ಬೆಂಗಳೂರು: ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದೆ.
ನಗರದ ಕೆ ಸಿ ಜನರಲ್ ಆಸ್ಪತ್ರೆಯಲ್ಲಿ ನಾನ್ ಕೋವಿಡ್ ರೋಗಿ ದಾಖಲಾಗಿದ್ದರು. ರೋಗಿಗೆ ತೀವ್ರ ಉಸಿರಾಟ ತೊಂದರೆಯಾದಾಗ ದಾಖಲಿಸಲು ಐಸಿಯು ಬೆಡ್ ಇಲ್ಲವೆಂದು ಹೇಳಿದ್ದಕ್ಕೆ, ಕೆ ಸಿ ಜನರಲ್ ಆಸ್ಪತ್ರೆ ವೈದ್ಯ ಡಾ.ಸುರೇಶ್ ಹಾಗೂ ಇತರೆ ಸಿಬ್ಬಂದಿ ಮೇಲೆ ರೋಗಿ ಕುಟುಂಬಸ್ಥರು ಹಲ್ಲೆ ನಡೆಸಿದ್ದಾರೆ ಎಂದು ದೂರಲಾಗಿದೆ.
ನಾನ್ ಕೋವಿಡ್ ರೊಗಿಯೊಬ್ಬ ಮೊನ್ನೆ ಮಲ್ಲೇಶ್ವರಂ ಬಳಿ ಇರುವ ಕೆ ಸಿ ಜನರಲ್ ಆಸ್ಪತ್ರೆಗೆ ದಾಖಲಾಗಿದ್ರು. ಆತನಿಗೆ ಉಸಿರಾಟದ ತೊಂದರೆಯೂ ಇತ್ತು. ಹೀಗಾಗಿ ಆಸ್ಪತ್ರೆಯ ವೈದ್ಯರು ರೋಗಿ ಸ್ಥಿತಿ ಚಿಂತಾಜನಕವಾಗಿದೆ. ನೀವು ಐಸಿಯು ಇರುವ ಅಸ್ಪತ್ರೆಗೆ ದಾಖಲಿಸಿ. ಇಲ್ಲಿ ಕೋವಿಡ್ ರೋಗಿಗಳಿಗೆ ಕೇವಲ 5 ಐಸಿಯು ಬೆಡ್ ಇವೆ. ನಾನ್ ಕೋವಿಡ್ ರೋಗಿಗಳಿಗೆ ಐಸಿಯು ಇಲ್ಲ ಎಂದಿದ್ದಾರೆ.
ವೈದ್ಯರ ಮೇಲೆ ರೋಗಿ ಕುಟುಂಬಸ್ಥರಿಂದ ಹಲ್ಲೆ ಆರೋಪ ಇದಕ್ಕೆ ರೊಚ್ಚಿಗೆದ್ದ ರೋಗಿ ಕುಟುಂಬಸ್ಥರು ಮಂಗಳವಾಋ ಸಂಜೆ 4.30ರ ಸಂದರ್ಭದಲ್ಲಿ ಎಮರ್ಜೆನ್ಸಿ ವಾರ್ಡ್ ಬಳಿ ಇದ್ದ ಡಾ. ಸುರೇಶ್ ಹಾಗೂ ಇತರೆ ಸಿಬ್ಬಂದಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ಮಲ್ಲೇಶ್ವರಂ ಠಾಣೆಯಲ್ಲಿ ಹಲ್ಲೆಗೊಳಗಾದವರು ದೂರು ದಾಖಲಿಸಿದ್ದಾರೆ.
ಸದ್ಯ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಖುದ್ದಾಗಿ ವೈದ್ಯರ ಬಳಿ ಮಾಹಿತಿ ಕಲೆಹಾಕುತ್ತಿದ್ದಾರೆ.