ಬೆಂಗಳೂರು: ಬಿಜೆಪಿ ಸರ್ಕಾರ ರಚನೆಯಲ್ಲಿ ಹೆಚ್. ವಿಶ್ವನಾಥ್, ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜ್ ಅವರ ಕೊಡುಗೆ ಹೆಚ್ಚಿದೆ. ಹೀಗಾಗಿ, ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಸಚಿವ ಸ್ಥಾನ ನೀಡಬೇಕೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಒತ್ತಾಯಿಸಿದ್ದಾರೆ.
ಹೆಚ್.ವಿಶ್ವನಾಥ್, ಎಂಟಿಬಿ, ಆರ್.ಶಂಕರ್ ಪರ ಸಚಿವ ಬಿ.ಸಿ.ಪಾಟೀಲ್ ಬ್ಯಾಟಿಂಗ್ - ಬಿಜೆಪಿ ಸರ್ಕಾರ ರಚನೆಗೆ ಪ್ರಮುಖ ಪಾತ್ರ
ಬಿಜೆಪಿ ಸರ್ಕಾರ ರಚನೆಗೆ ಅಪಾರ ಕೊಡುಗೆ ನೀಡಿರುವ ಹೆಚ್. ವಿಶ್ವನಾಥ್, ಆರ್.ಶಂಕರ್ ಹಾಗೂ ಎಂಟಿಬಿ ನಾಗರಾಜ್ ಅವರಿಗೆ ವಿಧಾನ ಪರಿಷತ್ನಲ್ಲಿ ಸ್ಥಾನ ಸಿಗುವ ಭರವಸೆ ಇದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಆಶಯ ವ್ಯಕ್ತಪಡಿಸಿದ್ದಾರೆ.
ಸಚಿವ ಬಿ.ಸಿ.ಪಾಟೀಲ್
ವಿಕಾಸಸೌಧದಲ್ಲಿ ಇಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮಂತ್ರಿ ಸ್ಥಾನ ಕೇಳುವುದು ಅವರ ಹಕ್ಕು. ಸರ್ಕಾರ ರಚನೆಯಲ್ಲಿ ಅವರ ಕೊಡುಗೆಯೂ ಹೆಚ್ಚಿದೆ. ನಾವೆಲ್ಲರೂ ಆರು ತಿಂಗಳು ವನವಾಸ ಅನುಭವಿಸಿ ಬಂದಿದ್ದೇವೆ ಎಂದರು.
ಹೆಚ್. ವಿಶ್ವನಾಥ್, ಎಂಟಿಬಿ ನಾಗರಾಜ್ ಹಾಗೂ ಶಂಕರ್ ಮಂತ್ರಿಗಳಾಗುತ್ತಾರೆ. ಇದರಲ್ಲಿ ಅನುಮಾನ ಬೇಡ. ನಮ್ಮ ಕಷ್ಟ ಕಾಲದಲ್ಲಿ ಅವರು ಜೊತೆಗಿದ್ದರು. ಈಗ ನಾವು ಸಹ ಅವರ ಜೊತೆಗೆ ಇರುತ್ತೇವೆ ಎಂದು ಸಚಿವ ಬಿ ಸಿ ಪಾಟೀಲ್ ಸ್ಪಷ್ಟಪಡಿಸಿದರು.
Last Updated : Jun 4, 2020, 5:44 PM IST