ಬೆಂಗಳೂರು: ಬಿಎಂಟಿಸಿ ಅಧಿಕಾರಿಗಳು, ಸಿಬ್ಬಂದಿ ಬಳಸುವ ವಾಹನಗಳಲ್ಲಿ ಕರ್ನಾಟಕ ಸರ್ಕಾರದ ನಾಮಫಲಕವಾಗಲಿ ಅಥವಾ ಲಾಂಛನವಾಗಲಿ ಬಳಸುವಂತಿಲ್ಲ. ಸಂಸ್ಥೆಯ ಇಲಾಖಾ ವಾಹನಗಳಲ್ಲಿರುವ ಸರ್ಕಾರದ ನಾಮಪಲಕ ಮತ್ತು ಲಾಂಛನ ಹಾಕಿದ್ದರೆ ಕೂಡಲೇ ತೆಗೆದುಹಾಕುವಂತೆ ಸಂಸ್ಥೆ ಸೂಚನೆ ನೀಡಿದೆ.
ಬಿಎಂಟಿಸಿ ಅಧಿಕಾರಿಗಳು ಬಳಸುವ ವಾಹನಗಳಲ್ಲಿ ಸರ್ಕಾರದ ನಾಮಫಲಕ, ಲಾಂಛನ ಬಳಸುವಂತಿಲ್ಲ - ಬಿಎಂಟಿಸಿ ಸಂಸ್ಥೆ
ಹೈಕೋರ್ಟ್ ಆದೇಶ ಬೆನ್ನಲ್ಲೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಬಳಸುವ ವಾಹನಗಳಲ್ಲಿ ಕರ್ನಾಟಕ ಸರ್ಕಾರದ ನಾಮಫಲಕ ಮತ್ತು ಲಾಂಛನ ಹಾಕಿದ್ದಲ್ಲಿ ತೆಗೆದು ಹಾಕುವಂತೆ ಬಿಎಂಟಿಸಿ ಸಂಸ್ಥೆ ಸೂಚಿಸಿದೆ.
ಬಿಎಂಟಿಸಿ
ಹೈಕೋರ್ಟ್ ಚಾಟಿ ಬೀಸಿದ ಬೆನ್ನಲ್ಲೇ ಸರ್ಕಾರ ಈ ಆದೇಶ ಹೊರಡಿಸಿದೆ. ಸಂಸ್ಥೆಯ ಇಲಾಖೆಯ ವಾಹನಗಳಲ್ಲಿರುವ ಕರ್ನಾಟಕ ಸರ್ಕಾರ ನಾಮಫಲಕ ಮತ್ತು ಸರ್ಕಾರದ ಲಾಂಛನಗಳನ್ನು ತುರ್ತಾಗಿ ತೆಗೆದುಹಾಕಲು ಸೂಚಿಸಿದೆ. ಮೋಟಾರ್ ವೆಹಿಕಲ್ ಆ್ಯಕ್ಟ್ ಪ್ರಕಾರ, ಈ ರೀತಿ ವಾಹನಗಳಿಗೆ ಬಳಸುವಂತಿಲ್ಲ, ಆಗೊಮ್ಮೆ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.