ಕರ್ನಾಟಕ

karnataka

By

Published : Aug 25, 2020, 8:21 PM IST

ETV Bharat / city

ಆ್ಯಕ್ಸಿಡೆಂಟ್​ ಆದ ಯುವಕನಿಗೆ ಕೊರೊನಾ ಅಂತ ಹೇಳಿ 21 ಲಕ್ಷ ಬಿಲ್​ ಮಾಡಿದ ಆಸ್ಪತ್ರೆ, ಕೊನೆಗೆ ಬಂದಿದ್ದು ಹೆಣವಾಗಿ!

ಆಕ್ಸಿಡೆಂಟ್​​ನಿಂದ ತಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದ ಯುವಕನಿಗೆ ಚಿಕಿತ್ಸೆ ಹೆಸರಿನಲ್ಲಿ ಲಕ್ಷಾಂತರ ರೂ. ಬಿಲ್​​ ಮಾಡಿ ಕೊನೆಗೆ ಕೋವಿಡ್​​ನಿಂದ ಮೃತ ಪಟ್ಟಿದ್ದಾನೆ ಎಂದು ಕುಟುಂಬಸ್ಥರಿಗೆ ಯುವಕನ ಮೃತ ದೇಹ ನೀಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Bangalore private hospital cheated patient in a name of corona virus
ಖಾಸಗಿ ಆಸ್ಪತ್ರೆಗಳ ಹಣದ ದಂಧೆ

ಬೆಂಗಳೂರು: ಖಾಸಗಿ ಆಸ್ಪತ್ರೆಯ ಹಣದಾಹಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಲೇ ಇವೆ. ನಗರದಲ್ಲಿ ಆಕ್ಸಿಡೆಂಟ್​​ನಿಂದ ತಲೆಗೆ ಪೆಟ್ಟಾಗಿ ಆಸ್ಪತ್ರೆಗೆ ಸೇರಿದ್ದ ಯುವಕನಿಗೆ ಚಿಕಿತ್ಸೆ ನೀಡಿ ಕಂತು ಕಂತು ಹಣ ಕಿತ್ತು ಕಟ್ಟ ಕಡೆಗೆ, ಕೋವಿಡ್​​ನಿಂದ ಸಾವನ್ನಪ್ಪಿರುವುದಾಗಿ ಖಾಸಗಿ ಆಸ್ಪತ್ರೆ ವೈದ್ಯರು ಹೇಳಿರುವ ಘಟನೆ ಬೆಳಕಿಗೆ ಬಂದಿದೆ.

40 ದಿನ ಚಿಕಿತ್ಸೆ ನೀಡಿ ಕೋವಿಡ್​​ನಿಂದ ಮೃತಪಟ್ಟ ಎಂದ ವೈದ್ಯರು

ಬೆಂಗಳೂರಿನ ಪಿಳ್ಳಣ್ಣ ಗಾರ್ಡನ್​ನಲ್ಲಿ ಈ ದುರ್ಘಟನೆ ನಡೆದಿದೆ. ಜುಲೈ 9 ರಂದು ಸೆಲ್ಪ್ ಆಕ್ಸಿಡೆಂಟ್ ಆಗಿ ತಲೆಗೆ ಸ್ವಲ್ಪ ಪೆಟ್ಟಾಗಿತ್ತು. ಅಲ್ಲಿದ್ದಂತವರು ತಕ್ಷಣ ಜನಪ್ರಿಯಾ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದರು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಲ್ಯಾಣನಗರದಲ್ಲಿರುವ ಸ್ಪೆಷಲಿಸ್ಟ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು. ಆಸ್ಪತ್ರೆಗೆ ಶಿಫ್ಟ್​ ಮಾಡುತ್ತಿದ್ದಂತೆ ಕೊರೊನಾ ಟೆಸ್ಟ್ ಮಾಡಿಸಿ ಅಂತ ಸೂಚಿಸಿದ್ರು. ಚಿಕಿತ್ಸೆ ಮಾಡಿದಾಗ ವರದಿ ನೆಗೆಟಿವ್ ಬಂದಿತ್ತು. ನಂತರ ತಲೆಗೆ ಪೆಟ್ಟಾಗಿದೆ ಅಂತ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದರು.

