್ರೀಯ ವಿದ್ಯಾರ್ಥಿ ಸಂಘ (ಎನ್ಎಸ್​​ಯುಐ)
  • ಘಟನೆ ಬಳಿಕ ಸಿಎಂ ಮನೆಗೆ ಹೆಚ್ಚಿನ ಭದ್ರತೆ

15:13 October 05

ಕನಕಪುರದಲ್ಲಿರುವ ಡಿಕೆಶಿ ಮನೆ ಮೇಲೂ ಸಿಬಿಐ ದಾಳಿ

  • ರಾಮನಗರದ ಕನಕಪುರದಲ್ಲಿರುವ ಡಿಕೆಶಿ ಮನೆ ಮೇಲೂ ಸಿಬಿಐ ದಾಳಿ
  • ಕನಕಪುರದ ದೊಡ್ಡ ಆಲಹಳ್ಳಿಯಲ್ಲಿರುವ ನಿವಾಸ
  • ರೂಂ ಒಂದರ ಬಾಗಿಲು ತೆರೆಯಲು ಕಬ್ಬಿಣದ ಸಲಾಖೆಗಳನ್ನ ಬಳಸಿದ ಅಧಿಕಾರಿಗಳು
  • ಮನೆಯ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್

14:56 October 05

ಯಾವ ಕೋರ್ಟ್ ಆದೇಶಕ್ಕೂ ಸಿಬಿಐ ಬಗ್ಗುತ್ತಿಲ್ಲ: ವಕೀಲ ಪೊನ್ನಣ್ಣ ಹೇಳಿಕೆ

  • ಡಿಕೆಶಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ಹಿನ್ನೆಲೆ
  • ಡಿಕೆಶಿ ನಿವಾಸದಲ್ಲೆ ಮೊಕ್ಕಾಂ ಹೂಡಿರುವ ವಕೀಲ ಪೊನ್ನಣ್ಣ
  • ಹೈಕೋರ್ಟ್ ನೀಡಿದ್ದ ಆದೇಶದ ಪ್ರತಿಯನ್ನ ಸಿಬಿಐ ಅಧಿಕಾರಿಗಳಿಗೆ ನೀಡೋಕೆ ಬಂದಿದ್ವಿ
  • ಆದರೆ ಸಿಬಿಐ ಅಧಿಕಾರಿಗಳು ನಮನ್ನ ಭೇಟಿಯಾಗಿಲ್ಲ  
  • ಡಿಕೆಶಿ ಕುಟುಂಬದವರ ಮೂಲಕ ಆದೇಶದ ಪ್ರತಿ ತಲುಪಿಸಿದ್ದೆವು
  • ಆದರೆ ಆದೇಶ ಪ್ರತಿ ಪಡೆಯೋಕು ಅಧಿಕಾರಿಗಳು ತಯಾರಿಲ್ಲ
  • ಹೀಗಾಗಿ ಸಿಬಿಐ ಕಚೇರಿಗೆ ಹೋಗಿ ಹೈಕೋರ್ಟ್ ಆದೇಶದ ಪ್ರತಿಯನ್ನ ತಲುಪಿಸಿದ್ದೇವೆ
  • ಕೋರ್ಟ್ ಆದೇಶ ಇದ್ರೂ ಒತ್ತಡದಲ್ಲಿ ಈ ಕೆಲಸ‌ ಮಾಡ್ತಿದ್ದಾರೆ
  • ಇದನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೂ ತಂದಿದ್ದೇವೆ
  • ಸಿಬಿಐ ಕಚೇರಿಗೆ ಹೋದ್ರೆ ಇಬ್ಬರು ಸಿಬ್ಬಂದಿ ಮಾತ್ರ ಇದ್ದಾರೆ
  • ಇಲ್ಲಿ ಅಧಿಕಾರಿಗಳು ಯಾರೂ ಮಾತನಾಡ್ತಿಲ್ಲ
  • ಡಿಕೆಶಿ ಪರ ವಕೀಲ ಪೊನ್ನಣ್ಣ ಆರೋಪ

