ಬೆಂಗಳೂರು: ನನ್ನನ್ನು ಸಭಾಪತಿ ಮಾಡಲು ಬಿಜೆಪಿಯ ಸಹಕಾರ ಸಿಕ್ಕಿದೆ. ಈ ಹಿನ್ನೆಲೆ ದೇವೇಗೌಡರನ್ನು ಭೇಟಿ ಮಾಡಿ ಧನ್ಯವಾದ ಹೇಳಿದೆ ಎಂದು ಮಾಜಿ ಶಾಸಕ ಬಸವರಾಜ ಹೊರಟ್ಟಿ ಹೇಳಿದರು.
ನನ್ನನ್ನು ಸಭಾಪತಿ ಮಾಡಲು ಬಿಜೆಪಿ ಸಹಕಾರ ನೀಡಿದೆ: ಬಸವರಾಜ ಹೊರಟ್ಟಿ - Basavaraja Horatti
ಮೇಲ್ಮನೆ ಸಭಾಪತಿ ಸ್ಥಾನವನ್ನು ಜೆಡಿಎಸ್ಗೆ ಬಿಜೆಪಿ ಬಿಟ್ಟುಕೊಟ್ಟಿದೆ. ಬಸವರಾಜ ಹೊರಟ್ಟಿ ಅವರು ಮುಂದಿನ ಪರಿಷತ್ ಸಭಾಪತಿ ಆಗಲಿದ್ದಾರೆ.
ಜಂಟಿ ಸದನ ಕಲಾಪದ ಮುನ್ನ ಮಾತನಾಡಿದ ಮಾಜಿ ಶಾಸಕ ಬಸವರಾಜ ಹೊರಟ್ಟಿ, ನಾನು ಬಿಜೆಪಿ ಹೈಕಮಾಂಡ್, ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಬಿಜೆಪಿ ಈಗಾಗಲೇ ಅವಿಶ್ವಾಸ ನಿರ್ಣಯ ಪ್ರಸ್ತಾಪ ಸಲ್ಲಿಸಿದೆ. ನಿಯಮದ ಪ್ರಕಾರ 14 ದಿನಗಳಿಗೆ ಮೊದಲು ಅವಿಶ್ವಾಸ ಸಲ್ಲಿಸಬೇಕು. ಆ ಪ್ರಕಾರ ಫೆ. 2ನೇ ತಾರೀಖಿಗೆ 14 ದಿನ ಆಗಲಿದೆ ಎಂದರು.
ಫೆ.8 ರ ವರೆಗೂ ಪರಿಷತ್ ಕಲಾಪವನ್ನು ವಿಸ್ತರಿಸಲಾಗಿದೆ. ಉಪಸಭಾಪತಿ ಚುನಾವಣೆ ಬಳಿಕ ಪ್ರತಾಪ್ ಚಂದ್ರ ಶೆಟ್ಟಿ ರಾಜೀನಾಮೆ ಸಲ್ಲಿಸುತ್ತಾರೆ ಎನ್ನಲಾಗಿದೆ. ಸಭಾಪತಿ ಸ್ಥಾನದ ಅವಕಾಶ ನೀಡಿದ್ದಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ. ದೇವೇಗೌಡ ಅವರಿಗೆ ಧನ್ಯವಾದ ಸಲ್ಲಿಸಿದರು.