ಪೋಷಕರ ಎಷ್ಟು ಬೇಕಾದ್ರು ಹಣ ಕಟ್ತಾರೆ ಅಂತಆಸ್ಪತ್ರೆಯವರಿಗೆ ಗೊತ್ತಾಗಿದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ಆಸ್ಪತ್ರೆಯವರು, ಪ್ರತಿದಿನ ಮೆಡಿಸಿನ್​ಗಾಗಿ 40 ಸಾವಿರ ಚಿಕಿತ್ಸೆಗಾಗಿ 35 ರಿಂದ 40 ಸಾವಿರ, ಅಂದ್ರೆ ದಿನಕ್ಕೆ 70 ರಿಂದ 80 ಸಾವಿರ ಬಿಲ್ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಕೊರೊನಾ ವರದಿ ಪ್ರತಿ

ನಂತರ ಉಸಿರಾಟದ ತೊಂದರೆ ಇದೆ ಅಂತ ವೆಂಟಿಲೇಟರ್ ಅಳವಡಿಸಿದ್ದಾರೆ. ಹೆಡ್ ಇಂಜ್ಯೂರಿ ವಾಸಿ ಆಗ್ತಿದ್ದಂತೆ ಲಂಗ್ಸ್ ಇನ್ಫೆಕ್ಷನ್ ಆಗಿದೆ ಅಂತ ಕತೆ ಕಟ್ಟಿದ್ದಾರೆ. ನಂತರ ಸುಮಾರು 40 ದಿನಗಳ ಕಾಲ ಚಿಕಿತ್ಸೆ ಮೇಲೆ ಚಿಕಿತ್ಸೆ ನೀಡಿದ್ದಾರೆ. ಆದ್ರೆ ಕೊನೆಗೆ ಅದೇನು ಚಿಕಿತ್ಸೆ ನೀಡಿದ್ರೋ ಏನೋ ಗೊತ್ತಿಲ್ಲ. ಚಿಕಿತ್ಸೆ ಫಲಕಾರಿಯಾಗದೆ ಜಿತೇಂದ್ರ ಪ್ರಸಾದ್ ಮೃತ ಪಟ್ಟಿದ್ದಾರೆ. ಇಷ್ಟರಲ್ಲಿ ಇವರು ಕಟ್ಟಿರುವ ಬಿಲ್ ಮೊತ್ತ ಬರೋಬ್ಬರಿ 21 ಲಕ್ಷ ಆಗಿದೆ.

ಇನ್ನೂ ಇಷ್ಟೆಲ್ಲಾ ಹಣ ಕಟ್ಟಿದ ಮೇಲೆ ಕುಟುಂಬಸ್ಥರು ಸುಮ್ಮನಿರೋದಿಲ್ಲ ಅಂತ ಆಸ್ಪತ್ರೆಯವರಿಗೆ ಗೊತ್ತಾಗಿದೆ. ತಕ್ಷಣ ನಿಮ್ಮ ಮಗನಿಗೆ ಕೋವಿಡ್ ಪಾಸಿಟಿವ್ ಇದೆ ಬೇಗ ಬಾಡಿ ತೆಗೆದು ಕೊಂಡು ಹೋಗಿ, ಇಲ್ಲ ಬಿಬಿಎಂಪಿಯವರೇ ಬಂದು ನಿಮ್ಮ ಮಗನ ಬಾಡಿ ತೆಗೆದು ಕೊಂಡು ಹೋಗ್ತಾರೆ ಎಂದು ಹೇಳಿದ್ದಾರೆ.

ಇಲ್ಲ‌ ಪೋಸ್ಟ್ ಮಾಟಮ್ ಮಾಡಬೇಕಾಗುತ್ತೆ. ಪೋಲಿಸ್ ಕಂಪ್ಲೆಂಟ್ ಆಗುತ್ತೆ ಮತ್ತೆ ಇಲ್ಲ ಸಲ್ಲದ ಸಮಸ್ಯೆ ಯಾಗುತ್ತೆ. ಬೇಗ ಐದೇ ನಿಮಿಷದಲ್ಲಿ ಅಂತ್ಯಕ್ರಿಯೆ ಮುಗಿಸಿ ಬಿಡಿ. ‌ಇಲ್ಲ ಅಂದ್ರೆ ಸಮಸ್ಯೆ ಆಗುತ್ತೆ ಅಂತ ಕುಟುಂಬಸ್ಥರನ್ನ ಹೆದರಿಸುವ ಆರೋಪ ಕೇಳಿ ಬಂದಿದೆ. ನಂತರ ಬಿಲ್ ಕಟ್ಟಿಸಿಕೊಂಡು ಈಗ ಮೃತ ದೇಹವನ್ನ ಕೊಟ್ಟು ಖಾಸಗಿ ಆಸ್ಪತ್ರೆಯವರು ಕಳುಹಿಸಿದ್ದಾರೆ. ‌ಸದ್ಯ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದ್ದು ಆಸ್ಪತ್ರೆ ವಿರುದ್ಧ ಕಿಡಿಕಾರುತ್ತಿದ್ದಾರೆ.

ABOUT THE AUTHOR

...view details