ಬೆಂಗಳೂರು :ವಜ್ರ ಹವಾನಿಯಂತ್ರಿತ ಸಾರಿಗೆ ಬಸ್ಗಳ ಪ್ರಯಾಣ ದರ, ದಿನದ ಪಾಸ್ ಮತ್ತು ಮಾಸಿಕ ಪಾಸ್ ದರಗಳನ್ನು ಕಡಿಮೆಗೊಳಿಸಿ ಪರಿಷ್ಕೃತ ದರ ಜಾರಿ ಮಾಡಿದೆ. ಇಂದಿನಿಂದಲೇ ನೂತನ ದರ ಜಾರಿಗೊಳ್ಳಲಿದೆ. ಇತ್ತೀಚೆಗೆ ಕೋವಿಡ್ ಲಾಕ್ ಡೌನ್, ಸಾರಿಗೆ ಮುಷ್ಕರದಿಂದ ಎಸಿ ಬಸ್ಗಳು ಡಿಪೋದಲ್ಲೇ ನಿಲುವಂತಾಗಿತ್ತು. ಇದೀಗ ನಿಂತಲ್ಲೇ ನಿಲ್ಲುವುದಕ್ಕಿಂತ ಅದನ್ನು ರಸ್ತೆಗಿಳಿಸಿ ನೋ ಲಾಸ್ ನೋ ಪ್ರಾಫಿಟ್ ಚಿಂತನೆಗೆ ಬಿಎಂಟಿಸಿ ನಿಗಮ ಮುಂದಾಗಿದೆ.
ಈ ಮೂಲಕ ಪ್ರಯಾಣಿಕರು ಸಾರ್ವಜನಿಕ ಸಾರಿಗೆಗಳನ್ನು ಉಪಯೋಗಿಸಿ, ಸಾರ್ವಜನಿಕ ಸಮೂಹ ಸಾರಿಗೆಗಳನ್ನು ಉತ್ತೇಜಿಸಲು ಮತ್ತು ವಜ್ರ ಸಾರಿಗೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ಪ್ರಯಾಣಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ವಜ್ರ ಹವಾನಿಯಂತ್ರಿತ ಸಾರಿಗೆಗಳ ಪ್ರಯಾಣ ದರ ಹಾಗೂ ದೈನಿಕ ಪಾಸಿನ ದರ ಇಂದಿನಿಂದ ಜಾರಿಗೆ ಬರುವಂತೆ ಕಡಿಮೆಗೊಳಿಸಿ ಪರಿಷ್ಕರಿಸಲಾಗಿದೆ.
ವಜ್ರ ಸಾರಿಗೆ ಸೇವೆಗಳ ಪ್ರಯಾಣ ದರ ಹೀಗಿದೆ : ವಜ್ರ ಸಾರಿಗೆಗಳ ಪ್ರಯಾಣದರಗಳನ್ನು ಶೇಕಡ ಶೇ 34ರಷ್ಟು ಕಡಿತಗೊಳಿಸಲಾಗಿದೆ.
ಇದನ್ನೂ ಓದಿರಿ:ಕತ್ರಿನಾಗೆ ಕೋಟ್ಯಂತರ ರೂ. ಮೌಲ್ಯದ ರೇಂಜ್ ರೋವರ್ ಗಿಫ್ಟ್ ನೀಡಿದ ಮಾಜಿ ಲವರ್ ಸಲ್ಲು!?