14:35 October 05

ಹೊರಗಡೆ ಬಂದು ಪರಿಸ್ಥಿತಿ ವೀಕ್ಷಿಸಿದ ಡಿಕೆ ಸುರೇಶ್

  • ಡಿಕೆ ಬ್ರದರ್ಸ್ ಮನೆಯ ಸುತ್ತಾ ಬೆಂಬಲಿಗರ ಪ್ರತಿಭಟನೆ
  • ಮನೆಯ ಹೊರಗಡೆ ಬಂದು ಪರಿಸ್ಥಿತಿ ವೀಕ್ಷಿಸಿದ ಸಂಸದ ಡಿಕೆ ಸುರೇಶ್​

13:12 October 05

ಈ ದಾಳಿಗಳು ಮೋದಿ-ಯಡಿಯೂರಪ್ಪ ಜೋಡಿಯ ಕುತಂತ್ರ: ಸುರ್ಜೇವಾಲಾ

  • ಡಿಕೆಶಿ ನಿವಾಸದ ಮೇಲಿನ ಸಿಬಿಐ ದಾಳಿ ಖಂಡಿಸಿದ ರಂದೀಪ್ ಸಿಂಗ್​ ಸುರ್ಜೇವಾಲಾ
  • ಸಿಬಿಐ-ಇಡಿ-ಆದಾಯ ತೆರಿಗೆ ಇಲಾಖೆಗಳು ಬಿಜೆಪಿ ಪರ ಸಂಸ್ಥೆಗಳೆಂದು ಎಐಸಿಸಿ ವಕ್ತಾರ ಆರೋಪ
  • ಮೋದಿ, ಯಡಿಯೂರಪ್ಪರ ಸರ್ಕಾರಗಳ ಮೋಸದ ಯತ್ನಗಳಿಗೆ ಕಾಂಗ್ರೆಸ್​ ತಲೆಬಾಗುವುದಿಲ್ಲ
  • ಇದರಿಂದಾಗಿ ಜನರಿಗಾಗಿ ಹೋರಾಡುವ ಮತ್ತು ಬಿಜೆಪಿಯ ಕುತಂತ್ರವನ್ನು ಬಹಿರಂಗಪಡಿಸುವ ನಮ್ಮ ಸಂಕಲ್ಪ ಬಲಗೊಳ್ಳುತ್ತದೆ
  • ಈ ದಾಳಿಗಳು ಮೋದಿ-ಯಡಿಯೂರಪ್ಪ ಜೋಡಿಯ ಬೆದರಿಕೆ ಮತ್ತು ಕುತಂತ್ರ
  • ಸಿಬಿಐ ಮೊದಲು ಸಿಎಂ ಯಡಿಯೂರಪ್ಪ ಸರ್ಕಾರದಲ್ಲಿನ ಭ್ರಷ್ಟಾಚಾರವನ್ನು ಬೆಳಕಿಗೆ ತರಬೇಕು
  • ರಾಜ್ಯ-ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ವಕ್ತಾರ ಸುರ್ಜೇವಾಲಾ ಆಕ್ರೋಶ

13:03 October 05

ವಕೀಲರಾದ ಪೊನ್ನಣ್ಣ- ಅಹಮದ್ ಮಾತುಕತೆ

  • ಒಂದೆಡೆ ಡಿಕೆಶಿ ಮನೆ ಮುಂದೆ ಕೈ ಕಾರ್ಯಕರ್ತರ ಪ್ರತಿಭಟನೆ
  • ಪೊಲೀಸರು - ಕಾರ್ಯಕರ್ತರ ನಡುವೆ ವಾಗ್ವಾದ
  • ಇನ್ನೊಂದೆಡೆ ವಕೀಲ ಪೊನ್ನಣ್ಣ ಜೊತೆ ಮಾತುಕತೆ ನಡೆಸುತ್ತಿರುವ ಎಸ್ ಎ ಅಹಮದ್
  • ಎಸ್ ಎ ಅಹಮದ್ ಡಿಕೆಶಿ ಪರ ವಕೀಲ

12:16 October 05

ಕಾರಿನ ಮಾಹಿತಿ ಪಡೆಯುತ್ತಿರುವ ಸಿಸಿಬಿ

  • ಡಿಕೆಶಿಗೆ ಸಂಬಂಧಿಸಿದ ಕಾರಿನ ಮಾಹಿತಿ ಪಡೆಯುತ್ತಿರುವ ಸಿಸಿಬಿ
  • ಫಾರ್ಚ್ಯೂನರ್,ಇನ್ನೋವಾ ಸೇರಿ ಡಿಕೆಶಿ ಮನೆ ಬಳಿ ಇರುವ 6 ಕಾರುಗಳು
  • ಕಾರಿನ ನಂಬರ್ ನೋಟ್ ಮಾಡಿಕೊಂಡ ಸಿಬಿಐ ಅಧಿಕಾರಿಗಳು

