ಕರ್ನಾಟಕ

karnataka

ETV Bharat / city

ಸಿಡಿ ಪ್ರಕರಣ: ಎಸ್ಐಟಿ ಅಧಿಕಾರಿಗಳ ಮೊಬೈಲ್​ ಫೋನ್​ ಹ್ಯಾಕ್​​​​ ಮಾಡಲು ಯತ್ನ

ಅಧಿಕಾರಿಗಳ ಮೊಬೈಲ್ ಹ್ಯಾಕ್ ಮಾಡಲು ಸಿಡಿ ಪ್ರಕರಣದಲ್ಲಿ ಇದ್ದಾನೆ ಎನ್ನಲಾದ ಹ್ಯಾಕರ್ ಶ್ರವಣ್ ಪ್ರಯತ್ನಿಸಿರುವ ಆರೋಪ ಕೇಳಿಬಂದಿದೆ. ಎಸ್​ಐಟಿ ಅಧಿಕಾರಿಗಳ ಮೊಬೈಲ್​ಗೆ ಪದೇ ಪದೇ ಓಟಿಪಿಗಳು ಬರುತ್ತಿವೆ. ಅಧಿಕಾರಿಗಳ ವಾಟ್ಸಪ್ ಹ್ಯಾಕ್ ಮಾಡಲು ಮುಂದಾಗಿದ್ದು ಈಗ ಬೆಳಕಿಗೆ ಬಂದಿದೆ.

ಎಸ್ಐಟಿ ಅಧಿಕಾರಿಗಳ ಮೊಬೈಲ್​ ಪೋನ್​ ಹ್ಯಾಕ್
ಎಸ್ಐಟಿ ಅಧಿಕಾರಿಗಳ ಮೊಬೈಲ್​ ಪೋನ್​ ಹ್ಯಾಕ್

By

Published : Mar 25, 2021, 8:54 PM IST

ಬೆಂಗಳೂರು: ಸಿಡಿ ಪ್ರಕರಣ ಸಂಬಂಧ ಎಸ್​ಐಟಿ ಅಧಿಕಾರಿಗಳಿಗೆ ಎಥಿಕಲ್ ಹ್ಯಾಕರ್ ತಲೆನೋವಾಗಿ ಪರಿಣಮಿಸಿದ್ದಾನೆ. ಮೊಬೈಲ್ ಹ್ಯಾಕ್ ಮಾಡುವುದಕ್ಕೆ ಹ್ಯಾಕರ್ ಮುಂದಾಗಿದ್ದು ಅಧಿಕಾರಿಗಳ ಮೊಬೈಲ್​ಗೆ ಪದೇ ಪದೇ ಓಟಿಪಿ ಬರುತ್ತಿದೆ. ಇತ್ತ ಮಾಜಿ ಸಚಿವರ ಮೊಬೈಲ್ ಜಪ್ತಿ ಮಾಡಿರುವ ಎಸ್ಐಟಿ ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಎಸ್ಐಟಿ ಮಾಜಿ ಸಚಿವ ರಮೇಶ್ ಜಾರಕಿಹೊಳಿಯವರ ಮೊಬೈಲ್ ಜಪ್ತಿ ಮಾಡಿದೆ. ವಿಚಾರಣೆ ವೇಳೆ ಅಸ್ಪಷ್ಟ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಯುವತಿ ಜೊತೆ ಫೋನ್​ನಲ್ಲಿ ಮಾತಾಡಿರುವ ಕೆಲವೊಂದು ಮಹತ್ವದ ಸಾಕ್ಷ್ಯ ಕಲೆ ಹಾಕುವ ಸಲುವಾಗಿ ಎಸ್ಐಟಿ ಅಧಿಕಾರಿಗಳು ಮೊಬೈಲ್ ಜಪ್ತಿ ಮಾಡಿ ಎಫ್​ಎಸ್​ಎಲ್‌ಗೆ ಕಳುಹಿಸಿಕೊಟ್ಟಿದ್ದಾರೆ.

ಇನ್ನು ಪ್ರಕರಣದ ಕಿಂಗ್​ಪಿನ್​ಗಳಿಗೆ ಫಂಡಿಂಗ್ ಮಾಡಿರುವ ಆರೋಪ ಹೊತ್ತಿರುವ ಉದ್ಯಮಿ ಶಿವಕುಮಾರ್ ಪ್ರಭಾವಿ ರಾಜಕಾರಣಿಯೊಬ್ಬರ ಸಂಬಂಧಿಯೆಂದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಉದ್ಯಮಿ ಮನೆಯಲ್ಲಿ ಪೆನ್ ಕ್ಯಾಮೆರಾ, ಹಾರ್ಡ್ ಡಿಸ್ಕ್ ಹಾಗೂ ಲ್ಯಾಪ್ ಟಾಪ್ ಜಪ್ತಿ ಮಾಡಿದ್ದು ರಿಟ್ರೀವ್ ಆದ ಬಳಿಕ ಮಾಹಿತಿ ಹೊರ ಬರುವ ಸಾಧ್ಯತೆಗಳಿವೆ.

ABOUT THE AUTHOR

...view details