ಕರ್ನಾಟಕ

karnataka

ETV Bharat / city

ಬೆಂಗಳೂರಲ್ಲಿ ಎಲೆಕ್ಟ್ರಿಕ್ ಬಸ್​​ಗಳು ರಸ್ತೆಗಿಳಿದರೆ ಟಿಕೆಟ್ ದರ ಆಗಲಿದೆಯಾ ದುಪ್ಪಟ್ಟು? - ಎಲೆಕ್ಟ್ರಿಕ್ ಬಸ್​ಗಳು ಲೇಟೆಸ್ಟ್ ನ್ಯೂಸ್

ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್​ಗಳು(electric bus) ರೋಡಿಗಿಳಿದರೆ ಟಿಕೆಟ್ ದರ ದುಪ್ಪಟ್ಟು ಆಗಬಹುದು ಅಂತಿದ್ದಾರೆ ಸಾರಿಗೆ ಇಲಾಖೆಯ ಸರ್ಕಾರದ ಸಲಹೆಗಾರರಾದ ಪ್ರೊ. ಶ್ರೀಹರಿ.

Is ticket price of electric bus will raise ?
ಎಲೆಕ್ಟ್ರಿಕ್ ಬಸ್​​ಗಳು ರಸ್ತೆಗಿಳಿದರೆ ಟಿಕೆಟ್ ದರ ಆಗಲಿದೆಯಾ ದುಪ್ಪಟ್ಟು?

By

Published : Nov 16, 2021, 7:30 PM IST

ಬೆಂಗಳೂರು: ಕಳೆದ ಸೆಪ್ಟೆಂಬರ್​ನಲ್ಲಿ ಪ್ರಾಯೋಗಿಕವಾಗಿ ಎಲೆಕ್ಟ್ರಿಕ್ ಬಸ್(electric bus)​ ನಗರದಲ್ಲಿ ಸಂಚಾರ ಆರಂಭಿಸಿತು. ಬಿಎಂಟಿಸಿಯ ಘಟಕ 37ರ ಕೆಂಗೇರಿಯಲ್ಲಿ 9 ಮೀಟರ್ ಉದ್ದದ 31 ಆಸನಗಳಿರುವ ಮೊದಲ ಇ-ಬಸ್ ಅನ್ನು ಅನಾವರಣ ಮಾಡಲಾಯ್ತು. ಇದೇ ನವೆಂಬರ್ ಮೊದಲ ವಾರದೊಳಗೆ 10 ಇ-ಬಸ್​​ಗಳು ಬರಲಿದೆ ಅಂತ ಹೇಳಲಾಗಿತ್ತು. ಆದರೆ ಇದು ಮತ್ತಷ್ಟು ತಡವಾಗಲಿದೆ.

ಸಾರಿಗೆ ಇಲಾಖೆಯ ಸರ್ಕಾರದ ಸಲಹೆಗಾರ ಪ್ರೊ. ಶ್ರೀಹರಿ ಅವರು ಟಿಕೆಟ್​ ದರದ ಕುರಿತು ಮಾತನಾಡಿದರು.

ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ಬಸ್​ಗಳು ರಸ್ತೆಗಿಳಿದರೆ ಟಿಕೆಟ್ ದರ ದುಪ್ಪಟ್ಟು ಆಗಬಹುದು ಅಂತಿದ್ದಾರೆ ಸಾರಿಗೆ ಇಲಾಖೆಯ ಸರ್ಕಾರದ ಸಲಹೆಗಾರರಾದ ಪ್ರೊ. ಶ್ರೀಹರಿ.

ಸಾರ್ವಜನಿಕರು ಏನಂತಾರೆ?

ನಗರದ ವಾತಾವರಣಕ್ಕೆ ಎಲೆಕ್ಟ್ರಿಕ್ ಬಸ್​​ಗಳು ಅವಶ್ಯಕ. ಶಬ್ದ ಮಾಲಿನ್ಯ, ವಾಯು ಮಾಲಿನ್ಯ ಮುಕ್ತವಾಗಿರುವುದರಿಂದ ಇದು ಹೆಚ್ಚು ಉಪಯುಕ್ತವಾಗಲಿದೆ ಅಂತ ಬೆಂಗಳೂರು ನಿವಾಸಿ ಸಂಗೀತ ಅಭಿಪ್ರಾಯ ವ್ಯಕ್ತಪಡಿಸಿದರು.

ವಾತಾವರಣ ದೃಷ್ಟಿಯಿಂದ ಎಲೆಕ್ಟ್ರಿಕ್ ವಾಹನ ಅತ್ಯವಶ್ಯಕ:

ಈಗಿರುವ ಬಿಎಂಟಿಸಿ(BMTC) ಬಸ್​ಗಳು ಹೆಚ್ಚು ಹೊಗೆ ಸೂಸುತ್ತವೆ ಎಂಬ ಮಾತುಗಳು ಕೇಳಿಬರುತ್ತಲೇ ಇವೆ. ಹೀಗಾಗಿ, ಮುಂದಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಅನಿರ್ವಾಯವಾಗಲಿದೆ‌‌. ಬ್ಯಾಟರಿ ಚಾಲಿತ ವಾಹನವಾಗಿರುವುದರಿಂದ ಶಬ್ದ ಮಾಲಿನ್ಯ ಹಾಗೂ ವಾಯುಮಾಲಿನ್ಯ ಸಮಸ್ಯೆ ಇರೋದಿಲ್ಲ ಅಂತ ಶ್ರೀಹರಿ ತಿಳಿಸಿದರು.