11:07 October 05

ನಗದು ವಶಕ್ಕೆ ಪಡೆದ ಸಿಬಿಐ

  • ಸುಮಾರು 50 ಲಕ್ಷ ರೂ. ನಗದು ವಶಕ್ಕೆ ಪಡೆದ ಸಿಬಿಐ
  • ಡಿಕೆ ಶಿವಕುಮಾರ್​ ಹಾಗೂ ಡಿಕೆ ಸುರೇಶ್​ ಮನೆಗಳ ಮೇಲೆ ದಾಳಿ ವೇಳೆ ವಶಕ್ಕೆ

11:04 October 05

ಡಿಕೆಶಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಲಗ್ಗೆ

  • ಡಿಕೆಶಿ ಮನೆಗೆ ಕಾಂಗ್ರೆಸ್ ಕಾರ್ಯಕರ್ತರ ಲಗ್ಗೆ
  • ಬಾವುಟ್ ಹಿಡಿದು ಬಂದ ಕಾರ್ಯಕರ್ತರನ್ನು ತಡೆದ ಪೊಲೀಸರು
  • ಡಿಕೆ ಸುರೇಶ್ ನಿವಾಸದ ಎದುರಿನ ರಸ್ತೆಯಲ್ಲಿ ಕುಳಿತು ಕಾರ್ಯಕರ್ತರ ಪ್ರತಿಭಟನೆ

11:01 October 05

ಮಾಜಿ ಸಚಿವರೊಬ್ಬರ ವಿರುದ್ಧ ಕೇಸ್​ ದಾಖಲಿಸಿದ ಸಿಬಿಐ

  • ಅಕ್ರಮ ಆಸ್ತಿ ಮಾಡಿದ ಆರೋಪ ಹಿನ್ನೆಲೆ
  • ಮಾಜಿ ಸಚಿವರೊಬ್ಬರ ಹಾಗೂ ಇತರರ ವಿರುದ್ಧ ಕೇಸ್​ ದಾಖಲಿಸಿದ ಸಿಬಿಐ
  • ಕರ್ನಾಟಕದಲ್ಲಿ 9, ದೆಹಲಿಯಲ್ಲಿ 4, ಮುಂಬೈನ ಒಂದು ಪ್ರದೇಶ ಸೇರಿ ಒಟ್ಟು 14 ಸ್ಥಳಗಳಲ್ಲಿ ಸಿಬಿಐ ದಾಳಿ
  • ದಾಖಲೆಗಳ ಪರಿಶೀಲನೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು

10:26 October 05

ಇದರಲ್ಲಿ ರಾಜಕೀಯ ಪ್ರಭಾವ ಇದೆ: ಡಿಕೆಶಿ ಪರ ವಕೀಲ ಪೊನ್ನಣ್ಣ

  • ಅವರ ಬಗ್ಗೆ ತನಿಖೆಗೆ ಹೈಕೋರ್ಟ್​ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದೆ
  • ಬಲವಂತದ ಕ್ರಮ ಜರುಗಿಸದಂತೆ ಹೈಕೋರ್ಟ್ ಸೂಚಿಸಿತ್ತು
  • ಈ ವೇಳೆ ದಾಳಿ ಮಾಡಿದ್ರೆ ಏನ್ ಅರ್ಥ
  • ಒಂದು ರಾಜ್ಯದೊಳಗೆ ಸಿಬಿಐ ಪ್ರವೇಶ ಮಾಡಲು ಅಲ್ಲಿನ ಸರ್ಕಾರದ ಅನುಮತಿ ಬೇಕು
  • ಇದರಲ್ಲಿ ರಾಜಕೀಯ ಪ್ರಭಾವ ಇದೆ
  • ನ್ಯಾಯಾಂಗ ವ್ಯವಸ್ಥೆಗೆ ಒಂದು ಗೌರವ ನೀಡಬೇಕು
  • ಡಿಕೆಶಿ ಪರ ವಕೀಲ ಎ.ಎಸ್​. ಪೊನ್ನಣ್ಣ ಹೇಳಿಕೆ

