ಬೆಂಗಳೂರು: ಕೇಂದ್ರ ಸರ್ಕಾರದ ವಿಶೇಷ ಪ್ಯಾಕೇಜ್ ಸುಳ್ಳಿನ ಕಂತೆಯಾಗಿದ್ದು, ಅದು ಮೂರ್ಖತನದ ಘೋಷಣೆಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇಂತಹ ಕ್ಲಿಷ್ಟ ಸಮಯದಲ್ಲಿ ದೊಡ್ಡ ಮಟ್ಟದ ಪರಿಹಾರ ಸಿಗುತ್ತದೆ ಅಂದುಕೊಂಡಿದ್ದೆ. ಕೇಂದ್ರ ಹಣಕಾಸು ಸಚಿವೆ ಈ ರೀತಿಯ ಪ್ಯಾಕೇಜ್ ಘೋಷಣೆ ಮಾಡ್ತಾರೆ ಅಂತ ಅಂದುಕೊಂಡಿರಲಿಲ್ಲ. ಇದರಿಂದ ನನಗೆ ನಿರಾಶೆಯಾಗಿದೆ ಎಂದರು.
ನಾನು ಟಿವಿ ಸೀರಿಯಲ್ ನೋಡುವ ಥರ ಆರ್ಥಿಕ ಸಚಿವೆಯ ಸರಣಿ ಸುದ್ದಿಗೋಷ್ಠಿಯನ್ನು ನೋಡಿದ್ದೇನೆ. ಈ ಘೋಷಣೆಗಳನ್ನು ಸ್ವೇಚ್ಛಾಚಾರವಾಗಿ ಮಾಡಿದ್ದಾರೆ. ಅದರ ಟೀಕಾಕಾರರನ್ನು ದೇಶದ್ರೋಹ ಮಾಡಿದವರಂತೆ ಬಿಂಬಿಸಲಾಗುತ್ತಿದೆ ಎಂದು ಕಿಡಿಕಾರಿದರು.
ಹಣಕಾಸು ಸಚಿವೆಗೆ ಪರಿಹಾರ ವೆಚ್ಚ ಮತ್ತು ಅಭಿವೃದ್ಧಿ ವೆಚ್ಚದ ನಡುವೆ ಇರುವ ವ್ಯತ್ಯಾಸವೇ ಗೊತ್ತಿಲ್ಲ. ರಾಜ್ಯಗಳಿಗೆ ಹೇಗೆ ಆರ್ಥಿಕ ನೆರವು ಕೊಡಬೇಕು ಎಂದು ಹಣಕಾಸು ಆಯೋಗ ಶಿಫಾರಸು ಮಾಡಿದೆ. ಆದರೆ ದಿವಾಳಿಯಾಗಿರುವ ರಾಜ್ಯಗಳಿಗೆ ವಿಶೇಷ ಪ್ಯಾಕೇಜ್ ಮೂಲಕ ಯಾವ ರೀತಿ ಹಣ ವರ್ಗಾವಣೆ ಮಾಡುತ್ತಿದ್ದೀರಾ?, ಮೊದಲ ಪ್ಯಾಕೇಜ್ 6.50 ಲಕ್ಷ ಕೋಟಿಯಲ್ಲಿ ಕೇಂದ್ರ ಸರ್ಕಾರದ ಪಾಲು 2,500 ಕೋಟಿ ಮಾತ್ರ. ಅದರಲ್ಲಿ ಕೇಂದ್ರದ ಕೊಡುಗೆ ಏನೂ ಇಲ್ಲ. ಇದರಿಂದ ತಕ್ಷಣ ಆರ್ಥಿಕ ಚೇತರಿಕೆ ಸಾಧ್ಯವಿಲ್ಲ. ಇದು ಸಂಕಷ್ಟದಲ್ಲಿರುವ ಉದ್ಯಮಿಗಳ ನೆರವಿಗೆ ಬರಲ್ಲ ಎಂದು ಆರೋಪಿಸಿದರು.
ಸುಳ್ಳು ಹೇಳಿ ಸರ್ಕಾರ ನಡೆಸಲು ಸಾಧ್ಯವಿಲ್ಲ: