ಲಾಕ್ಡೌನ್ನಲ್ಲೇ ಹೆಚ್ಚು, ಅನ್ಲಾಕ್ ನಂತರ ಕಡಿಮೆಯಾದ ಅಪಘಾತಗಳು! - corona lockdown
ಪ್ರಮುಖ ನಗರಗಳಲ್ಲಿ ದಟ್ಟಣೆಯಿಂದ ದುಪ್ಪಟ್ಟು ಸಂಭವಿಸುತ್ತಿದ್ದ ಅಪಘಾತಗಳು ಲಾಕ್ಡೌನ್ ನಂತರ ನಗರದಲ್ಲಿ ಕೊಂಚ ಮಟ್ಟಿಗೆ ತಗ್ಗಿದೆ. ಆದರೆ, ಲಾಕ್ಡೌನ್ನಲ್ಲೇ ಹೆಚ್ಚು ಪ್ರಾಣಾಪಾಯಗಳು ಸಂಭವಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಅಪಘಾತ
By
Published : Oct 7, 2020, 5:29 PM IST
ಬೆಂಗಳೂರು:ಕೊರೊನಾ ಅವಧಿಯಲ್ಲಿ ವಾಹನಗಳು ರಸ್ತೆಗೆ ಇಳಿಯದ ಕಾರಣ ಬೆಂಗಳೂರು ಬಿಕೋ ಎನ್ನುತ್ತಿತ್ತು. ಲಾಕ್ಡೌನ್ ಸಡಿಲಿಕೆ ನಂತರ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಸಂಚಾರ ದಟ್ಟಣೆ ಉಂಟಾಗುತ್ತಿರುವ ನಗರ ಎಂದು ಪಟ್ಟ ಪಡೆದಿರುವ ರಾಜಧಾನಿಯಲ್ಲಿ ಮತ್ತದೇ ಕಾಟ ಶುರುವಾಗಿದೆ.
ದಟ್ಟಣೆಯಿಂದ ದುಪ್ಪಟ್ಟು ಸಂಭವಿಸುತ್ತಿದ್ದ ಅಪಘಾತಗಳು ಲಾಕ್ಡೌನ್ ನಂತರ ನಗರದಲ್ಲಿ ಕೊಂಚ ಮಟ್ಟಿಗೆ ತಗ್ಗಿದೆ. ಆದರೆ, ಲಾಕ್ಡೌನ್ನಲ್ಲೇ ಹೆಚ್ಚು ಪ್ರಾಣಾಪಾಯಗಳು ಸಂಭವಿಸಿವೆ ಎಂದರೆ ನಂಬಲೇಬೇಕು. ವಾಹನ ಸಂಚಾರಕ್ಕೆ ಬ್ರೇಕ್ ಬಿದ್ದಿದ್ದರೂ ಅಪಘಾತ ಸಂಖ್ಯೆ ಹೆಚ್ಚಾಗಿದ್ದು ಹೇಗೆ?
ಪೊಲೀಸರು ಬಹುತೇಕ ಕಡೆ ಚೆಕ್ಪೋಸ್ಟ್ ಅಳವಡಿಸಿ ಅನಗತ್ಯ ಓಡಾಡುವ ಸವಾರರ ಬೈಕ್ಗಳನ್ನು ಜಪ್ತಿ ಮಾಡಿಕೊಳ್ಳತ್ತಿದ್ದರು. ಇನ್ನೆಲ್ಲಿ ಖಾಕಿ ನಮ್ಮ ವಾಹನಗಳನ್ನೂ ವಶಕ್ಕೆ ಪಡೆದುಕೊಳ್ಳುತ್ತದೋ ಎಂಬ ಭಯದಲ್ಲಿ ಅಡ್ಡ ರಸ್ತೆ, ಖಾಲಿ ಇರುವ ರಸ್ತೆ ಬಳಿ ರ‍್ಯಾಷ್ (Rash) ಡ್ರೈವ್ ಮಾಡಿ ಎಷ್ಟೋ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಅನ್ಲಾಕ್ ನಂತರ ಸಂಚಾರಿ ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದು, ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಿ ಬಿಸಿ ಮುಟ್ಟಿಸುತ್ತಿದ್ದಾರೆ. ಮಾಸ್ಕ್ ಹಾಕದಿದ್ದರೂ ದಂಡ ವಿಧಿಸಲಾಗುತ್ತಿದೆ. ಹೀಗಾಗಿ, ಸಂಚಾರ ನಿಯಮದ ಜೊತೆಗೆ ಕೊರೊನಾ ಮಾರ್ಗಸೂಚಿ ಉಲ್ಲಂಘನೆಯಿಂದ ದುಪ್ಪಟ್ಟು ಹಣ ತೆರಬೇಕಾಗುತ್ತದೆ ಎಂಬ ಭೀತಿಯಿಂದ ಸವಾರರು ರಸ್ತೆಗಿಳಿಯಲು ಹಿಂದೇಟು ಹಾಕಿದ್ದರು. ಈ ಮೂಲಕ ಬಹುತೇಕವಾಗಿ ಅಪಘಾತಗಳು ಕಡಿಮೆಯಾಗಿದೆ ಎಂದು ಪೊಲೀಸರೇ ಹೇಳುತ್ತಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಪಘಾತಗಳ ಅಂಕಿ-ಅಂಶ (ಮಾಸಿಕ)
ಅಪಘಾತ
ಮಾರ್ಚ್
ಏಪ್ರಿಲ್
ಮೇ
ಜೂನ್
ಜುಲೈ
ಆಗಸ್ಟ್
ತೀವ್ರ
238
49
161
102
81
51
ಸಾಮಾನ್ಯ
669
142
494
294
104
98
ಸಾವು
281
48
171
171
51
41
ಗಾಯಾಳು
---
217
741
641
341
248
ಒಟ್ಟು
1,188
456
1,567
1,208
577
438
ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸಿದ ಅಪಘಾತಗಳ ಅಂಕಿ-ಅಂಶ (ಮಾಸಿಕ)
ಅಪಘಾತ
ಮಾರ್ಚ್
ಏಪ್ರಿಲ್
ಮೇ
ಜೂನ್ (ಮಾಹಿತಿ ಇಲ್ಲ)
ಜುಲೈ
ಆಗಸ್ಟ್
ತೀವ್ರ
210
56
162
---
62
42
ಸಾಮಾನ್ಯ
571
138
428
---
328
228
ಸಾವು
241
67
172
---
72
52
ಗಾಯಾಳು
1,070
254
738
---
538
300
ಒಟ್ಟು
2,092
515
1,500
---
1,000
622
ಜಿಲ್ಲಾ ರಸ್ತೆಗಳಲ್ಲಿ ಸಂಭವಿಸಿದ ಅಪಘಾತಗಳ ಅಂಕಿ-ಅಂಶ (ಮಾಸಿಕ)
ಅಪಘಾತ
ಮಾರ್ಚ್
ಏಪ್ರಿಲ್
ಮೇ
ಜೂನ್
ಜುಲೈ
ಆಗಸ್ಟ್
ತೀವ್ರ
266
94
249
249
148
103
ಸಾಮಾನ್ಯ
1,074
387
772
772
542
301
ಸಾವು
241
211
253
201
102
59
ಗಾಯಾಳು
1,070
885
1,137
1,137
---
---
ಒಟ್ಟು
2,651
1,577
2,411
2,359
792
463
ಸಿಲಿಕಾನ್ ಸಿಟಿ ಮಾತ್ರ ನೋಡುವುದಾದರೆ ಜನವರಿಯಿಂದ ಜೂನ್ವರೆಗೆ 291 ರಸ್ತೆ ಅಪಘಾತಗಳು, 1,415 ಗಾಯಗೊಂಡವರು, 309 ಮಂದಿ ಸಾವಿಗೀಡಾಗಿದ್ದಾರೆ. ಲಾಕ್ಡೌನ್ ಸಡಿಲಿಕೆ ನಂತರ ನಗರದಲ್ಲಿ ಜೂನ್ನಲ್ಲಿ 47 ಮೃತಪಟ್ಟಿದ್ದರೆ, 170 ಮಂದಿ ಗಾಯಗೊಂಡಿದ್ದಾರೆ. ಅದೇ ರೀತಿ, ಜುಲೈನಲ್ಲಿ 48 ಸಾವು, 152 ಗಾಯಾಳು, ಆಗಸ್ಟ್ನಲ್ಲಿ 50 ಸಾವು, 198 ಗಾಯಗೊಂಡಿದ್ದಾರೆ.
ಬೆಂಗಳೂರಿನಲ್ಲಿ ಕೋರಮಂಗಲ, ಹೆಬ್ಬಾಳ, ಯಲಹಂಕ, ಮೈಸೂರು ರಸ್ತೆ, ಕೆ.ಆರ್.ಪುರ, ಬಳ್ಳಾರಿ ರಸ್ತೆ, ಸಿಲ್ಕ್ ಬೋರ್ಡ್ನಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುತ್ತಿದೆ. ಹಾಗೆಯೇ ರಾಜ್ಯದ ಹಲವು ನಗರಗಳಲ್ಲಿ ಅಪಘಾತವಾಗುವ ರಸ್ತೆಗಳನ್ನು ಬ್ಲಾಕ್ ಸ್ಪಾಟ್ ಗುರುತಿಸಿ ಆ ಸ್ಥಳಕ್ಕೆ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಲಾಗುತ್ತದೆ. ಹೊಸ ತಂತ್ರಜ್ಞಾನ ಬಳಸಿ ಅಪಘಾತಗಳ ಕಡಿವಾಣಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ.