ಕರ್ನಾಟಕ

karnataka

ETV Bharat / city

ಬಿಎಸ್​ವೈ ರಾಜೀನಾಮೆ ಸುಳಿವು : ಸಚಿವ ಭೈರತಿ ಬಸವರಾಜ್ ಹೇಳಿದ್ದೇನು? - Resignation of BSY

ನನಗೆ ಯಾವುದೇ ಆತಂಕವಿಲ್ಲ. ಯಡಿಯೂರಪ್ಪನವರು ರಾಜೀನಾಮೆ ಕೊಡುವುದರ ಬಗ್ಗೆ ಅವರನ್ನೇ ಕೇಳಿ, ರಾಜೀನಾಮೆ ವಿಚಾರದ ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಸ್ಪಷ್ಟಪಡಿಸಿದ್ದಾರೆ.

Byrathi Basavaraj
ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಭೈರತಿ ಬಸವರಾಜ್

By

Published : Jul 22, 2021, 12:53 PM IST

ಬೆಂಗಳೂರು: ಈಗ ರಾಜ್ಯ ರಾಜಕೀಯದಲ್ಲಿ ಸಿಎಂ ಬದಲಾವಣೆ ಎಂಬುದು ಭಾರಿ ಸದ್ದು ಮಾಡ್ತಿದೆ. ಆದ್ರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರಾಜೀನಾಮೆ ಕೊಡುವ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದರು.

ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಈ ಕುರಿತು ಯಾವುದೇ ಮಾಹಿತಿಯಿಲ್ಲ. ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅವರು ಸಭೆ ಕರೆದಿದ್ದಾರೆ, ಅದಕ್ಕಾಗಿ ಬಂದಿರುವುದಾಗಿ ತಿಳಿಸಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಭೈರತಿ ಬಸವರಾಜ್

ಇದನ್ನೂ ಓದಿ:ರಾಜೀನಾಮೆ ಸುಳಿವು ನೀಡಿದ್ರಾ ಬಿಎಸ್​​ವೈ..? ಜು26ರ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯ ಎಂದ ಸಿಎಂ

ಯಡಿಯೂರಪ್ಪನವರು ಸಿಎಂ ಆದ ನಂತರ ನೀವು ಪಕ್ಷಕ್ಕೆ ಬಂದಿದ್ದೀರಿ?, ನಿಮಗೆ ಯಾವುದೇ ಆತಂಕವಿಲ್ಲವೇ? ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ನನಗೆ ಯಾವುದೇ ಆತಂಕವಿಲ್ಲ. ಯಡಿಯೂರಪ್ಪನವರು ರಾಜೀನಾಮೆ ಕೊಡುವುದರ ಬಗ್ಗೆ ಅವರನ್ನೇ ಕೇಳಿ‌‌, ನನಗೆ ಯಾವುದೇ ಆತಂಕವಿಲ್ಲ ಎಂದು ಪುನರುಚ್ಚರಿಸಿದರು.

ABOUT THE AUTHOR

...view details