ಕರ್ನಾಟಕ

karnataka

ETV Bharat / city

ಉಳಿದ 3 ಕ್ಷೇತ್ರಗಳಿಗೆ ಅಭ್ಯರ್ಥಿ ಪ್ರಕಟಿಸಿದ ಬಿಜೆಪಿ: ಕೊನೆಗೂ ಟಿಕೆಟ್​ ಗಿಟ್ಟಿಸುವಲ್ಲಿ ಸಕ್ಸಸ್​ ಆದ ‘ಕರಡಿ’ - ಹಾಲಿ ಸಂಸದ ಸಂಗಣ್ಣ ಕರಡಿ

ಚಿಕ್ಕೋಡಿ, ರಾಯಚೂರು ಮತ್ತು ಕೊಪ್ಪಳ ಕ್ಷೇತ್ರಗಳಿಗೆ‌ ಬಿಜೆಪಿ ಅಭ್ಯರ್ಥಿಗಳ ಹೆಸರು ಪ್ರಕಟ.ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ, ರಾಯಚೂರಿನಿಂದ ಅಮರೇಶ್ ನಾಯಕ್ ಹಾಗೂ ಕೊಪ್ಪಳದಿಂದ ಹಾಲಿ ಸಂಸದ ಸಂಗಣ್ಣ ಕರಡಿಗೆ ಟಿಕೆಟ್​

ಸಂಸದ ಸಂಗಣ್ಣ ಕರಡಿ

By

Published : Mar 29, 2019, 2:15 PM IST

Updated : Mar 29, 2019, 2:26 PM IST

ಬೆಂಗಳೂರು: ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಜೆಪಿ ಬಿಡುಗಡೆಗೊಳಿಸಿದೆ. ಕರ್ನಾಟಕದಲ್ಲಿ ಬಾಕಿ ಇದ್ದ ಚಿಕ್ಕೋಡಿ, ರಾಯಚೂರು ಮತ್ತು ಕೊಪ್ಪಳ ಕ್ಷೇತ್ರಗಳಿಗೆ‌ ಬಿಜೆಪಿ ರಾಷ್ಟ್ರೀಯ ಆಯ್ಕೆ ಸಮಿತಿ ಮೂವರು ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ.

ಚಿಕ್ಕೋಡಿಯಿಂದ ಅಣ್ಣಾ ಸಾಹೇಬ್ ಜೊಲ್ಲೆ, ರಾಯಚೂರಿನಿಂದ ಅಮರೇಶ್ ನಾಯಕ್ ಹಾಗು ಕೊಪ್ಪಳದಿಂದ ಹಾಲಿ ಸಂಸದ ಸಂಗಣ್ಣ ಕರಡಿ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಪ್ರಕಟಿಸಿದೆ.

ಬಿಜೆಪಿ ಅಭ್ಯರ್ಥಿಗಳ ಹೆಸರು

ಟಿಕೆಟ್​ಗಾಗಿ ಯಡಿಯೂರಪ್ಪ ಮನೆಗೆ ಅಲೆದಾಡಿದ್ದ ಹಾಲಿ ಸಂಸದ ಕರಡಿ ಸಂಗಣ್ಣ ಕಡೆಗೂ ಟಿಕೆಟ್ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ರಮೇಶ್ ಕತ್ತಿಗೆ ಟಿಕೆಟ್ ಕೊಡಿಸಲು ಶತ ಪ್ರಯತ್ನ ಮಾಡಿದ್ದ ಉಮೇಶ್​ ಕತ್ತಿಗೆ ನಿರಾಸೆಯಾಗಿದೆ.

ರಾಯಚೂರಿನಲ್ಲಿ ಟಿಕೆಟ್​​ಗಾಗಿ ಭಾರಿ ಸ್ಪರ್ಧೆ ಇತ್ತು. ಶಾಸಕ ಶಿವನಗೌಡ ನಾಯಕ ತಮ್ಮ ಬೆಂಬಲಿಗರಿಗೆ ಟಿಕೆಟ್​ ಕೊಡಿಸಲು ತೀವ್ರ ಕಸರತ್ತು ನಡೆಸಿದ್ದರು. ಆದರೆ ಅಂತಿಮವಾಗಿ ಹೈಕಮಾಂಡ್​​ ಅಮರೇಶ್​ ನಾಯಕ್​​ ಗೆ ಟಿಕೆಟ್​ ನೀಡಿದೆ. ಇನ್ನು ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಗೆ ಬೆಂಬಲ ಘೋಷಿಸಿದ್ದ ಬಿಜೆಪಿ ಬಾಕಿ 27 ಕ್ಷೇತ್ರಗಳಿಗೂ ಹೆಸರು ಪ್ರಕಟಿಸಿದಂತಾಗಿದೆ.

Last Updated : Mar 29, 2019, 2:26 PM IST

ABOUT THE AUTHOR

...view details