10:18 October 05

ಇದು ರಾಜಕೀಯ ದುಷ್ಟತನದ ಪರಮಾವಧಿ: ವಿಪಕ್ಷ ನಾಯಕ ಸಿದ್ದರಾಮಯ್ಯ

  • ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನೆ ಮೇಲೆ ಸಿಬಿಐ ದಾಳಿಗೆ ಸಿದ್ದರಾಮಯ್ಯ ಪ್ರತಿಕ್ರಿಯೆ
  • ಪ್ರಧಾನಿ ನರೇಂದ್ರ ಮೋದಿ ಸರ್ಕಾರ ದಾಳಿ ನಡೆಸಿದೆ
  • ಇದು ರಾಜಕೀಯ ದುಷ್ಟತನದ ಪರಮಾವಧಿ ಎಂದು ಸಿದ್ದು ಟ್ವೀಟ್
  • ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲು ಆಗುತ್ತಿಲ್ಲ
  • ಡಿಕೆಶಿ ಮನೆ ಮೇಲಿನ ದಾಳಿ ಬಿಜೆಪಿ ನಾಯಕರ ದಿವಾಳಿತನ ತೋರಿಸುತ್ತೆ
  • ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ

09:13 October 05

ಜಂಟಿ ಸುದ್ದಿಗೋಷ್ಠಿ ನಡೆಸುತ್ತಿರುವ ಡಿಕೆ ಸಹೋದರರು

  • ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹಾಗೂ ಅವರ ತಮ್ಮ ಸಂಸದ ಡಿ ಕೆ ಸುರೇಶ್ ಮನೆ ಮೇಲೆ ಸಿಬಿಐ ದಾಳಿ
  • ಸದಾಶಿವನಗರ ನಿವಾಸ ಸೇರಿದಂತೆ ಹಲವೆಡೆ ಬೆಳಗ್ಗೆಯಿಂದ ದಾಳಿ ನಡೆಯುತ್ತಿದೆ.
  • ಬೆಳಗ್ಗೆ ಆರು ಗಂಟೆಯಿಂದ ಅಧಿಕಾರಿಗಳು ದಾಖಲಾತಿಗಳ ಶೋಧಕಾರ್ಯ ಆರಂಭಿಸಿದ್ದಾರೆ.
  • ಅಕ್ರಮ ಆಸ್ತಿ ಮಾಡಿದ ಆರೋಪದ ಮೇರೆಗೆ ಇಡಿ‌ ಈ ಹಿಂದೆ ಡಿಕೆಶಿಯವರನ್ನು ಬಂಧಿಸಿತ್ತು.
  • ಸದ್ಯ ಈಗ ಸಿಬಿಐ ಕೂಡ ದಾಳಿ ನಡೆಸಿದೆ.
  • ಏಕಕಾಲಕ್ಕೆ ಇಬ್ಬರ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.
  • 60 ಅಧಿಕಾರಿಗಳಿಂದ 15 ಕಡೆ ದಾಳಿ.
  • ಕನಕಪುರ, ದೊಡ್ಡಆಲಳ್ಳಿ, ಬೆಂಗಳೂರಿನ ಸದಾಶಿವನಗರದ ನಿವಾಸ ಹಾಗೂ ಕಚೇರಿ ಮೇಲೆ ದಾಳಿ.
  • ಮನೆಯ ಒಳಗಡೆ ಡಿಕೆಶಿಯವರನ್ನು ಇರಿಸಿಕೊಂಡು ಇತರರನ್ನು ಸಮೀಪದ ಕಚೇರಿಗೆ ಕಳುಹಿಸಿದ ಅಧಿಕಾರಿಗಳು.
  • ಸಿಬಿಐ ಮನೆಗೆ ಬಂದ ತಕ್ಷಣವೇ ಎಲ್ಲಾ ರೀತಿಯ ಹೊರ ಸಂಪರ್ಕವನ್ನು ನಿಷೇಧಗೊಳಿಸಿದ ಅಧಿಕಾರಿಗಳು.
  • ಡಿಕೆಶಿ ಫೋನ್ ವಶಕ್ಕೆ ಪಡೆದ ಅಧಿಕಾರಿಗಳು.
  • ಕಾರ್ಯಾಚರಣೆ ಮುಗಿಯುವವವರೆಗೂ ಸಹಕರಿಸಬೇಕು ಎಂದಿರುವ ಅಧಿಕಾರಿಗಳು.
Last Updated : Oct 5, 2020, 7:15 PM IST

ABOUT THE AUTHOR

...view details