ಚಾರ್ಜಿಂಗ್ ಸಮಸ್ಯೆಯಿಲ್ಲ:

ಈ ಹಿಂದೆ ಬರುತ್ತಿದ್ದ ಬ್ಯಾಟರಿಗಳ ಕೆಪಾಸಿಟಿ ಕಡಿಮೆ ಹಾಗೂ ಚಾರ್ಜಿಂಗ್ ಸಮಸ್ಯೆ ಅಂತ ಹೇಳಲಾಗುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿದ್ದು, ಒಂದು ಗಂಟೆಯಲ್ಲೇ ಚಾರ್ಜಿಂಗ್ ಅಗುವ ವ್ಯವಸ್ಥೆಯಿದೆ. ಒಮ್ಮೆ ಬ್ಯಾಟರಿ ಫುಲ್ ಆಯ್ತು ಅಂದರೆ 200 ಕಿ.ಮೀ ಓಡಾಟ ನಡೆಸಬಹುದು. ಬ್ಯಾಟರಿ ಕಡಿಮೆ ಆಗುತ್ತಾ ಹೋದರೂ ಸ್ಟೀಡ್ ಕಡಿಮೆ ಆಗೋದಿಲ್ಲ. ‌

ಬೆಂಗಳೂರು ಅಷ್ಟೇ ಅಲ್ಲದೇ ಮೈಸೂರು, ಕೊಡಗು ಭಾಗದಲ್ಲೂ ಅಪರೇಟ್ ಮಾಡಬೇಕು ಅನ್ನೋ ಚಿಂತನೆ ಇದೆ ಎಂದು ತಿಳಿಸಿದರು.

ಇದನ್ನೂ ಓದಿ:ಮೈಸೂರಿನ ಶಕ್ತಿಧಾಮದ ಮಕ್ಕಳಿಂದ 'ಗಾನ ನಮನ'.. ವಿಡಿಯೋ

ಸದ್ಯ, ಬಿಎಂಟಿಸಿ ಇ-ಬಸ್‌ಗಳನ್ನು ಒಟ್ಟು ವೆಚ್ಚ ಒಪ್ಪಂದ (ಜಿಸಿಸಿ)ದ ಆಧಾರದ ಮೇಲೆ ನಿರ್ವಹಿಸುತ್ತದೆ. ನಿಗಮವು ವಿದ್ಯುತ್ ಬಳಕೆ ಸೇರಿದಂತೆ ಆಪರೇಟರ್‌ಗೆ ಪ್ರತಿ ಕಿಲೋಮೀಟರ್​​ಗೆ 51 ರೂ. ಪಾವತಿಸಲಿದೆ. ಟೆಂಡರ್ ಕಂಪನಿಯೇ ಡ್ರೈವರ್ ಅನ್ನು ನೇಮಿಸಲಿದ್ದು, ಕಂಡಕ್ಟರ್ ಅನ್ನು ನಿಗಮ ನೇಮಿಸಲಿದೆ.

ಸ್ಮಾರ್ಟ್ ಸಿಟಿ ಪ್ರಾಜೆಕ್ಟ್:

ಸ್ಮಾರ್ಟ್ ಸಿಟಿ ಯೋಜನೆಯ ಜೊತೆಗೆ ನಿಗಮವು ಇ-ಬಸ್​ಗಳನ್ನು ಫೇಮ್ II ಯೋಜನೆಯಡಿ (ಭಾರತದಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳುವುದು ಮತ್ತು ತಯಾರಿಕೆ) ಜಾರಿಗೊಳಿಸಲಿದೆ. ಮೊದಲೇ ಟೆಂಡರ್ ನೀಡಲಾಗಿದ್ದರೂ, ಉಲ್ಲೇಖಿಸಿದ ಕಾರ್ಯಾಚರಣೆಯ ವೆಚ್ಚವು ಬಿಎಂಟಿಸಿಗೆ ಒಗ್ಗದ ಕಾರಣ ರದ್ದುಪಡಿಸಲಾಗಿತ್ತು. ನಿಗಮವು ಫೇಮ್ II ಅಡಿಯಲ್ಲಿ 300 ಎಸಿ ಇ-ಬಸ್​​​ಗಳನ್ನು ನಿರ್ವಹಿಸಲು ಯೋಜಿಸಿದೆ. ಕೋವಿಡ್ -19 ಸಾಂಕ್ರಾಮಿಕ ರೋಗ ಹರಡಿದ ನಂತರ, ಬಹುಪಾಲು ಎಸಿ ಇ-ಬಸ್​​ಗಳು ರಸ್ತೆಗಳಿಂದ ಹೊರಗುಳಿದವು. ಬಿಎಂಟಿಸಿ ಯೋಜನೆಯನ್ನು ಬದಲಿಸಲು ಮತ್ತು 300 ನಾನ್ಎಸಿ ಇ- ಬಸ್​ಗಳನ್ನು ನಿರ್ವಹಿಸಲು ಟೆಂಡರ್ ಪ್ರಕ್ರಿಯೆಗೆ ತೀರ್ಮಾನಿಸಲಾಗಿದೆ.

ABOUT THE AUTHOR

...view details